ಒಬ್ಬ ಮನುಷ್ಯನಿಗೆ Basic discipline ಇಲ್ಲದಿದ್ರೆ ಆತ ಎಷ್ಟು ಪ್ರತಿಭಾವಂತ ಆಗಿದ್ರು, ಬುದ್ಧಿವಂತ ಆಗಿದ್ರು ಜೀವನ ಹಾಳಾಗುತ್ತದೆ ಅನ್ನೋದಕ್ಕೆ ಉದಾಹರಣೆ ಮಠ ಗುರುಪ್ರಸಾದ್.!
Basic discipline ಗಳಲ್ಲಿ ಮುಖ್ಯವಾಗೋದು
Habits discipline (ಹವ್ಯಾಸಗಳಲ್ಲಿ ಶಿಸ್ತು),
Thought discipline ( ಚಿಂತನೆಗಳಲ್ಲಿ ಶಿಸ್ತು),
financial discipline (ಹಣಕಾಸಿನ ಶಿಸ್ತು),
Behavioural discipline (ನಡತೆಯಲ್ಲಿನ ಶಿಸ್ತು),
perspective discipline ( ನೈಜತೆಯ ಶಿಸ್ತು).
ಈ ಮನುಷ್ಯ ಸಾವಿರಾರು ಪುಸ್ತಕ ಓದಿದ್ದಾನೆ, ಅತ್ಯುತ್ತಮ ಬರಹಗಾರ, ಕಲಾನಿಪುಣ, ಆದರೆ Basic discipline ಕಾಣದೇಹೋಯ್ತು. ಕುಡಿತ ವಿಪರೀತವಾಯ್ತು, ಎದುರಿಗಿರುವವರು ದಡ್ಡರೇ ಇರಬಹುದು, ಈತ ಅವರಿಗಿಂತ ಬುದ್ಧಿವಂತನೇ ಇರಬಹುದು, ಆದರೆ ಅದನ್ನು ಮ್ಯಾನೇಜ್ ಮಾಡಲುಬಾರದೇ ಹೋಯ್ತು. ನಮಗೆ ಹೊಂದಾಣಿಯೆಯಾಗುವಂತೆ ಜಗತ್ತು ನಡೆಯೋದಿಲ್ಲಾ, ನಾವು ಜಗತ್ತಿಗೆ, ಇಲ್ಲಿನ ರೀತಿರಿವಾಜುಗಳಿಗೆ ಬಹುಪಾಲು ಹೊಂದಿಕೊಳ್ಳಬೇಕು ಎಂಬ ಸರಳ ಸತ್ಯ ಅರಿವಾಗುವಷ್ಟರಲ್ಲಿ ಆತ ಹಗ್ಗದಲ್ಲಿ ನೇತಾಡಿದ್ದ. ಏನೋ ಸಮಸ್ಯೆ ಆಗ್ತಿದೆ ಅನ್ನಿಸಿದಾಗ Basic discipline ಗಳ ಬಗೆಗೆ ಮತ್ತೆ ಯೋಚಿಸಬೇಕು, ಎಡವುತ್ತಿರೋದೆಲ್ಲಿ ಅಂತ.!
ಮೊನ್ನೆಯ ಯಶಸ್ಸು ನೆನ್ನೆಯ ನ್ಯೂಸ್ ಪೇಪರಿನಲ್ಲಿನ ಹೆಡ್ ಲೈನ್ ಆಗಿರಬಹುದು, ಆದರೆ ಇವತ್ತಿಗದು ರದ್ದಿ! ಯಶಸ್ಸು ಅನ್ನೋದು ನಿತ್ಯನಿರಂತರದ ಹರಿವು. ಎಂದೋ ಸಾಧಿಸಿದ್ದೇ ಚಿರನೂತನವಲ್ಲಾ, ಅಂದಿನದು identity ಆದರೆ ಇಂದಿನದು, ಮುಂದಿನದ್ದಕ್ಕೆ ಮತ್ತೆ ಶ್ರಮ ಬೇಕು. ಎದುರಿಗಿರೋದು ದಡ್ಡರೋ, ಹೆಡ್ಡರೋ ನಮ್ಮ ನಡತೆ ಸರಿಯಾಗಿರಬೇಕು. Basic discipline ಬಗೆಗೆ ಸದಾ ಎಚ್ಚರವಾಗಿರಬೇಕು.!
ನಮ್ಮದೇ ಸಂಬಂಧಗಳ ಜೊತೆಗೆ ಬಹುಪ್ರೀತಿಯಿಂದ ಇರಬೇಕು, ಸಣ್ಣಪುಟ್ಟ ವ್ಯತ್ಯಾಸಗಳನ್ನು ಅರ್ಥಮಾಡಿಕೊಂಡು, ಹೊಂದಿಕೊಳ್ಳಬೇಕು, ಅದಕ್ಕೆ Perspective and behavioral discipline ಇರಬೇಕು. ನಮ್ಮವರನ್ನು ಅವರ ಕೈಕಾಲು ಹಿಡಿದಾದ್ರು ಜೊತೆಗೆ ಉಳಿಸಿಕೊಳ್ಳಬೇಕು, Loyalty ಅನ್ನೋದು ಸುಮ್ಮನೆ ಸಿಗೋದಿಲ್ಲಾ! ಅದಕ್ಕೆ ತ್ಯಾಗ, ಶ್ರಮ, ಶ್ರದ್ಧೆ ಇರಬೇಕು! ಬುದ್ಧಿವಂತಿಕೆ ಅನ್ನೋದು ನಮ್ಮಲ್ಲಿನ ವಿಶೇಷತೆಗಳಲ್ಲಿ ಒಂದಾಗಬೇಕೆ ಹೊರತು ಅದೊಂದು ಮಾತ್ರವೇ ವಿಶೇಷತೆಯಾಗಿ ಉಳಿದ Basic and Fundamental ವಿಷಯಗಳು ಒಳಗೊಳ್ಳದಾಗ ವ್ಯಕ್ತಿ ಏನಾಗಬಹುದು ಅನ್ನೋ ಬಹಳಷ್ಟು ಜನರ ನಡುವೆ ಮತ್ತೊಂದು ಉದಾಹರಣೆಯಾಗಿ ನಿಲ್ಲೋದು ಗುರುಪ್ರಸಾದ್.
ಮಠ ಚಿತ್ರದ ಭಿಕ್ಷುಕ ಪಾತ್ರಧಾರಿಯ ಕೊನೆಗೆ ಪರಿವರ್ತನೆಯನ್ನು ಮತ್ತೊಮ್ಮೆ, ಮಗದೊಮ್ಮೆ ಗುರುಪ್ರಸಾದ್ ನೋಡಬೇಕಿತ್ತು, ಎದ್ದೇಳು ಮಂಜುನಾಥದಲ್ಲಿ ಮನೆಗೊಬ್ಬ ಮಂಜುನಾಥ ಇರ್ತಾನೆ, ಹಾಗಾಬೇಡಿ ಎನ್ನುತ್ತಲೇ ಗುರುಪ್ರಸಾದ್ ಅದೇ ಮಂಜುನಾಥನ ನೈಜ ಉದಾಹರಣೆ ಆಗಿಹೋದರು! ಪಾತ್ರ ಜೀವಪಡೆದುಬಿಟ್ಟಿತ್ತು. ಮಾತಾಡೋರನ್ನು ತಡೆಯಲಾಗದು, ಒಳ್ಳೆಯದೋ, ಕೆಟ್ಟದ್ದೋ ಮಾತಾಡುತ್ತಾರೆ, ಬದುಕಿದ್ದರೂ ಮಾತಾಡುತ್ತಾರೆ, ಸತ್ತರೂ ಮಾತಾಡುತ್ತಾರೆ. ಆದರೆ ಅವರಾಡುವ ಮಾತಿಗೆ ಒಂದು ಲೆಕ್ಕಾಚಾರ ಬರುವಂತೆ ಬದುಕಬೇಕು, "ಸತ್ತೆಮ್ಮೆಗೆ ಕೊಳಗ ಹಾಲು" ಅಂತ ಗಾದೆ. ಸತ್ತ ಎಮ್ಮೆ ಕೊಳಗ ಹಾಲು ಕೊಡ್ತಿತ್ತಂತೆ ಅಂತ ಜನರು ಮಾತಾಡಿಕೊಳ್ಳುತ್ತಾರೆ, ಹಾಲೇನೋ ಕೊಡುತ್ತಿತ್ತು, ಆದರೆ ಗುಮ್ಮುತ್ತಿತ್ತು, ಒದೆಯುತ್ತಿತ್ತು, ಸಿಗದಂತೆ ತಪ್ಪಿಸಿಕೊಳ್ಳುತ್ತಿತ್ತು, ಹಠ ಜಾಸ್ತಿ ಇತ್ತು, Basic discipline ಇರಲಿಲ್ಲ, ಸತ್ತು ಹೋಯ್ತು! ಪಾಪ ಕಂಣ್ರೀ ಅಂತ ಜನರು ಹೇಳಿದ್ರೆ, ಒದೆಸಿಕೊಂಡವರು "ಸಾಯ್ತಾ ನೆಮ್ಮದಿಯಾಯ್ತು ಈಗ" ಅನ್ನುತ್ತಾ ಅದು ಒದೆದ ಜಾಗಕ್ಕೆ ಮುಲಾಮು ಹಚ್ಚಿಕೊಳ್ಳುತ್ತಿದ್ದಾರೆ. ಅದಕ್ಕೆ ಒದೆಯೋಕೆ, ಗುಮ್ಮೋಕೆ ಮುಂಚೆ Basic discipline ಇರಬೇಕು.
ಒಮ್ಮೊಮ್ಮೆ ನಾವು ದಡ್ಡರು, waste body ಗಳು ಅಂದುಕೊಂಡವರು ಸಹ ಯಶಸ್ವಿಯಾಗಿಬಿಡುತ್ತಾರೆ, ನಯವಂಚಕರು ಸಹ, ಕಾರಣ ಅವರಲ್ಲಿನ Basic discipline. ಸಮಾಜ ಜಗತ್ತು ಹೇಗೆ ನಡೆಯುತ್ತಿದೆ, ಇಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬ ಎಚ್ಚರಿಕೆ ಇರೋರು ಅವರು. ಬುದ್ವಂತ್ರು ತಮ್ಮದೇ perspective ಇಂದಲೇ ಜಗತ್ತು ನೋಡುತ್ತಾ, Basic discipline ಇಲ್ಲದೇ ತರಲೆ-ಪುರಲೆಯಾಗಿ ತಮ್ಮದೇ ಅಪರಾಧಗಳಿಂದ ನಾಶವಾಗುತ್ತಾರೆ.
ಸಮಾಜದ ಬಗೆಗೆ ವಿಪರೀತವಾಗಿ ಯೋಚಿಸೋದು ಬಿಡಬೇಕು. ಉಪಲಬ್ಧವಿರುವ ಮಾನವನ ಇಪ್ಪತ್ತು ಸಾವಿರ ವರ್ಷಗಳ ಇತಿಹಾಸದಲ್ಲಿ ಈ ಸಮಾಜ ಬಹಳಷ್ಟು ಬದಲಾವಣೆಗಳನ್ನು ಕಂಡಿದೆ, ಸಾವಿರಾರು ಯುದ್ಧಗಳನ್ನು ಕಂಡಿದೆ, ನೂರಾರು ಸಾಂಕ್ರಾಮಿಕ ರೋಗಗಳನ್ನು ಕಂಡಿದೆ. ಬರಗಾಲ, ಪ್ರವಾಹ, ಸುನಾಮಿ.. ಏನು ಕಂಡಿಲ್ಲಾ. ಮಂತ್ರ, ತಂತ್ರ, ಯಂತ್ರ ಎಲ್ಲವನ್ನು ಕಂಡಿದೆ. ಅದಕ್ಕೆ survival and sustain ಚೆನ್ನಾಗಿ ಗೊತ್ತಿದೆ. ಏಕೆಂದರೆ ಅದು ಸಮಸ್ಯೆಗಳನ್ನು ಕಾಣುತ್ತಿರೋದು ಇದೆ ಮೊದಲಲ್ಲ. ಅದಕ್ಕೆ ಇಲ್ಲಿನ ನಮ್ಮ survival and sustainability ಮುಖ್ಯವಾಗಬೇಕು. ನಮ್ಮೆಲ್ಲಾ ಗುಣವಿಷೇಶತೆಗಳು ಅದಕ್ಕೆ ಅನುಗುಣವಾಗಿ ಇರಬೇಕು, ಅದಕ್ಕೆ Basic discipline ಸರಿಯಾಗಿರಬೇಕು.
ಎಲ್ಲರಿಂದ ಕಲಿಯೋಣಾ, ಜಾಗರೀಕರಾಗಿರೋಣಾ. Basic disciplines ಬೆಳೆಸಿಕೊಳ್ಳೋಣಾ. ಬೆಳೆಯೋಣಾ, ಸಿಗೋಣಾ.
- Akash Mandya