ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕಾಗವಾಡ ಮತಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರಾದ ರಾಜು ಕಾಗೆ ಅವರನ್ನು ಬೇಟಿ ಮಾಡಿ ಸನ್ಮಾನಿಸಿ ಗೌರವಿಸಿ ಮನವಿ ಸಲ್ಲಿಸಿ ಕಾಗವಾಡ ಮತಕ್ಷೇತ್ರದ ಹಾಗೂ ಅಥಣಿ ತಾಲೂಕಿಗೆ ಸಂಬಂಧಪಟ್ಟ ಮದಬಾವಿ ಗ್ರಾಮ ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದ್ದು ಹತ್ತುಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮ ಆದರೆ ಸುತ್ತಲಿರುವ ಸಣ್ಣ ಹಳ್ಳಿಯಲ್ಲಿ ಸರ್ಕಾರಿ ಕನ್ನಡ ಪ್ರೌಢ ಶಾಲೆಗಳಿವೆ ಮದಭಾವಿ ಗ್ರಾಮದಲ್ಲಿ ಇಲ್ಲದಿರುವುದು ವಿಷಾದೀಯ ಸಂಗತಿ ಸಾಕಷ್ಟು ಬಡ ಮಕ್ಕಳು ಇದ್ದು ಖಾಸಗಿ ಶಾಲೆಗಳಿಗೆ ಹಣ ತುಂಬಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಸರ್ಕಾರಿ ಕನ್ನಡ ಪ್ರೌಢಶಾಲೆ ಮಂಜುರಾತಿ ಗೊಳಿಸಿ ಪ್ರಾರಂಭಿಸಬೇಕೆಂದು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ ನಾಯಿಕ ಒತ್ತಾಯ ಮಾಡಿದ್ದಾರೆ.
ಮನವಿ ಸ್ವೀಕರಿಸಿ ಬಡ ಮಕ್ಕಳ ಶಿಕ್ಷಣ ಹಿತ ದೃಷ್ಟಿಯಿಂದ ಶೀಘ್ರದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಮಂಜೂರು ಗೊಳಿಸಲಾಗುವುದು ಎಂದು ಹೇಳಿದರು
ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಅಥಣಿ ಘಟಕದ ವ್ಯವಸ್ಥಾಪಕರಿಗೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರಿಗೆ
ಚಿಕ್ಕಟ್ಟಿ ಗ್ರಾಮದಲ್ಲಿ ಕುದುರೆ ತೋಟ ಶ್ರೀ ಶಾರದಾ ಮಾತಾ ಬುದ್ಧಿಮಾಂದ್ಯ ಮಕ್ಕಳ ಶಾಲೆ ಇದ್ದು ಮಕ್ಕಳಿಗೆ ಮತ್ತು ಪಾಲಕರಿಗೆ ಬಂದು ಹೋಗುತ್ತಾರೆ ಅವರ ಅನುಕೂಲಕ್ಕಾಗಿ ಬಸ್ ನಿಲ್ಲಿಸಲು ಹಾಗೂ ಅಥಣಿಯಿಂದ ತಾಂವಶಿ ಗ್ರಾಮಕ್ಕೆ ಬಸ್ ಸರಿಯಾದ ಸಮಯಕ್ಕೆ ತಲುಪುವ ವ್ಯವಸ್ಥೆ ಮಾಡುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅನಿಲ್ ಭಾಮನೆ ,ಶಿವಾನಂದ ನಾವಿ ಕಿರಣ ಪಾಟೋಲಿ,ಎಂ ಶರ್ಮ ಅನೇಕ ಮುಖಂಡರು ಉಪಸ್ಥಿತರಿದ್ದರು .
ವರದಿ ಮಹೇಶ್ ಶರ್ಮಾ