logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಅಥಣಿಗೆ ಆಗಮಿಸಿದ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಅವರನ್ನೂ ಭೇಟಿ ಮ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಅಥಣಿಗೆ ಆಗಮಿಸಿದ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಅವರನ್ನೂ ಭೇಟಿ ಮಾಡಿ ಸನ್ಮಾನಿಸಿ ಗೌರವಿಸಿ
ಮನವಿ ಸಲ್ಲಿಸಿ ಕಾಗವಾಡ ಮತಕ್ಷೇತ್ರದ ಹಾಗೂ ಅಥಣಿ ತಾಲೂಕಿಗೆ ಸಂಬಂದ ಪಟ್ಟ ಮದಭಾವಿ ಗ್ರಾಮ ಇದು ಜಿಲ್ಲಾ ಪಂಚಾಯತ ಕ್ಷೇತ್ರವಾಗಿದ್ದು ಹತ್ತುಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮ ಆದರೆ ಸುತ್ತಲಿರುವ ಸಣ್ಣ ಹಳ್ಳಿಯಲ್ಲಿ ಸರಕಾರಿ ಕನ್ನಡ ಪ್ರೌಢ ಶಾಲೆ ಗಳಿವೆ ಮದಭಾವಿ ಗ್ರಾಮದಲ್ಲಿ ಇಲ್ಲದಿರುವುದು ವಿಷಾದನೀಯ ಸಂಗತಿ ಸಾಕಷ್ಟು ಬಡ ಮಕ್ಕಳು ಇದ್ದು ಖಾಸಗಿ ಶಾಲೆಗಳಿಗೆ ಹಣ ತುಂಬಲು ಆಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಬಡ ಮಕ್ಕಳ ಹಿತ ದೃಷ್ಟಿಯಿಂದ ಮದಭಾವಿ ಗ್ರಾಮದಲ್ಲಿ ಸರಕಾರಿ ಕನ್ನಡ ಪ್ರೌಢ ಶಾಲೆ ಮಂಜೂರಾತಿ ಗೊಳಿಸಿ ಪ್ರಾರಂಭಿಸಬೇಕೆಂದು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ಅಧ್ಯಕ್ಷ ರಾದ ಪ್ರವೀಣ ನಾಯಿಕ ಒತ್ತಾಯ ಮಾಡಿದ್ದಾರೆ.

ಮನವಿ ಸ್ವೀಕರಿಸಿ ಶೀಘ್ರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮಂಜೂರು ಗೊಳಿಸಲಾಗುವುದು ಎಂದು ಹೇಳಿದರು.

ಅಥಣಿ ತಾಲೂಕಿನ ಎಲ್ಲಾ ಹಳ್ಳಿಗಳ ರಸ್ತೆ ಹದಿಗೆಟ್ಟಿವೆ ಮಹಿಳೆಯರಿಗೆ ಹೈಟೆಕ್ ಶೌಚಾಲಯ ನಿರ್ಮಾಣ ಸಾರ್ವಜನಿಕರ ವಲಯದಲ್ಲಿ ಸ್ವಚ್ಛತೆ ಇರುವುದಿಲ್ಲ ಶಿವಯೋಗಿ ನಗರ ಬೀದಿ ದೀಪಗಳ ಸರಿಯಾಗಿ ಇರುವುದಿಲ್ಲ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು ಎಂದು ಶರಣಪ್ಪಾ ಶಿಂಧೆ ಹೇಳಿದರು

ಇದೇ ಸಂದರ್ಭದಲ್ಲಿ ಕಿರಣ ಪಾಟೋಲೆ,ಅನಿಲ ಭಾಮನೆ ,ಶಿವಾನಂದ ನಾವಿ , ಎಂ ಶರ್ಮ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ ಮಹೇಶ್ ಶರ್ಮಾ

15
302 views

Comment