logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ನಿಜವಾದ ಪತ್ರಕರ್ತ ಅಂದ್ರೆ ಹೀಗಿರಬೇಕು* 1) ಪ್ರಕರ್ತರು ಮೊದಲು ಯಾವುದೇ ಪಕ್ಷದ ಪರವಾಗಿರಬಾರದು. 2) ಪತ್ರಕರ್ತರು ಹಣ ಆಮೀಷಗಳಿಗೆ ಬಲಿಯಾಗಬಾರದು. 3) ಪತ್ರಕರ್ತರು ಪಕ್ಷಾತೀತವಾಗಿ ವ

*ನಿಜವಾದ ಪತ್ರಕರ್ತ ಅಂದ್ರೆ ಹೀಗಿರಬೇಕು*

1) ಪ್ರಕರ್ತರು ಮೊದಲು ಯಾವುದೇ ಪಕ್ಷದ ಪರವಾಗಿರಬಾರದು.
2) ಪತ್ರಕರ್ತರು ಹಣ ಆಮೀಷಗಳಿಗೆ ಬಲಿಯಾಗಬಾರದು.
3) ಪತ್ರಕರ್ತರು ಪಕ್ಷಾತೀತವಾಗಿ ವರದಿ ಮಾಡಬೇಕು.
4) ಪತ್ರಕರ್ತರು ಯಾವುದೇ ನಾಯಕರ ಮುಲಾಜಿಗೆ ಒಳಗಾಗಬಾರದು.
5) ಪತ್ರಕರ್ತರು ಮೊದಲು ರಾಜಕೀಯ ಮಾಡಬಾರದು.
6) ಪತ್ರಕರ್ತರಲ್ಲಿ ಕರ್ತವ್ಯ ನಿಷ್ಠೆ ಇರಬೇಕು.
7) ಪತ್ರಕರ್ತರು ಯಾವುದೇ ವಿಷಯವನ್ನು ಪ್ರಕಟಿಸುವ ಮುನ್ನ ಸಂಪೂರ್ಣವಾಗಿ ಸತ್ಯಾಸತ್ಯತೆ ಕಂಡು ಕೊಂಡು ಸಾಕ್ಷಿ ಪುರಾವೆ ಒದಗಿಸಿ ಬರೆಯುವಂತಿರಬೇಕು.
8) ಪತ್ರಕರ್ತನಿಗೆ ಧೈರ್ಯ ಮತ್ತು ತಾಳ್ಮೆ ಬಹಳ ಮುಖ್ಯ.
9) ಪತ್ರಕರ್ತನಿಗೆ ಬ್ಲಾಕ್ ಮೇಲ್ ಮಾಡುವ ತಂತ್ರಗಾರಿಕೆ ಇರಬಾರದು.
10) ಪತ್ರಕರ್ತನು ಮದ್ಯಪಾನ ಮಾಡಿ ಅಧಿಕಾರಿಗಳಿಗೆ ಭೇಟಿ ಮಾಡಬಾರದು.
11) ಪತ್ರಕರ್ತನು ನಾಡಿನ ಒಳಿತಿಗಾಗಿ ಸಮಸ್ತ ಸಮಾಜದ ಒಳಿತಿಗಾಗಿ ಹಿತಮಿತವಾಗಿ ವರದಿ ಮಾಡುವಂತವನಾಗಿರಬೇಕು
12) ಪತ್ರಕರ್ತನು ಯಾವುದೇ ಜಾತಿ ಮತ ಭೇದವಿಲ್ಲದೆ ಸಮಾನತೆಗಾಗಿ ಚಿಂತನೆ ಮಾಡಬೇಕು.
13) ಪತ್ರಕರ್ತನು ಯಾವತ್ತೂ ನಾಡಿನಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಗಾಗಿ ಪ್ರಯತ್ನಿಸಬೇಕು.
14)ಪತ್ರಕರ್ತನು ಸರ್ಕಾರದ ಅಧಿಕಾರಿಗಳ ಜೊತೆಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು.
15) ಪತ್ರಕರ್ತನು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಪಾರದರ್ಶಕವಾಗಿ ನಾಡಿನ ಸಮಸ್ತ ಜನತೆಗೆ ಅರಿವು ಮೂಡಿಸುವ ಮತ್ತು ಮುಟ್ಟಿಸುವ ಕಾರ್ಯ ಮಾಡಬೇಕು.
16) ಪತ್ರಕರ್ತನು ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸುವಂತೆ ಎಚ್ಚರಿಸುವ ಸುದ್ದಿಗಳು ಮಾಡುತ್ತಿರಬೇಕು.
17) ಪತ್ರಕರ್ತನು ಭ್ರಷ್ಟಾಚಾರ ಮಾಡುವವರಿಗೆ ಸಿಂಹ ಸ್ವಪ್ನವಾಗಿ, ಯಾರಿಗೂ ಅಂಜದೇ,ಅಳುಕದೇ ದಾಖಲೆ ಮತ್ತು ಭಾವಚಿತ್ರಗಳೊಂದಿಗೆ ಸುದ್ದಿ ಮಾಡಬೇಕು.
18)ಪತ್ರಕರ್ತನಿಗೆ ಯಾರನ್ನು ಸಹ ಹಣಕ್ಕಾಗಿ ಪೀಡಿಸುವ ಹಾಗೂ ಬ್ಲಾಕ್ ಮೇಲ್ ಮಾಡುವ ಛಾಳಿ ಇರಬಾರದು.
19)ಪತ್ರಕರ್ತನು ನಮ್ಮ ವಾರ್ತಾ ಇಲಾಖೆಯ ಉದ್ದೇಶಗಳು ಮತ್ತು ನಿಯಮಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು.
20) ಪತ್ರಕರ್ತನು ತನ್ನ ಪತ್ರಿಕೆಯ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲ ದಾಖಲೆಗಳನ್ನು ಸರಿಯಾಗಿ ಗಮನಿಸಿ ಕಾರ್ಯ ನಿರ್ವಹಿಸಬೇಕು.
21) ಪತ್ರಕರ್ತನು ಪ್ರತಿ ವರ್ಷದಂತೆ ಪತ್ರಿಕೆಯ ಪ್ರತಿಗಳು ಅಡಿಟ್ ರಿಪೋರ್ಟ್, ಐಡಿ ಕಾರ್ಡ್,ಕಡ್ಡಾಯವಾಗಿ ಸರಿಯಾಗಿ ಪಾಲಿಸಬೇಕು.

ಡಾ. ಎಸ್ ಎಸ್ ಪಾಟೀಲ್ ಸಂಪಾದಕರು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ
9611766539

5
576 views

Comment