ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ 23 ವರ್ಷ ಉಗಾರ ಕೆ ಇ ಬಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಇವತ್ತು ನಿವೃತ್ತಿಯನ್ನು ರತ್ನಮಾಲಾ ಶ್ರೀಶೈಲ ಪಲಸಮಠ ಅವರು ಹೊಂದಿರು
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ 23 ವರ್ಷ ಉಗಾರ ಕೆ ಇ ಬಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಇವತ್ತು ನಿವೃತ್ತಿಯನ್ನು ರತ್ನಮಾಲಾ ಶ್ರೀಶೈಲ ಪಲಸಮಠ ಅವರು ಹೊಂದಿರುವ ನಿಮಿತ್ಯ ಕೆ ಇ ಬಿ ನೌಕರರ ಸಂಘಟನೆಯ ವತಿಯಿಂದ ಬೀಳ್ಕೊಡುವ ಹಾಗೂ ಸನ್ಮಾನ ಔತಣ ಕೂಟ ಏರ್ಪಡಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮೈಶಾಳ ಗ್ರಾಮದ ಡಾ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ವಹಿಸಿ ಜಗತ್ತಿಗೆ ಸೂರ್ಯ ಚಂದ್ರ ಬೆಳಕು ನೀಡುವ ಮೊದಲನೇ ದೇವರು ಆದರೆ. ಎರಡನೇ ದೇವರು ಲೈನಮ್ಯಾನ. ದಿನ ನಿತ್ಯ ಕಾರ್ಯ ನಿರ್ವಹಣೆ ಮಾಡುವ ವ್ಯಕ್ತಿಗೆ ವಿದ್ಯುತ ಅವಶ್ಯಕತೆ ತಮ್ಮ ಜೀವದ ಅಂಜಿಕೆ ಇದ್ದರೂ ಅಂಜಿಕೆ ಇಲ್ಲಾ ಅನ್ನುವ ಹಾಗೆ ಪ್ರಾಮಾಣಿಕ ಕಾರ್ಯನಿರ್ವಹಿಸುತ್ತಿರುವುದು. ಶ್ಲಾಘಣಿಯವಾದದ್ದು ಎಂದು ಹೇಳಿ ಎಲ್ಲರಿಗೂ ಒಳ್ಳೆಯದು ಆಗಲಿ
ಅಂತ ಆಶೀರ್ವಾದ ಮಾಡಿದರು.
ಸನ್ಮಾನ ಸ್ವೀಕರಿಸಿ ನಿವೃತ್ತಿ ಹೊಂದಿರುವ ರತ್ನಮಾಲಾ ಪಲಸಮಠ ನನ್ನ ಪತಿ ನಿಧನ ಹೊಂದಿದ ನಂತರ ನನಗೆ ಇಲಾಖೆ ಕೆಲಸಕ್ಕೆ ತಗೆದುಕೊಂಡು 23 ವರ್ಷ ಸೇವೆ ಒಂದೆ ಕಾರ್ಯಾಲಯದಲ್ಲಿ ಪ್ರಾಮಾಣಿಕ ಕಾರ್ಯನಿರ್ವಹಿಸಿದ್ದೇನೆ ಅದಕ್ಕೆ ಎಲ್ಲಾ ಕಿರಿಯ ಹಿರಿಯ ಅಧಿಕಾರಿಗಳು ಸಹಕಾರ ನೀಡಿದಕ್ಕೆ ಧನ್ಯವಾದಗಳು ಅರ್ಪಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಅಧಿಕಾರಿ ಮಕಾಣಿ ಹಾಗೂ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಮುಖಂಡರಾದ ಪ್ರವೀಣ ನಾಯಿಕ ಉಗಾರ,ಅಥಣಿ, ಕಾಗವಾಡ, ಐನಾಪುರ, ಐಗಳಿ ಇಲಾಖೆಯ ಕಿರಿಯ ಹಿರಿಯ ಅಧಿಕಾರಿಗಳು ಹಾಗೂ ಜೀವನಕುಮಾರ ಗಳತಗಿಮಠ ಉಪಸ್ಥಿತರಿದ್ದರು.ಎಲ್ಲಾ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.