ಬೆಳಗಾವಿ ಜಿಲ್ಲೆ
ಬೈವಹೊಂಗಲ ತಾಲೂಕಿನಲ್ಲಿ
ಗ್ರಂಥಾಲಯ ಪಿತಾಮಹ ಮೂರ್ತಿಗಳ ವಿತರಣೆ.... ಗೀತಾ.ಎಸ.ಗುಜನಾಳ.ಮದನಭಾವಿ ಗ್ರಾಮದ ಇವರು 2023-2024 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆ ಬೈವಹ
ಬೆಳಗಾವಿ ಜಿಲ್ಲೆ
ಬೈವಹೊಂಗಲ ತಾಲೂಕಿನಲ್ಲಿ
ಗ್ರಂಥಾಲಯ ಪಿತಾಮಹ ಮೂರ್ತಿಗಳ ವಿತರಣೆ.... ಗೀತಾ.ಎಸ.ಗುಜನಾಳ.ಮದನಭಾವಿ ಗ್ರಾಮದ ಇವರು 2023-2024 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆ ಬೈವಹೊಂಗಲ ತಾಲೂಕಿನಲ್ಲಿ ಶಿಕ್ಷಣ ಪೌಂಡೇಶನ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸಿ ಗ್ರಂಥಪಾಲಕರ ಪ್ರೀತಿಗೆ ಪಾತ್ರರಾಗಿ , ಇವರು ಗ್ರಂಥಾಲಯ ಮತ್ತು ಗ್ರಂಥಪಾಲಕರ ಸವಿನೆನಪಿನ ಕಾಣಿಕೆಯಾಗಿ ಗ್ರಂಥಾಲಯ ಪಿತಾಮಹರಾದ ಡಾ||ಎಸ.ಆರ.ರಂಗನಾಥನ ಅವರ ಮೂರ್ತಿಗಳನ್ನು ಭಾಂವಿಹಾಳ, ಬೆಳವಡಿ, ದೊಡವಾಡ, ಉಡಿಕೇರಿ, ಗೋವನಕೊಪ್ಪ, ಸಂಪಗಾಂವ, ಚಿಕ್ಕಬಾಗೇವಾಡಿ, ಮುರಕೀಭಾಂವಿ, ಆನಿಗೋಳ, ವಕ್ಕುಂದ , ಗ್ರಂಥಾಲಯಗಳಿಗೆ ಮೂರ್ತಿಗಳನ್ನು ವಿತರಿಸಲಾಯಿತು. ಬೈಲಹೊಂಗಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಶ್ರೀ.ಸಂಜಯ.ಜುನ್ನೂರ ಅವರ ಸಹಮತದೊಂದಿಗೆ ವ್ಯವಸ್ಥಾಪಕರು ಜಿ.ಎಸ.ಬಡೆಮ್ಮಿ, ಯೋಜನಾಧಿಕಾರಿ.ಆರ್.ಎಸ್.ಕಡೇಮನಿ, ದ್ವೀತೀಯ ದರ್ಜೇ ಲೆಕ್ಕ ಸಹಾಯಕಿ ಕವಿತಾ ಇವರೆಲ್ಲರ ಮೂಲಕ ಮೂರ್ತಿಗಳನ್ನು ವಿತರಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸಲಾಯಿತು.ಗ್ರಂಥಪಾಲಕರಾದ ಸಿ.ಎಸ.ಕಳಸನ್ನವರ ಇವರಿಂದ ಸ್ವಾಗತ ಭಾಷಣ, ಗಂಗಾಂಬಿಕಾ ಕಡಬಿ ಮತ್ತು ಗೀತಾ ಉಪ್ಪಾರ ಇವರಿಂದ ಪ್ರಾರ್ಥನಾ ಗೀತೆ, ಎಮ.ಎಸ.ಕೆಂಜೇಡಿಮಠ ಇವರಿಂದ ವಂದನಾರ್ಪಣೆ ಜರುಗಿತು.ಗ್ರಂಥಪಾಲಕರೆಲ್ಲರೂ ಗೀತಾ.ಎಸ.ಗುಜನಾಳ ಇವರಿಗೆ ಸನ್ಮಾನ ಮಾಡುವ ಮೂಲಕ ಧನ್ಯವಾದ ತಿಳಿಸಿದರು.
ಬೈಲಹೊಂಗಲ ತಾಲೂಕಿನ ಗ್ರಂಥಾಲಯಗಳಿಗೆ ಡಾ. ಎಸ್.ಆರ್. ರಂಗನಾಥನ್ ಮೂರ್ತಿ ವಿತರಣೆ
ಬೈಲಹೊಂಗಲ:
ಶಿಕ್ಷಣ ಫೌಂಡೇಶನ್ ಸಂಸ್ಥೆಯ ಮೂಲಕ ತಾಲೂಕಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಗೀತಾ ಎಸ್. ಗುಜನಾಳ (ಮದನಭಾವಿ) ಅವರು ತಮ್ಮ ಸೇವಾವಧಿಯ ಸವಿನೆನಪಿಗಾಗಿ ತಾಲೂಕಿನ ಪ್ರಮುಖ 10 ಗ್ರಾಮೀಣ ಗ್ರಂಥಾಲಯಗಳಿಗೆ 'ಗ್ರಂಥಾಲಯ ಪಿತಾಮಹ' ಡಾ. ಎಸ್.ಆರ್. ರಂಗನಾಥನ್ ಅವರ ಮೂರ್ತಿಗಳನ್ನು ಕಾಣಿಕೆಯಾಗಿ ವಿತರಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಂಜಯ ಜುನ್ನೂರ ಅವರ ಸಹಮತದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಜಿ.ಎಸ್. ಬಡೆಮ್ಮಿ, ಯೋಜನಾಧಿಕಾರಿ ಆರ್.ಎಸ್. ಕಡೇಮನಿ ಹಾಗೂ ಕವಿತಾ ಅವರ ಮೂಲಕ ಭಾಂವಿಹಾಳ, ಬೆಳವಡಿ, ದೊಡವಾಡ ಸೇರಿದಂತೆ ವಿವಿಧ ಗ್ರಾಮಗಳ ಗ್ರಂಥಾಲಯಗಳಿಗೆ ಮೂರ್ತಿಗಳನ್ನು ಹಸ್ತಾಂತರಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕಿನ ಸಮಸ್ತ ಗ್ರಂಥಪಾಲಕರು ಒಗೂಡಿ ಗೀತಾ ಗುಜನಾಳ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಸಿ.ಎಸ್. ಕಳಸನ್ನವರ ಸ್ವಾಗತಿಸಿದರು, ಗಂಗಾಂಬಿಕಾ ಕಡಬಿ ಹಾಗೂ ಗೀತಾ ಉಪ್ಪಾರ ಪ್ರಾರ್ಥಿಸಿದರು ಮತ್ತು ಎಂ.ಎಸ್. ಕೆಂಜೇಡಿಮಠ ವಂದಿಸಿದರು.