ಗುರುದೇವ ಆಯುರ್ವೇದ ಆಸ್ಪತ್ರೆಯಲ್ಲಿ ವಿಶ್ವ ನರ್ಸ್ಗಳ ದಿನಾಚರಣೆ
ಅಥಣಿ: ಇಲ್ಲಿನ ಗುರುದೇವ ಆಯುರ್ವೇದ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ನರ್ಸ್ಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚ
ಗುರುದೇವ ಆಯುರ್ವೇದ ಆಸ್ಪತ್ರೆಯಲ್ಲಿ ವಿಶ್ವ ನರ್ಸ್ಗಳ ದಿನಾಚರಣೆ
ಅಥಣಿ: ಇಲ್ಲಿನ ಗುರುದೇವ ಆಯುರ್ವೇದ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ನರ್ಸ್ಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನರ್ಸ್ ಸುರೇಖಾ ಜಾಧವ ಅವರನ್ನು ಕವಿತಾ ಭೋಸಲೆ ಅವರು ಸತ್ಕರಿಸಿ, ಸಿಹಿ ತಿನಿಸುವ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ತಾಲೂಕು ಮುಖಂಡ ಪ್ರವೀಣ ನಾಯಿಕ ಮಾತನಾಡಿ, "ರೋಗಿಗಳ ಸೇವೆಯಲ್ಲಿ ನರ್ಸ್ಗಳು ತೋರುವ ಪ್ರಾಮಾಣಿಕತೆ ಮತ್ತು ತಾಳ್ಮೆ ಅತ್ಯಂತ ಶ್ಲಾಘನೀಯ," ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಮಹಾದೇವ ನಾಯಿಕ, ಅನೀಲ ಭಾಮನೆ, ಎಂ.ಎಂ. ಶರ್ಮಾ, ಶರಣಪ್ಪಾ ಶಿಂದೆ ಹಾಗೂ ಶಿವಾನಂದ ನಾವಿ ಉಪಸ್ಥಿತರಿದ್ದರು.
ವರದಿ ಮಹೇಶ್ ಶರ್ಮಾ