ಜವರಾಯ
ಕದನಕೊಂದು ಪತ್ರ ಬಂದಿದೆ
ಸಾವು ಬದುಕಿನ ಹೋರಾಟದ ಪತ್ರ
ಜಂಜಾಟದ ನಡುವೆ ಉಳಿವಿಗಾಗಿ ಹೋರಾಟ
ಜೂಟಾಟ
ಅವಿತು ಕುಳಿತ ಜವರಾಯ ರಕ್ಕಸನ
ಅವತಾರವೆತ್ತು
ಹಾಹಾಕರಿಸುತಿರುವ...
ಎಷ್ಟುಂಡರ
ಜವರಾಯ
ಕದನಕೊಂದು ಪತ್ರ ಬಂದಿದೆ
ಸಾವು ಬದುಕಿನ ಹೋರಾಟದ ಪತ್ರ
ಜಂಜಾಟದ ನಡುವೆ ಉಳಿವಿಗಾಗಿ ಹೋರಾಟ
ಜೂಟಾಟ
ಅವಿತು ಕುಳಿತ ಜವರಾಯ ರಕ್ಕಸನ
ಅವತಾರವೆತ್ತು
ಹಾಹಾಕರಿಸುತಿರುವ...
ಎಷ್ಟುಂಡರೂ.. ತೃಪ್ತಿಯ ತೇಗು ಬರುತ್ತಿಲ್ಲ
ಅವಗೆ ಬರೀ ನಿರಾಸೆಯೇ.. ನಿಟ್ಟುಸಿರೇ..
ಅಣ್ಣ ತಮ್ಮಂದಿರ , ಅಕ್ಕ ತಂಗಿಯರ , ತಾಯ್ತಂದೆಯರ ಒಡಲ ಕಸಿದುಕೊಂಡರೂ
ಹಸಿವು ನೀಗದು
ಬಾಯಾರಿಕೆ ತಗ್ಗದು
ಪ್ರಕೃತಿಯ ಮುನಿಸೋ.. ಅದಾವ ಕ್ರೂರಿಗೆ
ಬಲಿಯಾದ ವನಿತೆಯ ಶಾಪವೋ..
ಹಸಿವಡಗಿಸದ ಜವರಾಯ
ಜವಾಬ್ದಾರಿ ಹೊತ್ತ ಜನತೆ ಕಂಗಾಲು
ಬೆನ್ನಿಗಂಟಿದ ಹೊಟ್ಟೆ ತುಂಬಿಸಲು ಹೋರಾಟದ ಹಾದಿ
ಇದು ಮುಗಿಯದ ಪಯಣ..
ಎಲ್ಲೋ ಒಂದೆಡೆ ಆಸೆಯ ಹೂರಣ//
ವಾಣಿಮಹೇಶ್
ಹಾಸನ