logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕನ್ನಲ್ಲಿ ಕೃಷ್ಣಪ್ಪ ನೇತೃತ್ವದಲ್ಲಿ ಸಂವಿದಾನ ಶಿಲ್ಪಿ ಡಾ. ಬಿ.ಆ‌ರ್.ಅಂಬೇಡ್ಕರ್ 135 ನೇ ಜಯಂತೋತ್ಸವ ಮಹದೇವಪುರ : ಮಹದೇವಪುರ ಕ್ಷೇತ್ರದ ಭುವನೇಶ್ವರಿ ನಗರದ ಭುವನೇಶ್ವರಿ ದೇವಿ ದೇ

ಕನ್ನಲ್ಲಿ ಕೃಷ್ಣಪ್ಪ ನೇತೃತ್ವದಲ್ಲಿ ಸಂವಿದಾನ ಶಿಲ್ಪಿ ಡಾ. ಬಿ.ಆ‌ರ್.ಅಂಬೇಡ್ಕರ್ 135 ನೇ ಜಯಂತೋತ್ಸವ

ಮಹದೇವಪುರ : ಮಹದೇವಪುರ ಕ್ಷೇತ್ರದ ಭುವನೇಶ್ವರಿ ನಗರದ ಭುವನೇಶ್ವರಿ ದೇವಿ ದೇವಸ್ಥಾನ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ನಗರದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಭುವನೇಶ್ವರಿ ನಗರದಲ್ಲಿ ಕರ್ನಾಟಕ ಸಾಮರಸ್ಯ ಸಮಿತಿ ವತಿಯಿಂದ ಹಮ್ಮಿಕೊಳ್ಳುಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತಿ ಆಚರಣೆಯಲ್ಲಿ ಕರ್ನಾಟಕ ಸಾಮರಸ್ಯ ಸಮಿತಿ ರಾಜ್ಯಾದ್ಯಕ್ಷ ಕನ್ನಲ್ಲಿ ಕೃಷ್ಣಪ್ಪ ಪಾಲ್ಗೊಂಡು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಶ್ರನಮನ ಸಲ್ಲಿಸಿ ನಂತರ ಮಾತನಾಡಿದರು.
ಅಂಬೇಡ್ಕರ್ ಅವರು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಲಿಖಿತ ಸಂವಿಧಾನ ರಚಿಸಿ ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ದೇಶದ ಪ್ರಗತಿಗೆ ಸಂವಿಧಾನವೇ ಅಡಿಪಾಯವಾಗಿದೆ. ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಮುಂದಡಿ ಇಡುತ್ತಿದೆ. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.ಆಸ್ಪಶ್ಯತೆ ಮತ್ತು ಜಾತಿ ತಾರತಮ್ಯದಂತಹ
ಸಮಸ್ಯೆಗಳು ಹೆಚ್ಚಾಗಿ ಅವರ ಮೇಲೆ ಪ್ರಭಾವ ಬೀರಿದ್ದರು. ಇದೆಲ್ಲವನ್ನೂ ಅನುಭವಿಸಿದ ಅವರು ಶಿಕ್ಷಣ ಪಡೆಯುವಲ್ಲಿ ಮಹತ್ವ ಪಾತ್ರ ವಹಿಸಿ ಉನ್ನತ ಶಿಕ್ಷಣ ಪಡೆದು ಸಮಾಜ ಸುಧಾರಣೆ ಮಾಡುವಲ್ಲಿ ತಮ್ಮನ್ನು ಹೋರಾಟದ ಮೂಲಕ ಅರ್ಪಿಸಿಕೊಂಡರು ಅವರ ವಿಚಾರ ಹಾಗೂ ಆಶ್ರಯಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶೋಭಾ ಗೌಡ, ಎಲ್. ಉಮಾದೇವಿ,ಅನಿತಾ ಶ್ರೀನಿವಾಸ್,
ಸೌಮ್ಯ ಕಮಲ್‌, ರಾಜಣ್ಣ ಊರಿನ ಯುವಕರಾದ ಡಿ.ಕೆ.ಗೋಪಾಲ್, ಇಮ್ರಾನ್. ಕೃಷ್ಣ ವಿ. ಗಟ್ಟಿಗುಂದ ಗಿರೀಶ್, ವಿಜಯ್ ಕುಮಾರ್, ಮುಕುಂದ, ಶಿವ, ವೆಂಕಟೇಶ್, ವಸಂತ್ ಕುಮಾರ್, ಮುರುಗನ್, ಕೃಷ್ಣಪ್ಪ, ಶಶಿಕುಮಾರ್, ಕೆ ಸಿ. ಬಾಬು, ಮಹೇಶ, ಇ. ಕೃಷ್ಣಪ್ಪ, ಸುದರ್ಶನ್ ಹಾಗು ಇತರರು ಹಾಜರಿದ್ದರು.

3
106 views

Comment