ಬಲಗೈ ಸಮುದಾಯದಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜನೆ
ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ
ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಒಂದು ದ
ಬಲಗೈ ಸಮುದಾಯದಿಂದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜನೆ
ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ
ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜನೆ
ಬೆಂಗಳೂರು: ಏ.15: ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಒಳಮೀಸಲಾತಿ ವಿಷಯದಲ್ಲಿ ನಾಗಮೋಹನ್ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ ವರದಿಯು ಹಿನ್ನಲೆಯಲ್ಲಿ ಮುಂದಿನ ಹಂತದಲ್ಲಿ ಒಳ ಮೀಸಲಾತಿ ಕುರಿತಾಗಿ ಸಾಧಕ-ಬಾಧಕ ಮತ್ತು ರೋಸ್ಟರ್ ವೆಸ್ಡ್ ಮತ್ತಿತರ ವಿಷಯಗಳ ಬಗ್ಗೆ ನಮ್ಮ ಬಲಗೈ ಸಮುದಾಯಕ್ಕೆ ಅನ್ಯಾಯ ಆದ ವಿಸ್ತೃತವಾಗಿ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಾಳೆ ಬೆಳಗ್ಗೆ ಗುರುವಾರ ಅಂದರೆ ದಿನಾಂಕ 16.04.2026 ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಬಹುಜನ ಶ್ರೀ ಶ್ರೀ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.
ವಿಶೇಷವಾಗಿ ಬಹುಜನ ಶ್ರೀ ಶ್ರೀ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ರಾಜ್ಯದ 31 ಜಿಲ್ಲೆಯ ಎಲ್ಲಾ ಬಲಗೈ ಸಮುದಾಯದ ಬಾಂಧವರು ಈ ಕಾರ್ಯಗಾರಕ್ಕೆ ಆಗಮಿಸಲಿದ್ದಾರೆ.
ಇದೇ ವೇಳೆಯಲ್ಲಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಸಂಚಾಲಕರು ಮತ್ತು ಸದಸ್ಯರಾದ ಶ್ರೀ ಸಿದ್ದಯ್ಯ ಐಎಎಸ್ (ನಿವೃತ್ತ), ಬೆಂಗಳೂರು ಬಿಬಿಎಂಪಿ ಮಹಾಪೌರರು,
ಶ್ರೀ ಸಂಪತ್ ರಾಜ್, ಮೈಸೂರಿನ ಮಾಜಿ ಮಹಾಪೌರರು, ಶ್ರೀ ಪುರುಷೋತ್ತಮ್, ಶ್ರೀಮತಿ ವಾಣಿ ಶಿವರಾಂ ಹಾಗೂ ಶ್ರೀ ಶಿವಣ್ಣ ಕನಕಪುರ ರಾಜ್ಯದ ನಾನಾ ಕಡೆಯ ರಾಜ್ಯ ಮುಖಂಡರು ಮತ್ತಿತರರು ಭಾಗವಹಿಸುವವರು.
ಒಕ್ಕೂಟ ಪರವಾಗಿ ಶ್ರೀ ಶಿವಣ್ಣ ಬಿ ಕನಕಪುರ, ಡಾ. ಈಶ್ವರ್ ಸಿರಿಗೇರಿ, ದೂರವಾಣಿ ಸಂಖ್ಯೆ 9886129222/ 8748856056 /9738845318 ಈ ನಂಬರ್ ಗಳಿಗೆ ಸಂಪರ್ಕಿಸಲು ಕೋರಿದೆ.