logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

"ಹೇ ಬಾಬಾ" ಮಹಾರಾಷ್ಟ್ರದ ಕುವರನಾದರೂ ಬದುಕಿದ್ದು ಭಾರತೀಯರಿಗೆ ಶ್ರಮಿಸಿದ್ದು ಮಾನವತೆಗೆ ಮಹಾ ಮಾನವತಾವಾದಿ ನೀನಾದೆ.. ಸ್ವತಃ ತುಳಿತಕ್ಕೊಳಗಾದೆ ಬೆಂಬಿಡದೆ ನಮ್ಮ ರಕ್ಷಿಸಿದೆ ಅಸಮ

"ಹೇ ಬಾಬಾ"

ಮಹಾರಾಷ್ಟ್ರದ ಕುವರನಾದರೂ
ಬದುಕಿದ್ದು ಭಾರತೀಯರಿಗೆ
ಶ್ರಮಿಸಿದ್ದು ಮಾನವತೆಗೆ
ಮಹಾ ಮಾನವತಾವಾದಿ ನೀನಾದೆ..

ಸ್ವತಃ ತುಳಿತಕ್ಕೊಳಗಾದೆ
ಬೆಂಬಿಡದೆ ನಮ್ಮ ರಕ್ಷಿಸಿದೆ
ಅಸಮಾನತೆಯ ಹತ್ತಿಕ್ಕಿದೆ
ಲಿಂಗ - ಜಾತಿ ತಾರತಮ್ಯವ ಹೋಗಲಾಡಿಸಿದೆ
ಸಮಾನತೆಯ ಹರಿಕಾರ ನೀನಾದೆ..

ಶಿಕ್ಷಣದ ಮಹತ್ವ ನೀ ಅರಿತೆ
ಹೋಗಲಾಡಿಸಿದೆ ಶಿಕ್ಷಣದ ಕೊರತೆ
ದೇಶ ಸುತ್ತಿದೆ ಕೋಶ ಓದಿದೆ
ಮೂವತ್ನಾಲ್ಕು ಪದವಿ ನೀ ಪಡೆದೆ
ನಡೆದಾಡುವ ಗ್ರಂಥಾಲಯ ನೀನಾದೆ...

ಹೆಣ್ಣು ಮಕ್ಕಳಿಗೆ ಕೊಟ್ಟೆ ಸ್ಥಾನ-ಮಾನವ
ಕಾರ್ಮಿಕರಿಗೆ ಕೊಟ್ಟೆ ಕನಿಷ್ಠ ವೇತನವ
ಸರ್ವರಿಗೂ ಕೊಟ್ಟೆ ಸ್ವಾತಂತ್ರ್ಯವ
ಮೂಲಭೂತ ಹಕ್ಕುಗಳ ಹರಿಕಾರ ನೀನಾದೆ...

ಪ್ರಥಮ ಕಾನೂನು ಮಂತ್ರಿಯಾಗಿ
ಕಾರ್ಮಿಕ ಸಚಿವರಾಗಿ
ಮೀಸಲಾತಿಯ ಹರಿಕಾರನಾಗಿ
ಇತಿಹಾಸದ ಮಹಾದಾರ್ಶನಿಕ ನೀನಾದೆ

ಹುಟ್ಟುವಾಗ ಅತೀವ ಸಾಮಾನ್ಯನಾಗಿ
ಅಗಲುವಾಗ ಅಭೂತಪೂರ್ವ ಪ್ರತಿಭೆಯಾಗಿ..
ನೀವು ಸವೆಸಿದ ಜೀವನ
ಇಂದು ನಮ್ಮ ಜೀವನ ಪಾವನ

ಸಂವಿಧಾನ ಶಿಲ್ಪಿ ನೀನಾದೆ
ಭಾರತರತ್ನ ನೀನಾದೆ
ಎಲ್ಲರ ಪ್ರೀತಿಯ ಬಾಬಾ ನೀನಾದೆ
ಸದಾ ನಮ್ಮ ಮನದಲ್ಲಿ ಬೆಳಗುವ ಬೆಳಕು ನೀನಾದೆ...🙏🙏

- ಭವ್ಯಶ್ರೀ ಎಂ.
ಸಹಾಯಕ ಪ್ರಾಧ್ಯಾಪಕರು
ಆಂಗ್ಲ ವಿಭಾಗ
ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ಕಾಲೇಜು, ಅಕ್ಕಿ ಆಲೂರು.

ಎಲ್ಲರಿಗೂ 135 ನೇ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.. ಅವರ ಚಿಂತನೆಗಳನ್ನು ಗೌರವಿಸೋಣ ಅಳವಡಿಸಿಕೊಳ್ಳೋಣ.

8
1050 views

Comment