ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಜೀ (ಮಾನ್ಯ ಮುಖ್ಯಮಂತ್ರಿಗಳು)
ಕರ್ನಾಟಕ ಸರಕಾರ -ವಿಧಾನಸೌಧ ಬೆಂಗಳೂರು,
ಕರ್ನಾಟಕ ರಾಜ್ಯ.
ಮಾನ್ಯರೆ,
ನಾವು ಭಾರತೀಯ ಕಿಸಾನ್ ಸಂಘ-ಕರ್ನಾಟಕ ಉತ್ತರ ಪ
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಜೀ (ಮಾನ್ಯ ಮುಖ್ಯಮಂತ್ರಿಗಳು)
ಕರ್ನಾಟಕ ಸರಕಾರ -ವಿಧಾನಸೌಧ ಬೆಂಗಳೂರು,
ಕರ್ನಾಟಕ ರಾಜ್ಯ.
ಮಾನ್ಯರೆ,
ನಾವು ಭಾರತೀಯ ಕಿಸಾನ್ ಸಂಘ-ಕರ್ನಾಟಕ ಉತ್ತರ ಪ್ರಾಂತದಿಂದ ಕೇಳಿಕೊಳ್ಳುವದೇನೆಂದರೆ, ಕರ್ನಾಟಕ ರಾಜ್ಯ ಉತ್ತರ ಪ್ರಾಂತದ 15 ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿರುವ, ಪ್ರತಿಯೊಂದು ಹೂಬಳಿ ಮಟ್ಟದಲ್ಲಿ ಈ ವರ್ಷ ಬೇಸಿಗೆ ಮುಗಿಯುವವರೆಗೆ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೃಷಿ ಜಾನುವಾರುಗಳಿಗೆ ಹಾಗೂ ಜನರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಕಾರಣ ಈ ವರ್ಷ "ಎಲ್ ನಿನೋ ಪ್ರಭಾವ" ಅತಿ ಹೆಚ್ಚು ಇರುವದರಿಂದ ಗ್ರಾಮ ಮಟ್ಟದಲ್ಲಿ ನೀರಿನ ವ್ಯವಸ್ಥೆ ಹಾಗೂ ಕೊರತೆಯಾಗದ ರೀತಿ ನೋಡಿಕೊಳ್ಳಬೇಕೆಂದು ಹಾಗೂ ಜಲ ಮೂಲಗಳಿರುವ ಭಾಗದಲ್ಲಿ ತೆರೆದ ಭಾವಿ ಅಥವಾ ಬೋರ್ ಕೊರೆಸಲು ಸರಕಾರದಿಂದ ಸಕಲ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇವೆ.
ಈ ವರ್ಷ ಪ್ರತಿ ವರ್ಷಕ್ಕಿಂತ ಅತಿ ಹೆಚ್ಚು ಬಿಸಿಲು ಹಾಗೂ ವಣ ಹವೇ ಜಾಸ್ತಿಯಾಗಿರುವದರಿಂದ ಆದಷ್ಟು ಬೇಗನೆ 15 ಜಿಲ್ಲೆಗಳಲ್ಲಿ ನೀರಿನ ತೊಂದರೆಯನ್ನು ತಪ್ಪಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಅದರ ಜೊತೆಗೆ ಜಲ ಮೂಲಗಳಿದ್ದ ಬಹುತೇಕ ಕೆರೆ ಕಟ್ಟೆಗಳು ಈ ವರ್ಷ ಬರಿದಾಗಿವೆ, ಕುಡಿಯುವ ನೀರಿನ ಮಟ್ಟ ತುಂಬಾನೇ ಕುಸಿದಿದೆ, ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕೆಂದು ನಮ್ಮ ಭಾರತೀಯ ಕಿಸಾನ್ ಸಂಘದಿಂದ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಜೊತೆಗೆ ಈ ವರ್ಷ ಬರಿದಾದ ಕೆರೆಗಳ ಹೂಳೆತ್ತುವದರಿಂದ, ಕೆರೆಗಳ ಪುನಃರುಜ್ಜಿವನ ಗೊಳಿಸಿದಂತಾಗುತ್ತೆ ಎಂಬುದು ನಮ್ಮ ವಿನಮ್ರತೆಯ ಆಗ್ರಹವನ್ನು ತಮ್ಮ ಮುಂದೆ ಇಡುತ್ತಿದ್ದೇವೆ.
ವಂದನೆಗಳೊಂದಿಗೆ.
ತಮ್ಮ ವಿಶ್ವಾಸಿಗಳು,
ಶ್ರೀಶೈಲ. ಮಲ್ಲಿಕಾರ್ಜುನ. ಜನಗೌಡ (ಕರ್ನಾಟಕ ಉತ್ತರ ಪ್ರಾಂತ- ಕಾರ್ಯದರ್ಶಿ)
ಭಾರತೀಯ ಕಿಸಾನ್ ಸಂಘ -ಕರ್ನಾಟಕ ಪ್ರದೇಶ.
ದೂರವಾಣಿ - 8880299949/9448884116.
ಇಮೇಲ್ id : shrishailj22@gmail.com
CS ಮೂಲಕ CM ಅವರಿಗೆ ಮೇಲ್ ಮಾಡಲಾಗಿದೆ ಕರ್ನಾಟಕ ಉತ್ತರ ಪ್ರಾಂತದ 15 ಜಿಲ್ಲೆಗಳಲ್ಲಿ ಕೃಷಿ ಜಾನುವಾರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರಿನ ತೊಂದರೆಯಗದಂತೆ ವ್ಯವಸ್ಥೆಮಾಡಲು ಭಾರತೀಯ ಕಿಸಾನ್ ಸಂಘದಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಆಗ್ರಹಪತ್ರ ರವಾನೀಸಿದ ಸಂಘಟನೆ.