logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಂವಿವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಭ್ರಾತೃತ್ವ ನೆಲೆಸಲಿ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ಡಾ.ಬಿ.ಆರ್.ಅಂಬೇಡ್ಕರ್‌ ಜ

ಬೆಂವಿವಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಅಂಬೇಡ್ಕರ್ ಆಶಯದಂತೆ ದೇಶದಲ್ಲಿ ಭ್ರಾತೃತ್ವ ನೆಲೆಸಲಿ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ

ಡಾ.ಬಿ.ಆರ್.ಅಂಬೇಡ್ಕರ್‌ ಜೀವನದುದ್ದಕ್ಕೂ ಕಷ್ಟ ಅನುಭವಿಸಿದ ಸ್ಪೂರ್ತಿಯ ಚಿಲುಮೆ: ಕುಲಪತಿ ಅಭಿಮತ

ಬೆಂಗಳೂರು: ಏ.14: 21ನೇ ಶತಮಾನದಲ್ಲೂ ಜಾತಿ ಕ್ರೌರ್ಯ, ಮೇಲು- ಕೀಳು, ಭೇದ- ಭಾವ ಹಾಸು ಹೊಕ್ಕಾಗಿರುವುದು ಈ ದೇಶದ ದುರ್ಗತಿ. ಅಂಬೇಡ್ಕರ್‌ರವರ ಆಶಯದಂತೆ ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆ ನೆಲೆಸಬೇಕು. ಜಾತಿ ವಿನಾಶದ ಕುರಿತು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಬೇಕು‌ ಎಂದು ಖ್ಯಾತ ಸಾಹಿತಿಗಳು ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ಬಾಬಾಸಾಹೇಬ್‌ ಡಾ. ಬಿ. ಆರ್. ಅಂಬೇಡ್ಕರ್‌ರವರ 135 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ ಮಹಾನ್ ಮಾನವತಾವಾದಿ ಅಂಬೇಡ್ಕರ್‌ರವರು ಜಾತಿ ಸಂಕೋಲೆಯನ್ನು ತೊಡೆದು ಹಾಕಿ ಜಾತಿ ವಿನಾಶಗೊಳಿಸುವ ಗುರಿ ತೋರಿದರು‌. ಆದರೆ ಮರ್ಯಾದೆ ಹತ್ಯೆ, ಜಾತಿ ಶೋಷಣೆ ಸೇರಿದಂತೆ ಜಾತಿ ಕ್ರೌರ್ಯ ಇನ್ನೂ ಅಸ್ತಿತ್ವದಲ್ಲಿದೆ. ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕೂತಿದೆ. ಪ್ರಜಾಪ್ರಭುತ್ವ ಶಿಥಿಲವಾಗಿದೆ‌. ದೇಶದಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ‌. ಸಾಮಾಜಿಕ, ಆರ್ಥಿಕ ಗುರಿ ಸಾಧನೆಗೆ ಸಂವಿಧಾನದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಖ್ಯಾತ ಸಾಂಸ್ಕೃತಿಕ ಚಿಂತಕರು ಡಾ. ಬಂಜಗೆರೆ ಜಯಪ್ರಕಾಶ್‌ ಮುಖ್ಯ ಭಾಷಣಕಾರರಾಗಿ ಮಾತನಾಡಿದಾ ಅವರು ಸಮಾನತೆಯ ತಳಹದಿಯಲ್ಲಿ ನವಭಾರತವನ್ನು ನಿರ್ಮಿಸಿದ
ಯುಗ ನಿರ್ಮಾತೃ ಡಾ. ಬಿ. ಆರ್. ಅಂಬೇಡ್ಕರ್‌ರವರು ಸಂವಿಧಾನದ‌ ಮೂಲಕ ದೇಶಕ್ಕೆ ಹೊಸ ಚೇತನ ನೀಡಿದರು. ಈ ದೇಶದ ಅವಕಾಶ ವಂಚಿತರು, ಶೋಷಿತರು, ಮಹಿಳೆಯರು, ಹಿಂದುಳಿದವರಿಗೆ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸ್ಥಾನಮಾನ ನೀಡಿದರು. ಆದರೆ ದೇಶದಲ್ಲಿ ಸಂವಿಧಾನದ ವಿರುದ್ದವಾಗಿ ಸನಾತನವಾದ, ಮನುವಾದವನ್ನು ಹೇರುವ ಪ್ರಯತ್ನಗಳಾಗುತ್ತಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಜಯಕರ ಎಸ್.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸಿ ಸ್ಪೂರ್ತಿಯ ಚಿಲುಮೆಯಾದರು. ಬಾಬಾಸಾಹೇಬರ ತತ್ವ,ಚಿಂತನೆ,ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವರು ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿತ್ತಾಧಿಕಾರಿಗಳು ಡಾ.ಸುನೀತಾ ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವಿಶೇಷಾಧಿಕಾರಿಗಳು ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರು ಪ್ರೊ.ಪಿ.ಸಿ.ನಾಗೇಶ್, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರು ಪ್ರೊ.ಸಿ.ಸೋಮಶೇಖರ್ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿ ಮತ್ತು ಅತಿಥಿ ಉಪನ್ಯಾಸಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಂಬೇಡ್ಕರ್ ರವರ ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್:
ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ಆಡಳಿತ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್‌ರವರ 135 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಜಯಕರ ಎಸ್.ಎಂ,
ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಬಂಜೆಗೆರೆ ಜಯಪ್ರಕಾಶ್, ಕುಲಸಚಿವರಾದ ಕೆ.ಟಿ.ಶಾಂತಲಾ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್, ವಿತ್ತಾಧಿಕಾರಿ ಡಾ.ಸುನೀತಾ ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಪಿ.ಸಿ.ನಾಗೇಶ್, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರ ಪ್ರೊ.ಸಿ.ಸೋಮಶೇಖರ್, ಸಿಂಡಿಕೇಟ್ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

ಕೋಟ್1:
ಪ್ರಸ್ತುತ ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕೂತಿದೆ. ಪ್ರಜಾಪ್ರಭುತ್ವ ಶಿಥಿಲವಾಗಿದೆ‌. ದೇಶದಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ‌. ಸಾಮಾಜಿಕ, ಆರ್ಥಿಕ ಗುರಿ ಸಾಧನೆಗೆ ಸಂವಿಧಾನದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು.
- ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಖ್ಯಾತ ಹಿರಿಯ ಸಾಹಿತಿ ಮತ್ತು ಪ್ರಗತಿಪರರು.

ಕೋಟ್2:
ದೇಶದ ಅವಕಾಶ ವಂಚಿತರು, ಶೋಷಿತರು, ಮಹಿಳೆಯರು, ಹಿಂದುಳಿದವರಿಗೆ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸ್ಥಾನಮಾನ ನೀಡಿದರು. ಆದರೆ ದೇಶದಲ್ಲಿ ಸಂವಿಧಾನದ ವಿರುದ್ದವಾಗಿ ಸನಾತನವಾದ, ಮನುವಾದವನ್ನು ಹೇರುವ ಪ್ರಯತ್ನಗಳಾಗುತ್ತಿದೆ.
- ಡಾ.ಬಂಜೆಗೆರೆ ಜಯಪ್ರಕಾಶ್, ಖ್ಯಾತ ಬರಹಗಾರರು, ಸಂಸ್ಕೃತಿ ಚಿಂತಕರು

ಕೋಟ್3:
ಡಾ.ಬಿ.ಆರ್.ಅಂಬೇಡ್ಕರ್‌ರವರು ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸಿ ಸ್ಪೂರ್ತಿಯ ಚಿಲುಮೆಯಾದರು. ಬಾಬಾಸಾಹೇಬರ ತತ್ವ,ಚಿಂತನೆ,ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.
- ಡಾ.ಜಯಕರ ಎಸ್.ಎಂ, ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ

0
813 views

Comment