logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಕೆ.ಆರ್.ಪೇಟೆ: ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ, ನಿರಂತರ ಕ್ರೀಡಾ ಚಟುವಟಿಕೆಗಳು ಆರೋಗ್ಯವಂತ ಸಮಾಜಕ್ಕೆ ಪೂರಕ ಎಂದು ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟಿ ಗಂಜೀಗೆರೆ ಮಹೇಶ

*ಕೆ.ಆರ್.ಪೇಟೆ: ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗ, ನಿರಂತರ ಕ್ರೀಡಾ ಚಟುವಟಿಕೆಗಳು ಆರೋಗ್ಯವಂತ ಸಮಾಜಕ್ಕೆ ಪೂರಕ ಎಂದು ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟಿ ಗಂಜೀಗೆರೆ ಮಹೇಶ್ ತಿಳಿಸಿದರು.*

ತಾಲೂಕಿನ ಶೀಳನೆರೆ ಹೋಬಳಿಯ ಸಿಂದಘಟ್ಟ ಗ್ರಾಮದ ಅಂಬೇಡ್ಕರ್ ಯೂತ್ ಕ್ರಿಕೆಟರ್ಸ್ ವತಿಯಿಂದ ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಈ ಕ್ರೀಡಾಕೂಟಕ್ಕೆ ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಕೋರಬೇಕಾಗಿತ್ತು ಅನಿವಾರ್ಯ ಮುಖ್ಯ ಕಾರ್ಯಕ್ರಮ ಹಿನ್ನೆಲೆ.ಈ ಸುಂದರ ಕ್ರೀಡಾಕೂಟಕ್ಕೆ ಆಗಮಿಸುವುದಕ್ಕಾಗಲಿಲ್ಲ ಅವರ ಮಾರ್ಗದರ್ಶನದಂತೆ ಅವರ ಅನುಪಸ್ಥಿತಿಯಲ್ಲಿ ನಿಮ್ಮ ನೋಡುವ ಭಾಗ್ಯ ಸಿಕ್ಕಿದೆ,ಕ್ರೀಡೆ ಮಾನವನಲ್ಲಿ ನಿರಂತರ ಕ್ರಿಯಾಶೀಲತೆಯ ಜೊತೆಗೆ ನವ ಚೈತನ್ಯವನ್ನು ಉಂಟು ಮಾಡುತ್ತದೆ.ಆರೋಗ್ಯವೇ ಭಾಗ್ಯ ಎಂಬಂತೆ ಯುವಕರು ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವಿಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ,ಕ್ರೀಡಾಪಟುಗಳು ಪ್ರಾಮಾಣಿಕತೆಯಿಂದ ಆಡಬೇಕು ಹಾಗೂ ಕ್ರೀಡಾಸ್ಫೂರ್ತಿಯನ್ನು ಮೆರೆಯಬೇಕು.ಇಂತಹ ಉಪಯುಕ್ತ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು,ಆಧುನಿಕ ಯುಗದಲ್ಲಿ ಮಾನವನ ಜೀವನವೆಂಬುದು ಯಾಂತ್ರಿಕ ಜೀವನವಾಗಿದೆ.ವಿದ್ಯಾರ್ಥಿಗಳು ಪಠ್ಯಕ್ಕೆ ನೀಡುವ ಮಹತ್ವವನ್ನು ಕ್ರೀಡೆಗೂ ನೀಡಬೇಕು ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮಹೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಕಾಮನಹಳ್ಳಿ ಮಂಜುನಾಥ್,ಅಮೃತ್ ರಾಜ್, ಅರುಣ್, ಚರಣ್, ನವೀನ್,ಕೃಷ್ಣಮೂರ್ತಿ,ನೂತನ್ ರಾಜ್, ಯಶವಂತ, ಅವಿನಾಶ್, ಚೇತನ್,ಸಾಗರ್,ಸಚಿನ್,ಭರತ್, ಸುನಿಲ್ ರಾಜ್,ಸಂಜಯ್, ಮುದ್ದುಕುಮಾರ್,ಎ.ವೈ.ಸಿ ತಂಡದ ಕ್ರೀಡಾಪಟುಗಳು ಸೇರಿದಂತೆ ಉಪಸ್ಥಿತರಿದ್ದರು.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

0
1558 views

Comment