*ನಿಂಬಳಗೆರೆ : ಅದ್ಧೂರಿಯಾಗಿ ಜರುಗಿದ ಶ್ರೀಕಲ್ಲೇಶ್ವರ ರಥೋತ್ಸವ , ಶಾಸಕ ಡಾ॥ ಎನ್ ಟಿ ಶ್ರೀನಿವಾಸ್ ಭಾಗಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ನಿಂಬಳಗೆರೆ ಗ್ರಾಮದಲ್ಲಿ ,
*ನಿಂಬಳಗೆರೆ : ಅದ್ಧೂರಿಯಾಗಿ ಜರುಗಿದ ಶ್ರೀಕಲ್ಲೇಶ್ವರ ರಥೋತ್ಸವ , ಶಾಸಕ ಡಾ॥ ಎನ್ ಟಿ ಶ್ರೀನಿವಾಸ್ ಭಾಗಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಕ್ಷೇತ್ರದ ನಿಂಬಳಗೆರೆ ಗ್ರಾಮದಲ್ಲಿ , ಶ್ರೀಕಲ್ಲೇಶ್ವರ ಸ್ವಾಮಿ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು. ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಶ್ರದ್ಧಾ ಭಕ್ತಿಯಿಂದ ಭಾಗಿ ದೇವರ ಕೃಪೆಗೆ ಪಾತ್ರರಾದರು. ಅವರು ಸ್ಥಳೀಯ ಮುಖಂಡರೊಡಗೂಡಿ , ದೇವರ ದರ್ಶನಪಡೆದು ದೇವರಿಗೆ ಫಲತಾಂಬೂಲಾದಿಗಳನ್ನು ಸಮರ್ಪೀಸಿ ನಮಿಸಿದರು. ನಂತರ ಗ್ರಾಮಸ್ಥರೊಂದಿಗೆ ಅನೂನ್ಯವಾಗಿ ಬೆರೆತು , ರಥೋತ್ಸವದಲ್ಲಿ ಭಾಗಿಯಾದಗಿ ಸಂಭ್ರಮಿಸಿದರು. ಸಕಾಲಕ್ಕೆ ಮಳೆ ಬೆಳೆ ಕರುಣಿಸುವಂತೆ , ಮತ್ತು ಕ್ಷೇತ್ರದ ಜನರು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಜೀವಿಸುವಂತೆ. ಹಾಗೂ ಲೋಕ ಕಲ್ಯಾಣಕ್ಕಾಗಿ , ಸರ್ವಜೀವಿಗಳ ಹಿತಕ್ಕಾಗಿ ದೇವರಲ್ಲಿ ಶಾಸಕರು ಪ್ರಾರ್ಥಿಸಿದರು. ಶಾಸಕರು ರಥೋತ್ಸವ ಸಂದರ್ಭದಲ್ಲಿ ನೆರೆದ ಭಕ್ತರನ್ನುದ್ದೇಶಿಸಿ ಮಾತನಾಡಿದರು , ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಲು ಇಚ್ಚಿಸಿದ್ದು. ಅದಕ್ಕೆ ಸರ್ಕಾರ ಇಲಾಖೆಗಳ ಅಧಿಕಾರಿಗಳು , ಹಾಗೂ ಸರ್ವರ ಸಹಕಾರ ಅತ್ಯಗತ್ಯವಿದೆ ಎಂದರು. ಗ್ರಾಮದ ಮುಖಂಡರಾದ ಕಲ್ಲೇಶಣ್ಣ, ಎಂ ಜಿ ರಾಜನಗೌಡ, ಚೆನ್ನಬಸವನಗೌಡ, ವಿಜಯಪ್ಪ, ಅನ್ವರ್ ಸಾಬ್, ಎಂ. ಜಿ. ಮಲ್ಲಿಕಾರ್ಜುನ ಗೌಡ, ಅಂಕಮನಹಳ್ಳಿ ಕೊಟ್ರೇಶ್, ಗಾಣಗಟ್ಟೆ ಮಹಾಂತೇಶ, ಯರಮ್ಮನಹಳ್ಳಿ ಮಹಾಂತೇಶ, ಕಾನಕಟ್ಟೆ ಶರಣಪ್ಪ, ಸೊಕ್ಕೆ ಕೊಟ್ರೇಶ, ಊರಿನ ಪ್ರಮುಖರು, ಗ್ರಾಮಸ್ಥರು, ಅಸಂಖ್ಯಾತ ಭಕ್ತರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*