logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುವ ಸಮಾರಂಭ *****************************************************

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುವ ಸಮಾರಂಭ
********************************************************ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭ ನಡೆಯಿತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಮೇತ್ರಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಿನಾಯಕ ಬಾಗಡಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆ ಅಧ್ಯಕ್ಷರಾದ ಪ್ರವೀಣ ನಾಯಿಕ ಅವರು ಉದ್ಘಾಟಿಸಿ ಜಂಟಿಯಾಗಿ ಮಾತನಾಡಿ ಸರಕಾರಿ ಶಾಲೆಗಳು ಉಳಿಯಬೇಕು ಬಡ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರಕಾರ ಸೌಲಭ್ಯವನ್ನು ನೀಡುತ್ತಿದೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು ಉಪಯೋಗ ಮಾಡಿ ಎಂದು ಸಲಹೆ ನೀಡಿ ಶಾಲೆಯ ಅಭಿವೃದ್ಧಿಗಾಗಿ ನಮ್ಮ ಸಹಾಯ ಸಹಕಾರ ಇದೆ ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಆಗಮಿಸಿ ಉತ್ತಮ ಶಿಕ್ಷಣ ನೀಡಬೇಕು ನೂತನ ಪ್ರಧಾನ ಗುರುಗಳಾಗಿ ಎಸ್ ಎ ಚೌಗಲಾ ಆಗಮಿಸಿದ್ದು ಸಂತೋಷದ ಸಂಗತಿ ತಾವು ಒಳ್ಳೆಯ ಸೇವೆದೊಂದಿಗೆ ಮಾದರಿ ಶಾಲೆಯನ್ನಾಗಿ ಮಾಡಿ ಎಂದು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಗುರುಗಳಾದ ಎಸ್ ಎ ಚೌಗಲಾ ನೇತೃತ್ವ ವಹಿಸಿ ಪ್ರಸ್ತವಿಕವಾಗಿ ಮಾತನಾಡಿ ಎಲ್ಲ ಶಿಕ್ಷಕರನ್ನು ಸಲಹಾ ಸಮಿತಿಯವರನ್ನು ಪಾಲಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಮಾದರಿ ಶಾಲೆಯನ್ನಾಗಿ ಮಾಡುತೇನೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಎಸ್ ಜಿ ಎಸ್ ಕಾಲೇಜಿನ ಉಪನ್ಯಾಸಕರಾದ ವಿ ಆರ್ ತಕತರಾವ, ವಕೀಲರಾದ ಆಕಾಶ ಬಾಗಡಿ,ಮಾಜಿ ಗ್ರಾಮ ಪಂಚಾಯತ ಸದಸ್ಯ ಹಣಮಂತ ಕಾಂಬಳೆ,ಪರಶುರಾಮ ಕಾಂಬಳೆ,ರತ್ನವ್ವಾ ಕಾಂಬಳೆ ಆಗಮಿಸಿದ್ದರು.
ಎಸ್ ಡಿ ಎಂ ಸಿ ಸದಸ್ಯರಾದ ನಾಗರಾಜ್ ಹಡಪದ ನಿಂಗಪ್ಪಾ ಕಾಂಬಳೆ, ಕುಮಾರ ಕಾಂಬಳೆ,ಮಲ್ಲೇಶ ಖಟಾವಿ, ಅಶ್ವಿನಿ ಗಾರಿಮನಿ,ಶ್ರೀಕಾಂತ ಅವಳೆ, ಅಶೋಕ ಬೋರಗಾವೆ, ವೆಂಕಟೇಶ ಗಾಡಿವಡ್ಡರ, ಶಂಕರ ಕಾಂಬಳೆ, ಸಂಗೀತಾ ಮಗದುಮ್ಮ, ಸುಮಿತ್ರಾ ಬಿಸೆ, ಸುನೀತಾ ನಾಯಿಕ, ಸುವರ್ಣ ನಿರಲೆಕರ, ಶಾಂತಾ ಕಾಂಬಳೆ, ಸಾರಿಕಾ ಕಾಂಬಳೆ,ರುಕ್ಸನಾ ಅಲಾಸ, ಶಿಕ್ಷಕರಾದ ಎ ಎಸ್ ಮಾಕನ್ನವರ, ಕೆ ಎಸ್ ನಾಯ್ಕೋಡಿ, ವಿ ಎಸ್ ಪಕೀರೆ, ವಿ ಬಿ ಪಾಟೀಲ, ಟಿ ಬಿ ಒಡೆಯರ, ಆರ್ ಬಿ ನಿಲಜಗಿ,ಎ ಎಸ್ ಚೌಗಲಾ, ಎನ್ ಎ ಚೌಧರಿ, ಪಿ ಟಿ ಕಾಂಬಳೆ ಪಾಲಕರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ಮನರಂಜನೆ ಸಂಸ್ಕೃತಿ ಕಾರ್ಯಕ್ರಮ ನಡೆಯಿತು ವಿ ಎಂ ಪೂಜಾರಿ ಸ್ವಾಗತಿಸಿ ವಂದಿಸಿದರು.

ವರದಿ ಮಹೇಶ್ ಶರ್ಮಾ

9
597 views

Comment