logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಚಿಕ್ಕೋಡಿ : ಪಟ್ಟಣದ ಮಾರುಕಟ್ಟೆ ಬಾಡಿಗೆ ವಸೂಲಿಗಾರರು ರೈತರಿಂದ ಮನಬಂದಂತೆ ವಸೂಲಿ ಮಾಡುತ್ತಿರುವ ಬಗ್ಗೆ ರೈತರ ವಿರೋಧ.* *ಚಿಕ್ಕೋಡಿ ಪಟ್ಟಣದಲ್ಲಿ ಗಾಂಧಿ ಮಾರುಕಟ್ಟೆ ಮೂಲಕ ರೈತರ ಬ

*ಚಿಕ್ಕೋಡಿ : ಪಟ್ಟಣದ ಮಾರುಕಟ್ಟೆ ಬಾಡಿಗೆ ವಸೂಲಿಗಾರರು ರೈತರಿಂದ ಮನಬಂದಂತೆ ವಸೂಲಿ ಮಾಡುತ್ತಿರುವ ಬಗ್ಗೆ ರೈತರ ವಿರೋಧ.*

*ಚಿಕ್ಕೋಡಿ ಪಟ್ಟಣದಲ್ಲಿ ಗಾಂಧಿ ಮಾರುಕಟ್ಟೆ ಮೂಲಕ ರೈತರ ಬೆಳೆಗಳನ್ನು ಮಾರುವ ರೈತರಿಂದ, ಜಕಾತಿ ಸಂಘ್ರಹಕ ಗುತ್ತಿಗೆದಾರರು ಮನಬಂದಂತೆ ವಸೂಲಿ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ ಎಂದು, ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು, ಚಿಕ್ಕೋಡಿ ಪುರಸಭೆ ಅಧಿಕಾರಿಗಳನ್ನು ಭೆಟ್ಟಿ ಯಾಗಿ ತಮ್ಮ ಅಳಲನ್ನು ತೋಡಿಕೊಂಡರು.*

*ಸೌದಾದವರು ರೈತರಿಂದ ಪ್ರತಿಯೊಂದು ಡಾಗಕ್ಕೆ 4 ರೂ ಯಂತೆ, ಸಂಗ್ರಹ ಮಾಡುತ್ತಿದ್ದಾರೆ, ನಂತರ ಈ ಡಾಗನ್ನು ಖರೀರಿಸಿದ ಮರುಮಾರಾಟ ಮಾಡುವ ವ್ಯಕ್ತಿಯಿಂದ 30-40-50 ಹೀಗೆ ಮನಬಂದಂತೆ ಗುತ್ತಿಗೆದಾರರೂ ಸಹ ಹಣ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳ ಮುಂದೆ ಚರ್ಚೆಯಾಯಿತು.*


*ಇದರಿಂದ ಬೇಸತ್ತ ರೈತರು ಪ್ರತಿ ಡಾಗಕ್ಕೆ 4 ರೂ ಯಂತೆ, ಜಕಾತಿ ಸಂಗ್ರಹ ಮಾಡುವುದನ್ನು ಸಂಪೂರ್ಣ ನಿಲ್ಲಸಬೇಕು ಇದರಿಂದ ರೈತರಿಗೆ ಮುಕ್ತಿ ಸಿಗಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿಗಳಾದ ಜಗದೀಶ ಈಟಿ ಮಾತನಾಡಿ, ನಾವು ಯಾವಾಗಲೂ ರೈತರ ಪರ ಇದ್ದೇವೆ, ಸಾಧ್ಯವಾದಷ್ಟು ರೈತರಿಗೆ ಅನುಕೂಲವಾಗುವಂತೆ, ಕ್ರಮ ಜರುಗಿಸಲಾಗುವುದು, ಕನಿಷ್ಟ ದರಪಟ್ಟಿಯನ್ನು ಪ್ರಕಟಿಸಲಾಗಿದೆ, ಮಾರುಕಟ್ಟಯಲ್ಲಿ ಫಲಕಗಳನ್ನು ಹಾಕಲಾಗುವುದು, ದರಪಟ್ಟಿಗಿಂತ ಹೆಚ್ಚು ಹಣ ಗುತ್ತಿಗೆದಾರರರಿಗೆ ನೀಡುವ ಅವಶ್ಯಕತೆ ಇಲ್ಲಾ, ಒಂದು ವೇಳೆ ಹೆಚ್ಚಿಗೆ ಹಣ ಸಂಗ್ರಹಕ್ಕೆ ಮುಂದಾದರೆ, ಅಂತವರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗುವುದು, ಬರುವ ದಿನಗಳಲ್ಲಿ ಮಾರುಕಟ್ಟೆಯ ಜನರ ಅನುಕೂಲಕ್ಕಾಗಿ ಅಲ್ಲಲ್ಲಿ ಮೂತ್ರಿಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.*

*ಈ ಸಂಧರ್ಭದಲ್ಲಿ ರೈತ ಮುಖಂಡರು ಆದ ಲಕ್ಷ್ಮಣ ಶಿರಡೋಣಿ, ಪಿಂಟು ದಿನ್ನಿಮನಿ, ಬಸವಂತ ಮಾಂಜರೆ, ಕುಮಾರ ಮಾಂಜರೆ, ರಫೀಕ್ ಪಠಾಣ, ಭೀಮಸೇನ ಅರಭಾಂವಿ, ಮಲ್ಲಪ್ಪ ಮಾಂಜರೆ, ಸಂಜು ನಾಯಿಕ, ಸಚೀನ ಕುಲಕರ್ಣಿ, ಮೋಹನ ಪಾಟೀಲ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಕರವೇ ಅಧ್ಯಕ್ಷ ಸಂಜು ಬಡಿಗೇರ, ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.*

1
535 views

Comment