logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸುಕ್ಷೇತ್ರ ಬಳ್ಳಿಗೇರಿಯಲ್ಲಿ ಎಲ್ಲಮ್ಮ ದೇವಿಯ 49ನೇ ಜಾತ್ರೆ; ರಂಗಭೂಮಿ ಕಲೆಗೆ ಸಾಕ್ಷಿಯಾದ ಗ್ರಾಮಸ್ಥರು ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಬಳ್ಳಿಗೇರಿ ಗ್ರಾಮದಲ

ಸುಕ್ಷೇತ್ರ ಬಳ್ಳಿಗೇರಿಯಲ್ಲಿ ಎಲ್ಲಮ್ಮ ದೇವಿಯ 49ನೇ ಜಾತ್ರೆ; ರಂಗಭೂಮಿ ಕಲೆಗೆ ಸಾಕ್ಷಿಯಾದ ಗ್ರಾಮಸ್ಥರು

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಬಳ್ಳಿಗೇರಿ ಗ್ರಾಮದಲ್ಲಿ ಶ್ರೀ ಎಲ್ಲಮ್ಮ ದೇವಿಯ ೪೯ನೇ ವರ್ಷದ ಪುಣ್ಯ ಜಾತ್ರಾ ಮಹೋತ್ಸವವು ಅತ್ಯಂತ ಸಡಗರದಿಂದ ನೆರವೇರಿತು. ಈ ಸಂಭ್ರಮದ ಅಂಗವಾಗಿ ಗ್ರಾಮದ ಶ್ರೀ ಬಸವೇಶ್ವರ ನಾಟ್ಯ ಸಂಘದ ವತಿಯಿಂದ '೧೫ ನೇ ಕಲಾ ಕುಸುಮ' ಹವ್ಯಾಸಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಕಲಾಭಿಮಾನಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಈ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ರಾಜ್ಯ ಸಂಯೋಜಕರಾದ ಸನ್ಮಾನ್ಯ ಶ್ರೀ ರಜಾಕ್ ಡಿ. ಮುಲ್ಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಇಂತಹ ಹವ್ಯಾಸಿ ನಾಟಕ ಸಂಘಗಳ ಪಾತ್ರ ದೊಡ್ಡದಿದೆ.
ಜಾತ್ರೆಗಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ವೇದಿಕೆಗಳಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮವು ಪರಮಪೂಜ್ಯ ಶ್ರೀ ದಶರಥ ಮಹಾರಾಜರ ದಿವ್ಯ ಸಾನಿಧ್ಯ ಹಾಗೂ ಶ್ರೀ ಮಾರುತಿ ಮಹಾರಾಜರ ಉಪಸ್ಥಿತಿಯಲ್ಲಿ ಜರುಗಿತು. ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಶಂಕರಗೌಡ ಪಾಟೀಲ, ಹಿರಿಯ ಮುಖಂಡರಾದ ಮಹಾದೇವ ಹಾಲಳ್ಳಿ, ಗಂಗಪ್ಪ ಮಾಳಿ, ಇನ್ನುಸ್ ಬಾಲದಾರ, ಅಪ್ಪನಗೌಡ ಪಾಟೀಲ ಹಾಗೂ ಊರಿನ ಪ್ರಮುಖರಾದ ಕೃಷ್ಣ ದೊಡ್ಡಮನಿ, ಸುಭಾಷ್ ಮಡಿವಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

4
1203 views

Comment