*ಚಿಕ್ಕೋಡಿ : LPG ಪೂರೈಕೆ ವ್ಯೆತ್ಯಯ ಉಂಟಾಗುತ್ತಿರುವ ಕುರಿತು ಮತ್ತು ಅಡುಗೆ ಅನಿಲ ಸಿಲಿಂಡರಗಳನ್ನು ಪೋರೈಸುವ ಕುರಿತು ಉಪ ವಿಭಾಗಾಧಿಕಾರಿಗಳಾದ ಸುಭಾಷ ಸಂಪಗಾಂವಿ ನೇತೃತ್ವದಲ್ಲಿ ಸಭ
*ಚಿಕ್ಕೋಡಿ : LPG ಪೂರೈಕೆ ವ್ಯೆತ್ಯಯ ಉಂಟಾಗುತ್ತಿರುವ ಕುರಿತು ಮತ್ತು ಅಡುಗೆ ಅನಿಲ ಸಿಲಿಂಡರಗಳನ್ನು ಪೋರೈಸುವ ಕುರಿತು ಉಪ ವಿಭಾಗಾಧಿಕಾರಿಗಳಾದ ಸುಭಾಷ ಸಂಪಗಾಂವಿ ನೇತೃತ್ವದಲ್ಲಿ ಸಭೆ ನಡೆಯಿತು.*
*ತಹಶೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಸುಭಾಷ ಸಂಪಗಾಂವಿ ಅವರ ನೇತೃತ್ವದಲ್ಲಿ ಸಂಭಂದ ಪಟ್ಟ ಅಧಿಕಾರಿಗಳು ಹಾಗೂ ಗ್ಯಾಸ್ ಏಜನ್ಸಿ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿ LPG ಪೂರೈಕೆ ವ್ಯೆತ್ಯಯ ಉಂಟಾಗುತ್ತಿರುವ ಕುರಿತು ಮತ್ತು ಅಡುಗೆ ಅನಿಲ ಸಿಲಿಂಡರಗಳನ್ನು ಪೋರೈಸುವ ಕುರಿತು ಎಜೇಂನ್ಸಿ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಿದರು.*
*ಅನಧಿಕೃತವಾಗಿ ಯಾವುದೇ ಗ್ಯಾಸ್ ಕಂಪನಣಿಗಳು ಅಥವಾ ಎಜೇಂನ್ಸಿಗಳು ಗ್ಯಾಸ್ ಸಿಲಿಂಡರಗಳನ್ನು ಸಂಗ್ರಹ ಮಾಡಿ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹೋಟೆಲಗಳಿಗೆ ಯಾವುದೇ ಡೋಮೇಸ್ಟಿಕ ಗ್ಯಾಸ್ ಸಿಲಿಂಡರಗಳನ್ನು ನೀಡಬಾರದು. ಸಾರ್ವಜನಿಕರಲ್ಲಿ ಗ್ಯಾಸ್ ಅಭಾವದ ಬಗ್ಗೆ ಭಯ ಉಂಟಾಗದಂತೆ ನೋಡಿಕೊಳ್ಳಬೇಕು, ಹೊರಗಡೆ ದಾಲಾಲಿಗಳು ಅಡುಗೆ ಅನಿಲ್ ಸಿಲಿಂಡರಗಳನ್ನು ಅನಧಿಕೃತವಾಗಿ ಶೇಖರಣೆ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ವರದಿ ಆಗಿವೆ, ಅದ್ದರಿಂದ ಸದರಿ ವಿಷಯಕ್ಕೆ ಸಂಭಂದಿಸಿದಂತೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಭಾಗಕೆ 45 ದಿನಕ್ಕೆ ಗ್ಯಾಸ್ ಸಿಲಿಂಡರ ಕೊಡಲು ಮತ್ತು ನಗರ ಪ್ರದೇಶಗಳಿಗೆ 25 ದಿನಗಳ ಬಳಿಕ ಬುಕ್ ಮಾಡಲು ಅವಕಾಶವಿದೆ. ಶಾಲೆಗಳು, ಆಸ್ಪತ್ರೆಗಳು ಹಾಗೂ ಇಂದಿರಾ ಕ್ಯಾಂಟೀನಗಳಿಗೆ ಸಿಲಿಂಡರ ಪೂರೈಕೆಯ ಯಾವುದೇ ವ್ಯೆತ್ಯಯ ಬರಬಾರದು ಎಂದು ಸೂಚಿಸಿದರು.*
*ಪ್ರತಿಕ್ರಿಯೆ : ಯುದ್ದ ನಡೆದಿರುವುದರಿಂದ ಸಿಲಿಂಡರಗಳ ಅಭಾವ ಎಂಬ ಸುದ್ದಿ ಸಾಮಾಜಿಕ ಜಾಲ ತಾನಗಳಲ್ಲಿ ಹರಿದಾಡುತ್ತಿದ್ದು, ಅದನ್ನು ಕಂಡ ಜನರು ಒಮ್ಮೆಲೆ ಸಿಲಿಂಡರಗಳಿಗಾಗಿ ಮುಗಿ ಬೀಳುತ್ತಿದ್ದಾರೆ, ಇದರಿಂದ ನಿಯಂತ್ರಣ ಮಾತ್ರ ತಪ್ಪುತ್ತಿದೆ, ಆದರೆ ಚಿಕ್ಕೋಡಿ ಪಟ್ಟಣದಲ್ಲಿ ಕಿರಣ ಗ್ಯಾಸ್ ಹಾಗೂ ಇನ್ನಿತರ ಎಜನ್ಸಿಗಳಿಂದ ಕ್ರಮವಾಗಿ ಗ್ಯಾಸ್ ಪೂರೈಕೆ ಸರಿಯಾಗಿ ಆಗುತ್ತಲಿದೆ, ಯಾರೂ ಭಯ ಪಡುವ ಅವಶ್ಯಕತೆ ಇರುವುದಿಲ್ಲ.*
*ಚಂದ್ರಕಾಂತ ಹುಕ್ಕೇರಿ, ಸಮಾಜ ಸೇವಕರು, ಚಿಕ್ಕೋಡಿ.*