*ಚಿಕ್ಕೋಡಿ: ಚಿಕ್ಕೋಡಿ ವರದಿಗಾರರಾದ ಸಂಜೀವ ವಸಂತ ಕಾಂಬಳೆ ಅವರಿಗೆ 2025 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಬಾಂಕ
*ಚಿಕ್ಕೋಡಿ: ಚಿಕ್ಕೋಡಿ ವರದಿಗಾರರಾದ ಸಂಜೀವ ವಸಂತ ಕಾಂಬಳೆ ಅವರಿಗೆ 2025 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಬಾಂಕ್ವೇಟ್ ಸಭಾ ಭವನದಲ್ಲಿ ಶುಕ್ರವಾರ ಸಂಜೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2025 ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸಂಜೀವ ಕಾಂಬಳೆ ಅವರು ಗಡಿಭಾಗದ ಹಲವಾರು ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದರು.ಗಡಿ ಭಾಗದ ಸಾಕಷ್ಟು ಸಮಸ್ಯೆಗಳ ಲೇಖನ ಬರೆದು ಅಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕವಾದ ಕಾರ್ಯ ಮಾಡಿದ್ದಾರೆ.ಇಲ್ಲಿವರಿಗೆ ಪತ್ರಿಕೋದ್ಯಮದಲ್ಲಿನ ಸಲ್ಲಿಸಿದ ಸೇವೆ ಗಮನಿಸಿ ಬೆಳಗಾವಿ ಜಿಲ್ಲಾಡಳಿತ ನವೆಂಬರ 1,2025 ರಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.ಬೆಂಗಳೂರಿನಲ್ಲಿ ನಡೆದ ಕನ್ನಡ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿತರಣೆಯಲ್ಲಿ ಶಿವಾಜಿನಗರದ ಶಾಸಕ ರಿಜ್ವಾನ ಅರ್ಷದ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಮಂತ ನಿಂಬಾಳಕರ, ಕಾರ್ಯದರ್ಶಿ ಕಾವೇರಿ, ನಾಡೋಜ ಹಂಪನಾ ನಾಗರಾಜ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಇತರರು ಉಪಸ್ಥಿತರಿದ್ದರು.*
*ಚಿಕ್ಕೋಡಿಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ, ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆಗಳ ಸುರಿಮಳೆಗೈದಿದ್ದಾರೆ.*