logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಜನಸೇವೆಯೇ ಜನ್ಮದಿನದ ಉಡುಗೊರೆ: ಜಯ ಕರ್ನಾಟಕ ರಾಜ್ಯಾಧ್ಯಕ್ಷರ ಹುಟ್ಟುಹಬ್ಬಕ್ಕೆ ಅಥಣಿಯಲ್ಲಿ ಬೃಹತ್ ಆರೋಗ್ಯ ಶಿಬಿರ ಅಥಣಿ: ಸಂಘಟನೆ ಎಂದರೆ ಕೇವಲ ಹೋರಾಟವಲ್ಲ, ಅದು ಸಮಾಜದ ಕಟ್ಟಕಡೆಯ

ಜನಸೇವೆಯೇ ಜನ್ಮದಿನದ ಉಡುಗೊರೆ: ಜಯ ಕರ್ನಾಟಕ ರಾಜ್ಯಾಧ್ಯಕ್ಷರ ಹುಟ್ಟುಹಬ್ಬಕ್ಕೆ ಅಥಣಿಯಲ್ಲಿ ಬೃಹತ್ ಆರೋಗ್ಯ ಶಿಬಿರ



ಅಥಣಿ: ಸಂಘಟನೆ ಎಂದರೆ ಕೇವಲ ಹೋರಾಟವಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಸೇವಾ ಮನೋಭಾವ ಎಂಬುವುದನ್ನು 'ಜಯ ಕರ್ನಾಟಕ' ಸಂಘಟನೆ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ|| ಬಿ.ಎನ್. ಜಗದೀಶ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ, ಅಥಣಿ ಘಟಕವು ಒಂದು ಅರ್ಥಪೂರ್ಣ ಜನಪರ ಕಾರ್ಯಕ್ಕೆ ಮುಂದಾಗಿದೆ. ಅಥಣಿಯ ಪ್ರತಿಷ್ಠಿತ ಓಂ ಮಾಧವ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಅವರ ತಾಂತ್ರಿಕ ಸಹಯೋಗದೊಂದಿಗೆ, ಇದೇ ಬರುವ ಮಾರ್ಚ್ ೧೩ ೨೦೨೬, ಶುಕ್ರವಾರದಂದು ಕೊಕಟನೂರ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ರೂವಾರಿಗಳಾದ

ಶ್ರೀ ಸುನೀಲ್ ನಾಯಿಕ ಮತ್ತು ಶ್ರೀ ಸಂಗಮೇಶ ದಿವಾನಮಳ ಅವರ ನೇತೃತ್ವದಲ್ಲಿ ಈ ಬೃಹತ್ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯಾಧ್ಯಕ್ಷರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುವ ಬದಲು, ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ಶಿಬಿರವು ಶ್ರೀ ಕಾಡಸಿದ್ದೇಶ್ವರ ಮಠ (ಗ್ರಾಮ ಪಂಚಾಯತ ಎದುರುಗಡೆ), ಕೊಕಟನೂರ ಅಲ್ಲಿ ನಡೆಯಲಿದೆ. ಅಥಣಿಯ ಓಂ ಮಾಧವ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನ ಖ್ಯಾತ ತಜ್ಞ ವೈದ್ಯರು ಈ ಶಿಬಿರದಲ್ಲಿ ಲಭ್ಯವಿರುತ್ತಾರೆ. ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಜಟಿಲ ಆರೋಗ್ಯ ಸಮಸ್ಯೆಗಳವರೆಗೆ ಪ್ರಾಥಮಿಕ ತಪಾಸಣೆ ಮತ್ತು ಸಲಹೆಗಳನ್ನು ಉಚಿತವಾಗಿ ನೀಡಲಾಗುತ್ತದೆ.ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುವುದು ಕಷ್ಟಸಾಧ್ಯ. ಅಂತಹ ಜನರಿಗೆ ಅವರಿದ್ದಲ್ಲಿಗೇ ತಜ್ಞ ವೈದ್ಯರನ್ನು ಕರೆತಂದು, ಉಚಿತವಾಗಿ ತಪಾಸಣೆ ಮಾಡಿಸುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಶ್ರೀ ಕಾಡಸಿದ್ದೇಶ್ವರ ಮಠದ ಪವಿತ್ರ ಪರಿಸರದಲ್ಲಿ ನಡೆಯಲಿರುವ ಈ ಶಿಬಿರವು ಸಾರ್ವಜನಿಕರಿಗೆ ದೊಡ್ಡ ವರದಾನವಾಗಲಿದೆ.



ವರದಿಗಾರರು

-

5
598 views

Comment