logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ಸಮಾಜ ಮುಖಿ ಕೆಲಸಕ್ಕೆ ಪಣ ತೊಟ್ಟ ಮಹಿಳೆ ಶ್ರೀಮತಿ ಸುನಿತಾ ಐಹೊಳೆ ಸುನಿತಾ ಐಹೊಳೆ ಅವರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟು ಸಮಾಜ ಮುಖಿ ಕೆಲಸಕ್ಕೆ ಪಣ ತೊಟ್ಟ ಮಹಿಳೆ ಶ್ರೀಮತಿ ಸುನಿತಾ ಐಹೊಳೆ ಸುನಿತಾ ಐಹೊಳೆ ಅವರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯ ಸ್ಥಾನ ಒಲಿದು ಅವರ ಮಾಡಿದ ಪ್ರಯತ್ನ ಅವರ ಮಾಡಿದ ಹೋರಾಟಕ್ಕೆ ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕತೆಯಿಂದ ಒಲೆದು ಒಲಿದು ಬಂದಿದೆ

ಕೆಪಿಸಿಸಿ ಪ.ಜಾ. ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಸದಸ್ಯರು, ಕೆಪಿಸಿಸಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪ.ಜಾ. ಮಾಧ್ಯಮ ವಕ್ತಾರರು, ಅಥಣಿ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಉದ್ಯಮಿಗಳಾದ ರಾವಸಾಬ ಎನ್. ಐಹೊಳೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಉನ್ನತ ಸ್ಥಾನ ಮಾನಗಳನ್ನು ನೀಡುತ್ತದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ. ಸಾಮಾನ್ಯ ಕಾರ್ಯಕರ್ತರಾಗಿ ಸಮಾಜದಲ್ಲಿ ಬೆಳೆದು ಬಂದ ಸುನಿತಾ ಐಹೊಳೆ ಅವರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯ ಸ್ಥಾನ ಒಲಿದು ಬಂದಿದ್ದು ಸಂತಸ ತಂದಿದ್ದು ಅವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳುವಂತಾಗಲಿ ಎಂದು ಹಾರೈಸಿದರು.
​ಈ ಸಂದರ್ಭದಲ್ಲಿ ಮುಖಂಡರಾದ ಸಂಜು ಕಾಂಬಳೆ, ಹನುಮಂತ ಆಧಾರಪೂರ, ಕುಮಾರ ಗಸ್ತಿ, ಸದಾಶಿವ ದೊಡ್ಡಮನಿ, ಆದರ್ಶ ಗಸ್ತಿ, ರಾಜು ರಾಜನಗಿರಿ, ಕುಮಾರ ಐಹೊಳೆ, ಸುನೀಲ ಕಾಂಬಳೆ, ಪರಶುರಾಮ ಐಹೊಳೆ, ಉಮರ ಸೈಯದ್, ವಿಜಯಕುಮಾರ ಬಡಚಿ, ಸುನಿತಾ ಐಹೊಳೆ ಅವರ ಪುತ್ರ ಸುದೀಪ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.
​ಫೋಟೋ ಅಡಿಬರಹ: ಅಥಣಿ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸುನಿತಾ ಎಸ್. ಐಹೊಳೆ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾಂಗ್ರೆಸ್ ಮುಖಂಡರಾದ ಸಿದ್ದಾರ್ಥ ಸಿಂಗೆ, ರಾವಸಾಬ ಎನ್. ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕರ್ತರಿಗೂ ಜನರಿಗೆ ಅಭಿವೃದ್ಧಿಯನ್ನ ಯೋಜನೆಗಳನ್ನು ಜಾರಿಗೆ ಮಾಡುತ್ತಾರೆ ಒಳ್ಳೆಯ ರೀತಿ ಕಾರ್ಯನಿರ್ವಹಿಸುತ್ತಾರ ಒಳ್ಳೆದನ್ನ ಮಾಡುತ್ತಾ ಬಂದಿದ್ದಾರೆ ನೀವು ಅನೇಕ ಯೋಜನೆಗಳನ್ನು ಜಾರಿ ಮಾಡಿಕೊಳ್ಳುತ್ತಾರೆ? ನಿಗೂಢ?


ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯರಾಗಿ ಅಥಣಿಯ ಸುನಿತಾ ಐಹೊಳೆ ಆಯ್ಕೆ; ಕಾಂಗ್ರೆಸ್ ಮುಖಂಡರಿಂದ ಸನ್ಮಾನ
​ಸುವರ್ಣಲೋಕ ಸುದ್ದಿ
​ಅಥಣಿ: ರಾಜ್ಯ ಸರ್ಕಾರವು ಎಐಸಿಸಿ ಅಸೆಂಬ್ಲಿ ವೀಕ್ಷಕರು, ದೆಹಲಿ, ರಾಜ್ಯ ಸಂಚಾಲಕರು, ಕೆಪಿಸಿಸಿ ಬೆಂಗಳೂರು, ಕಲಬುರ್ಗಿ ಜಿಲ್ಲೆ ಪ್ರಚಾರ ಸಮಿತಿ ಸಂಯೋಜಕರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಂಗ್ರೆಸ್ ನಾಯಕಿ ಸುನಿತಾ ಎಸ್. ಐಹೊಳೆ ಅವರನ್ನು ದಿ. 3-2-2026ರಂದು ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದೆ.
​ಪಟ್ಟಣದ ತಾ.ಪಂ. ಸಭಾಭವನದಲ್ಲಿ ಫೆ. 4ರಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸುನಿತಾ ಎಸ್. ಐಹೊಳೆ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುನಿತಾ ಐಹೊಳೆ ಅವರು, ನನಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ಆಯ್ಕೆ ಮಾಡಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ನಮ್ಮ ಪಕ್ಷದ ಮುಖಂಡರು ನನ್ನ ಕಾರ್ಯವೈಖರಿಯನ್ನು ಹಾಗೂ ಕಾಂಗ್ರೆಸ್ ಪಕ್ಷದಲ್ಲಿನ ನನ್ನ ಪಕ್ಷ ನಿಷ್ಠೆ ಹಾಗೂ ಪಕ್ಷ ಸಂಘಟನಾ ಕಾರ್ಯ, ಜನಪರ ಕಳಕಳಿ ಸೇವಾ ಕೆಲಸ ಕಾರ್ಯಗಳನ್ನು ಗುರುತಿಸಿ ಸ್ಥಾನ ಮಾನ ನೀಡಿದ್ದು ನನಗೆ ಖುಷಿ ತಂದಿದೆ.
​ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಹಲವು ಸ್ಥಾನ ಮಾನ ಜವಾಬ್ದಾರಿಗಳನ್ನು ನಮ್ಮ ಪಕ್ಷದ ಹಿರಿಯ ನಾಯಕರು ನೀಡಿದ್ದು, ಈಗ ಮತ್ತಷ್ಟು ನನಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ನನ್ನ ಅಧಿಕಾರದ ಹುದ್ದೆ, ಪಕ್ಷ ನೀಡಿರುವ ಸ್ಥಾನ ಮಾನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂಬ ವಿಶ್ವಾಸದೊಂದಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
​ಈ ಸಂದರ್ಭದಲ್ಲಿ ಮಾತನಾಡಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಥಣಿ ತಾಲೂಕು ಅಧ್ಯಕ್ಷರು ಹಾಗೂ ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೆ, ನಮ್ಮ ಅಥಣಿ ತಾಲೂಕಿನ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಕ್ರಿಯಾಶೀಲ ನಾಯಕಿಯಾಗಿರುವ ಸುನಿತಾ ಐಹೊಳೆ ಅವರಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ನಮಗೆ ಸಂತಸ ತಂದಿದೆ ಎಂದು ಹೇಳಿದರು.


ದಿಟ್ಟ ಹೆಜ್ಜೆ ಇಟ್ಟು ಸಮಾಜ ಮುಖಿ ಕೆಲಸಕ್ಕೆ ಪಣ ತೊಟ್ಟ ಮಹಿಳೆ ಶ್ರೀಮತಿ ಸುನಿತಾ ಐಹೊಳೆ ಎ.ಐ.ಸಿ.ಸಿ.ವೀಕ್ಷಕರು ರಾಜ್ಯ ಸಂಚಾಲಕರು ಕೆ.ಪಿ.ಸಿ.ಸಿ. ಅಥಣಿ
​ಮಹಿಳೆ ಎನ್ನುವ ಪದವನ್ನು ತ್ಯಾಗಕ್ಕೆ ಹೋಲಿಸಬಹುದು, ಯಾಕೆಂದರೆ ಒಬ್ಬ ಮಹಿಳೆ ತನ್ನ ಮನೆಯಲ್ಲಿ ಎಷ್ಟು ಕೆಲಸ ಇದ್ದರೂ, ಸುಧಾರಿಸಿಕೊಳ್ಳುವ ಎಷ್ಟೇ ಕಷ್ಟ ಇದ್ದರೂ ಮಿಸಿಯೊದರೇ ಮಾಡುತ್ತಾಳೆ. ಈ ಆಧುನಿಕ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ಎದ್ದ ಹೆಜ್ಜೆಗಳಲ್ಲೂ ತಮ್ಮ ಅಪ್ರತಿಮವಾದ ಸಾಧನೆಯನ್ನು ಜಗತ್ತಿನ ಎತ್ತರಕ್ಕೆ ಕೀರ್ತಿ ತಂದಿರುತ್ತಾರೆ. ಇವರು ಅದನ್ನು ಕಲಾವಿದರು ಹಂತ ಹಂತವಾಗಿ ಸಮಾಜದ ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಪ್ರಭಾವಶಾಲಿ ವ್ಯಕ್ತಿತ್ವವುಳ್ಳ ಮಹಿಳೆ ಶ್ರೀಮತಿ ಸುನಿತಾ ಐಹೊಳೆ ಅವರು. ಇವರು ತಮ್ಮ ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಪಭಾವಶಾಲಿ ಮಹಿಳೆ ಯಾಗಿದ್ದಾರೆ. ಇವರು ಪಕ್ಷದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡು ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇವರು ಯಾವುದೇ ಸ್ಥಾನಮಾನದ ನಿರೀಕ್ಷೆ ಇಲ್ಲದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
​ಸಮಾಜ ಮುಖಿಯಾಗಿ ಗುರುತಿಸುವ ಇವರ ಮನಸ್ಸು ಪ್ರಶಂಸನೀಯವಂತಿತ್ತು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಇವರು ರಾಜಕೀಯಕ್ಕೂ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಇವರು ಮಾಡಿರುವ ಪ್ರತಿಯೊಂದು ಸಮಾಜ ಮುಖಿ ಕೆಲಸಗಳು ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇವರು ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಇಂತಹ ನಿಸ್ವಾರ್ಥ ಸೇವೆಗೆ ಮನ್ನಣೆ ಸಿಗಲಿ ಎಂಬುದು ಜನರ ಆಶಯವಾಗಿದೆ.

ಮಹೇಶ್ ಮ್ ಶರ್ಮಾ ಶುಭ ಕೋರುವರು ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಇವರಿಗೆ ಸುನಿತಾ ಐಹೊಳೆ ಅಕ್ಕಾ ಅವರು ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಸದಾ ಕಾಟ್ಲದಲ್ಲಿ ದೊಡ್ಡ ಮಟ್ಟದ ಹುದ್ದೆಯಲ್ಲಿ ಅಲಂಕರಿಸಲಿ ಅಕ್ಕನ ಆಶೀರ್ವಾದ ನಮಗೂ ಇರಲಿ ಇವರ ಕುಟುಂಬ ನಗುನಗುತಾ ಚೆನ್ನಾಗಿ ಇರಬೇಕು ಸದಾಕಾಲ ಸಕಾಲ ಭಗವಂತನ ಅನುಗ್ರಹ ಇವರಿಗಿರಲಿ ಎನ್ನುವುದೇ ಸದಾ ಕಾಲ ನಮ್ಮಕ್ಕ ನಗುನಗುತ ಕುಟುಂಬ ಜೊತೆ ಸಂತೋಷವಾಗಿರಬೇಕು ನಮ್ಮ ಆಸೆ

42
7191 views

Comment