
ಪತ್ರಿಕಾ ಪ್ರಕಟಣೆ
ಅಥಣಿ ಹದ್ದಿಯಲ್ಲಿ ಕಾಡಸಿದ್ದೇಶ್ವರ ಆಶ್ರಮ ಹತ್ತಿರ ತಂಗಡಿ ಸಿನ್ನಾಳ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಆಡುತ್ತಿದ್ದ 7 ಜನ ಆಟಗಾರರಿಂದಾ 10,500/-ರೂಪಾ
ಪತ್ರಿಕಾ ಪ್ರಕಟಣೆ
ಅಥಣಿ ಹದ್ದಿಯಲ್ಲಿ ಕಾಡಸಿದ್ದೇಶ್ವರ ಆಶ್ರಮ ಹತ್ತಿರ ತಂಗಡಿ ಸಿನ್ನಾಳ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಆಡುತ್ತಿದ್ದ 7 ಜನ ಆಟಗಾರರಿಂದಾ 10,500/-ರೂಪಾಯಿ ಹಣ, 5 ಮೊಬೈಲಗಳು ಹಾಗೂ 5 ಮೋಟಾರ ಸೈಕಲಗಳ ಜಪ್ತಿ
ದಿನಾಂಕ 01-02-2026 ರಂದು 16-30 ಗಂಟೆಗೆ ಅಥಣಿ ಹದ್ದಿಯಲ್ಲಿ ಕಾಡಸಿದ್ದೇಶ್ವರ ಆಶ್ರಮ ಸಮೀಪ ಹಳೆ ತಂಗಡಿ ಸಿನ್ನಾಳ ರಸ್ತೆ ಬದಿಯ ಹುಣಸೆ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ಮಹಾನಿಂಗ ರಾಮಪ್ಪ ಮಾಳಿ ಸಾ॥ ಅಥಣಿ ಗವಿಸಿದ್ದನಮಡ್ಡಿ 2] ಶಶಿಕಾಂತ ಹರೀಬಾ ಕಾಂಬಳೆ ಸಾ|| ಅಥಣಿ ಮದ್ದೀನಮಡ್ಡಿ 3] ಆಸೀಪ ಅಸ್ಪಾಕಹುಸೇನ ದೇಸಾಯಿ ಸಾ॥ ಅಥಣಿ ವಿಧ್ಯಾನಗರ 4] ರವಿ ಶೇಖರ ಕುಂಬಾರ ಸಾ॥ ಅಥಣಿ ಕುಂಬಾರಗಲ್ಲಿ 5] ನೀಸಾರ ಮಹ್ಮದ ಡಾಂಗೆ ಸಾ॥ ಅಥಣಿ ಹಿಪ್ಪರಗಿ ಗಲ್ಲಿ 6] ಲಿಯಾಜ ಹಸನಸಾಬ ಫಕಾಲಿ ಸಾ॥ ಅಥಣಿ ನಾಲಬಂದ ಗಲ್ಲಿ 7] ಪ್ರವೀಣ ರಾಚಪ್ಪ ಗೌಡಪ್ಪನವರ ಸಾ|| ಶೇಗುಣಸಿ ಇವರು ಬೇಕಾಯ್ದೆಶೀರ ರೀತಿಯಿಂದ ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಎಲೆಗಳ ಮೇಲೆ 10.500/- ರೂಪಾಯಿ ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಅಂಬುವ ಜೂಜಾಟ ಆಡುತ್ತಿದ್ದಾಗ ವಿವಿಧ ಕಂಪನಿಯ 5 ಮೊಬೈಲಗಳು ಮತ್ತು 5 ಮೋಟಾರ ಸೈಕಲಗಳ ಸಮೇತ ದಾಳಿ ಕಾಲಕ್ಕೆ ಸಿಕ್ಕಿದ್ದು ಈ ಬಗ್ಗೆ ಅಥಣಿ ಪೊಲೀಸ ಠಾಣಾ ಅಪರಾಧ ಸಂಖ್ಯೆ 85/2026 ಕಲಂ 87 ಕೆ.ಪಿ. ಆ್ಯಕ್ಟ್ 112 ಬಿಎನ್‌ಎಸ್ ಆಕ್ಟ್-2023 ನೇದ್ದರ ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.