logo

ಕೆಪಿಸಿಸಿ ನೀತಿ ಸಂಶೋಧನೆ ಮತ್ತು ತರಬೇತಿ ವಿಭಾಗಕ್ಕೆ ಚಂದ್ರಪ್ಪ ಎಂ ಮಿಡ್ಡುಮುನಿ ನೇಮಕ ಆನೇಕಲ್: ಜ.26: ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದ ನಿವಾಸಿ ಮುನಿಯಪ್ಪ ಎಂ ಮತ್ತು ಶ್ರೀಮತ

ಕೆಪಿಸಿಸಿ ನೀತಿ ಸಂಶೋಧನೆ ಮತ್ತು ತರಬೇತಿ ವಿಭಾಗಕ್ಕೆ ಚಂದ್ರಪ್ಪ ಎಂ ಮಿಡ್ಡುಮುನಿ ನೇಮಕ

ಆನೇಕಲ್: ಜ.26: ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದ ನಿವಾಸಿ ಮುನಿಯಪ್ಪ ಎಂ ಮತ್ತು ಶ್ರೀಮತಿ ಕಾವೇರಮ್ಮ ದಂಪತಿ ಪುತ್ರರಾದ ಶ್ರೀ ಚಂದ್ರಪ್ಪ ಎಂ ಮಿಡ್ಡುಮುನಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗಕ್ಕೆ ಅನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಶ್ರೀ ಚಂದ್ರಪ್ಪ ಎಂ (ಮಿಡ್ಡುಮುನಿ) ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಆದೇಶಾನುಸಾರ ಮೇಲಿನ ತಿರ್ಮಾನವನ್ನು ಕೈಗೊಳ್ಳಲಾಗಿದೆ. ತಾವು ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಕೆಪಿಸಿಸಿಯ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ಸ್ಥಳಿಯ ನಾಯಕರ ಸಹಕಾರದೊಂದಿಗೆ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗದ ಸಂಘಟನೆ ಬಲಪಡಿಸಲು, ಆ ಮೂಲಕ ಪಕ್ಷದ ಬಲವರ್ಧನೆಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗದ ಅಧ್ಯಕ್ಷರು ಹಾಗೂ ಮುಖ್ಯ ವಕ್ತಾರರಾದ ಶ್ರೀ ರಘು ದೊಡ್ಡಲಿರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದ್ರಪ್ಪ ಎಂ ಮಿಡ್ಡುಮುನಿ ಅವರು ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ ಗ್ರಾಮೀಣಾಭಿವೃದ್ಧಿ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಮಂಚೂಣಿ ನಾಯಕರಾಗಿ, ಪ್ರಸ್ತುತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಂಗ ಸಂಸ್ಥೆ ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕರಾಗಿ, ಕರ್ನಾಟಕ ಶೋಷಿತ ಒಕ್ಕೂಟದ ಸಕ್ರಿಯ ಕಾರ್ಯಕರ್ತರಾಗಿ, ಹಲವಾರು ವಿದ್ಯಾರ್ಥಿ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಾ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತಮ್ಮದೇ ಆದ ಹಲವಾರು ವಿಭಿನ್ನ ರೀತಿಯ ಕೊಡುಗೆಗಳಲ್ಲಿ ಸಂಶೋಧಕರಾಗಿ ಗುರುತಿಸಿಕೊಂಡಿದ್ದಾರೆ.

ಸಂತಸ ವ್ಯಕ್ತಪಡಿಸಿರುವ ಚಂದ್ರಪ್ಪ ಎಂ ಮಿಡ್ಡುಮುನಿ ಅವರು ಈ ಮಹತ್ತರ ಅವಕಾಶವನ್ನು ತಮಗೆ ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾ, ಪಕ್ಷದ ಆದರ್ಶಗಳನ್ನು ಕಾಪಾಡಿ, ಜನಪರ ರಾಜಕೀಯ, ಸಂಘಟನೆಯನ್ನು ಬಲಪಡಿಸುವ ಚಟುವಟಿಕೆಗಳನ್ನು ಮುಂದುವರೆಸಲು ನಾನು ಬದ್ಧನಾಗಿದ್ದೇನೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ, ಆನೇಕಲ್ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಿ. ಶಿವಣ್ಣ ರವರಿಗೆ, ವಿಭಾಗದ ಅಧ್ಯಕ್ಷರಾದ ಶ್ರೀ ರಘು ದೋಡೇರಿ ರವರಿಗೆ ಮತ್ತು ಹಿರಿಯರಿಗೆ ಮತ್ತಿತರ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಆನೇಕಲ್ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳು, ಕುಟುಂಬ ವರ್ಗದವರು, ಸ್ನೇಹಿತರು ಶುಭ ಕೋರಿ, ಈ ದಿಸೆಯಲ್ಲಿ ತಮಗೆ ಹೆಚ್ಚಿನ ಯಶಸ್ಸು ಸಿಗಲೆಂದು ಅಭಿನಂದನೆ ಸಲ್ಲಿಸಿದ್ದಾರೆ.

14
1043 views