
ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ (ರಿ)
ಉತ್ತರ ಪ್ರಾಂತ, ಜಿಲ್ಲಾ ಘಟಕ ಬೆಳಗಾವಿ
ಮಾನ್ಯ ಜಿಲ್ಲಾಧಿಕಾರಿಗಳು
ಬೆಳಗಾವಿ.
ವಿಷಯ : ಬೆಳಗಾವಿ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನ
ಭಾರತೀಯ ಕಿಸಾನ ಸಂಘ-ಕರ್ನಾಟಕ ಪ್ರದೇಶ (ರಿ)
ಉತ್ತರ ಪ್ರಾಂತ, ಜಿಲ್ಲಾ ಘಟಕ ಬೆಳಗಾವಿ
ಮಾನ್ಯ ಜಿಲ್ಲಾಧಿಕಾರಿಗಳು
ಬೆಳಗಾವಿ.
ವಿಷಯ : ಬೆಳಗಾವಿ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ಕುರಿತು.
ಮಾನ್ಯರೇ,
ಮೇಲ್ತಾಣಿಸಿದ ವಿಷಯದನ್ವಯ ಭಾರತೀಯ ಕಿಸಾನ್ ಸಂಘ ಬೆಳಗಾವಿ ಜಿಲ್ಲಾ ಘಟಕವು ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಲಾಗಿದೆ. ಈ ಸಮಸ್ಯೆಗಳನ್ನು ತಾವುಗಳು ತ್ವರಿತಗತಿಯಲ್ಲಿ ಪರಿಹರಿಸಬೇಕೆಂದು ಆಗ್ರಹಿಸುತ್ತೇವೆ.
ರೈತರಿಗೆ ಮಾರಕವಾಗಿರುವ ರೈತರ ಆರ್ಥಿಕ ಶಕ್ತಿಯನ್ನು ಕುಗ್ಗಿರುವ ತೀವ್ರ ಸ್ವರೂಪದ ಸಮಸ್ಯೆಗಳು
1. ರಂಗರಾಜನ್ ಕಮಿಟಿ ವರದಿ ಪ್ರಕಾರ ಕಬ್ಬಿನ ಉಪಉತ್ಪನ್ನಗಳ ಲಾಭಾಂಶದಲ್ಲಿ 30% ಕಾರ್ಖಾನೆಗಳಿಗೆ ಮತ್ತು 70% ರೈತರಿಗೆ ನೀಡುವಂತಾಗಬೇಕು
2. ಕಬ್ಬಿಣ ತೂಕದಲ್ಲಾಗುವ ಮೊಸ ತಪ್ಪಿಸಲು ಕಾರ್ಖಾನೆಗಳ ಹೊರಗೆ ತೂಕದ ಯಂತ್ರಗಳನ್ನು ಅಳವಡಿಸುವದು
3. ಭಾರತದ ಕೆಲವೊಂದು ರಾಜ್ಯಗಳು ಪ್ರೋತ್ಸಾಹ ನೀಡುವಂತೆ ನಮ್ಮ ರಾಜ್ಯ ಸರಕಾರವು ಪ್ರತಿ ಟನ್ ಕಬ್ಬಿಗೆ 1000 ರೂ ಪ್ರೋತ್ಸಾಹ ಧನ ನೀಡುವುದು
4. ಗೋವಿನಜೋಳ ಬೆಳೆದ ರೈತರು ಸರ್ಕಾರದ ವಿಳಂಬನೀತಿಯಿಂದಾಗಿ ಗೋವಿನಜೋಳ ಖರೀದಿಕೇಂದ್ರ ಪ್ರಾರಂಭಿಸದ ಪರಿಣಾಮ ಕ್ವಿಂಟಲಗೆ 1700 1800. ಮಾರಾಟದ ಮಾಡುತ್ತಿದ್ದಾರೆ. ಖರೀದಿಕೇಂದ್ರಗಳನ್ನು ಪ್ರತಿ ತಾಲೂಕಿನಲ್ಲಿ 4 ಸ್ಥಳಗಳಲ್ಲಿ ಪ್ರಾರಂಭಿಸಿ ಬೆಂಬಲ್ ಬೆಲೆಯಲ್ಲಿ ಖರೀದಿಸುವುದು
5. ಕಡಲೇ ಹಾಗೂ ಜೋಳ ಶೀಘ್ರದಲ್ಲಿ ಕಟಾವಿಗೆ ಬಂದಿದ್ದು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ವ್ಯವಸ್ಥೆ ಮಾಡುವದು.
6. ಭೂ ಮಾಪನ ಇಲಾಖೆಯಲ್ಲಿ ಭೂ ಸರ್ವೆಯಂತ್ರಗಳು ಸರ್ಕಾರದ ಆದಿನದಲ್ಲಿಟ್ಟಕೊಂಡು ರೈತರ ಜಮೀನುಗಳನ್ನು ಸರ್ವೆ ಮಾಡಬೇಕು.
7. ಸನ್ 2025-26 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಗಳಿಗೆ ಪರಿಹಾರ ಸಮರ್ಪಕವಾಗಿ ಎಲ್ಲಾ ರೈತರಿಗೆ ದೂರೆಯಬೇಕು.
8. ಬೆಳೆ ವಿಮಾ ಪರಿಹಾರದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಬೇಕು
9. ಗ್ರಾಮ ಪಂಚಾಯತ ಕಾರ್ಯಾಲಯ ನಗರ ಸಭೆ ಕಾರ್ಯಾಲಯಗಳಲ್ಲಿ ಇ-ಖಾತಾ ನೀಡಲು ವಿಳಂಭಕ್ಕೆ ಕಾರಣವಾದ ಸಿಬ್ಬಂದಿ ಮೆಲೆ ಕ್ರಮ ಜರುಗಿಸಬೇಕು
10. ಬಹುದಿನಗಳಿಂದ ವಿಳಂಭವಾಗುತ್ತಿರುವ ಕಳಸಾ ಬಂಡೂರಿ ಯೋಜನೆ ಪೂರ್ಣಗೊಳಿಸುವದು
11. ಸತ್ತಿಗೇರಿ ಏತ ನೀರಾವರಿ ಹಾಗೂ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರಿಗೆ ನೀರು ಪೂರೈಸುವುದು ರಾಮಲಿಂಗೇಶ್ವರ ಏತ ನೀರಾವರಿಗೆ ಬೇಸಿಗೆಯಲ್ಲಿ 3 ಸಾರಿ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿ
12. ವಿದ್ಯುತ್ ಇಲಾಖೆಯಲ್ಲಿ ಹೊಸದಾಗಿ ವಿದ್ಯುತ ಸಂಪರ್ಕ ಕಲ್ಪಿಸಲು ರೈತರಿಗೆ ಆರ್ಥಿಕವಾಗಿ ತುಂಬಾ ಹೊರೆಯಾಗಿದೆ. ಕಾರಣ ಮೊದಲಿದ್ದ ವ್ಯವಸ್ಥೆ ಜಾರಿಗೊಳಿಸಿ
13. ಕಂದಾಯ ಇಲಾಖೆಯಲ್ಲಿ ರೈತರ ಪಹಣಿ ಪತ್ರಿಕೆಗಳನ್ನು ಒಂದುಗೂಡಿಸುವದರಿಂದ (ಈಗಾಗಲೇ ಪೋಡಿ ಆದವುಗಳನ್ನು ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾರಣ ಒಂದುಗುಡಿಸಿದ ಪಹಣಿ ಪತ್ರಿಕೆಗಳನ್ನು ಇಲಾಖೆಯೇ 1 ತಿಂಗಳಲ್ಲಿ ಪ್ರತ್ಯೇಕಿಸಿ ಪುನಃ ರೈತರಿಗೆ ನೀಡುವ ವ್ಯವಸ್ಥೆ ಆಗಬೇಕು.
14. ಪ್ರತಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಿ ಇದರಿಂದ ಇಲಾಖೆಯ ಕಾರ್ಯಕ್ಷಮತೆ ಹೆಚ್ಚುವುದು.
15. ಖಾನಾಪೂರ ತಾಲೂಕಿನ ಅರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳಿಂದ ರೈತರಿಗೆ, ಜಾನುವಾರಗಳಿಗೆ, ಬೆಳೆಗೆ, ರಕ್ಷಣೆ ಒದಗಿಸಬೇಕು.
16. ಶ್ರೀ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡಗಳ (1200) ಮಂಜೂರಾತಿಗೊಳಿಸಿ ಅದರ ಜೊತೆ ವಿದ್ಯುತ್ ಪೂರೈಕೆಗಾಗಿ ಟಿ.ಸಿ.ಯನ್ನು ಒದಗಿಸುವುದು ಮತ್ತು 10 ಹೆಚ್.ಪಿ.ಪಂಪಸೆಟ್ ಒದಗಿಸಲು ಹೆಚ್ಚುವರಿ ಅನುದಾನವನ್ನು ಈ ನೀರಾವರಿ ಯೋಜನೆಗೆ ಮಂಜೂರಾತಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ.
17. ಶ್ರೀ ಬಸವೇಶ್ವರ ಏತ ನೀರಾವತಿ ಬಿಳೇಗಾಂವ ಈ ಯೋಜನೆಯನ್ನು ತುರ್ತಾಗಿ ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಿ ಜೂನ್ ಅಂತ್ಯದ ವೇಳೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ಕೇಳಿಕೊಳ್ಳುತ್ತೇವೆ.
18. ಅಥಣಿ ತಾಲೂಕಿನ ಕಕಮರಿ ಗ್ರಾಮದಿಂದ ವಿಜಯಪೂರ ಜಿಲ್ಲೆ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಹರಿದಿರುವ ದೋಣಿ ನದಿಯ ಹಳಳೆ ಪ್ರತಿ 2 ಕಿ.ಮೀ ಒಂದರಂತೆ ಬ್ರಿಜ್ ಕಂ. ಬಾಂದಾರ ನಿರ್ಮಾಣ ಮಾಡುವ ಈ ಯೋಜನೆಯನ್ನು ಕೈಕೊಳ್ಳಬೇಕು.
19. ರಾಜ್ಯ ಸರಕಾರದಿಂದ ರೈತ ಬೆಳೆದ ತೋಗರಿ ಬೆಳೆಗೆ ಪ್ರೋತ್ಸಾಹ ಧನವನ್ನು ಪ್ರತಿ ಕ್ವಿಂಟಾಲಗೆ 2 ಸಾವಿರ ರೂಪಾಯಿಗಳನ್ನು ಶೀಘ್ರದಲ್ಲಿ ಘೋಷಣೆ ಮಾಡುವದಾಗಬೇಕು.
20. ರಾಯಭಾಗದಲ್ಲಿ ಎ.ಪಿ.ಎಮ್.ಸಿ ಕೇಂದ್ರ ಸ್ಥಾಪಿಸಲು ಕ್ರಮ ಕೈಕೊಳ್ಳಬೇಕು.
21. ರಾಯಭಾಗ ಹಾಗೂ ಜಿಲ್ಲೆಯ ಎಲ್ಲ ತಾಲೂಕಗಳಲ್ಲಿ ಭೂ ಸರ್ವೆ ಇಲಾಖೆಯಲ್ಲಿ ಪಿ.ಟಿ. ಸೀಟಿ ನೀಡಲು ದಾಖಲೆಗಳು ಹರಿದಿವೆ ಎಂದು ಕಾರಣ ಹೇಳಿ ಹಣ ಪಡೆಯುವುದು ನಿಲ್ಲಬೇಕು. ಮತ್ತು ದಾಖಲೆಗಳನ್ನು ಹೊಸದಾಗಿ ತಯಾರಿಸಿ ಇಡಬೇಕು.
22.ಕೃಷ್ಣಾ ನದಿ ನೀರು ಹರಿಯುವ ಪ್ರಮಾಣ ಕಡಿಮೆಯಾಗುತ್ತಿದೆ. ಕಾರಣ ಪ್ರತಿ ತಿಂಗಳು ಕೊಯಿನಾ ಡ್ಯಾಮನಿಂದ ಪ್ರತಿ ತಿಂಗಳು ನೀರು ಹರಿಸಬೇಕು.
23.ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 10 ಗ್ರಾಮಗಳಲ್ಲಿ ಗೋಕುಲ ಧಾಮ (ಇಕೋ ವಿಲೆಜ) ಸ್ಥಾಪಿಸಬೇಕು.
ಮೇಲಿನ ಎಲ್ಲಾ ಬೇಡಿಕೆಗಳು ಸಮಂಜಸವಾಗಿದ್ದು ಇವುಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಶೀಘ್ರ ಪರಿಹರಿಸಬೇಕೆಂದು ಭಾರತೀಯ ಕಿಸಾನ ಸಂಘ ಜಿಲ್ಲಾ ಘಟಕ ಆಗ್ರಹಪಡಿಸುತ್ತದೆ.
ಧನ್ಯವಾಗಳೊಂದಿಗೆ
ಬೆಳಗಾವಿ ಜಿಲ್ಲೆ, ಕರ್ನಾಟಕ ರಾಜ್ಯ :
ಇಂದು, ಭಾರತೀಯ ಕಿಸಾನ್ ಸಂಘ -ಬೆಳಗಾವಿ ಜಿಲ್ಲಾ ಪದಾಧಿಕಾರಿಗಳಿಂದ ಕರ್ನಾಟಕ ರಾಜ್ಯಸರಕಾರಕ್ಕೆ ಬೆಳಗಾವಿ ಜಿಲ್ಲೆಯ ವಿವಿಧ ಜ್ವಲಂತ ಸಮಸ್ಸೆಗಳ ಕುರಿತು ಹಾಗೂ ನೀರಾವರಿ ಯೋಜನೆಗಳ ಹೆಚ್ಚುವರಿ ಅನುಧಾನ ಮಂಜೂರಾತಿ ಕೋರಿ, ಶೀಘ್ರಗತಿಯಲ್ಲಿ ಬಗೆಹರಿಸಲು ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಪತ್ರ ರವಾನಿಸಲಾಗಿದೆ.
ಈ ಸಂದರ್ಭದಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಭಾಗದ ಜಿಲ್ಲಾ ಪದಾಧಿಕಾರಿಗಳು, ತಾಲೂಕಾ ಪದಾಧಿಕಾರಿಗಳು ಹಾಗೂ ಕರ್ನಾಟಕ ಉತ್ತರ ಪ್ರಾಂತ ಪದಾಧಿಕಾರಿಗಳಾದ- ಪ್ರಾಂತ್ ಅಧ್ಯಕ್ಷ ಶ್ರೀ ವಿವೇಕ್ ಮೋರೆ ಹಾಗೂ ಪ್ರಾಂತ ಉಪಾಧ್ಯಕ್ಷರಾದ ಶ್ರೀ ಜಯಪಾಲ ನಾಗನೂರ್, ಪ್ರಾಂತ ಸಹ ಕಾರ್ಯದರ್ಶಿ ಶ್ರೀ ಶಿವಲಿಂಗಪ್ಪಾ ಗಾಣಿಗೇರ ಉಪಸ್ಥಿತರಿದ್ದರು.
ಭಾರತೀಯ ಕಿಸಾನ್ ಸಂಘ -ಕರ್ನಾಟಕ ಪ್ರದೇಶ.