logo

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲೆ ಘಟಕ. ಮಾನ್ಯ ಜಿಲ್ಲಾಧಿಕಾರಿಗಳು: ದಿನಾ। 12/1/26" ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿ ಜಿ। ಯಾದಗಿರಿ. ಜಿಲ್

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲೆ ಘಟಕ.

ಮಾನ್ಯ ಜಿಲ್ಲಾಧಿಕಾರಿಗಳು:

ದಿನಾ।

12/1/26"

ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿ ಜಿ। ಯಾದಗಿರಿ.

ಜಿಲ್ಲಾಧಿಕಾರಿಗಳ ಕಾರ್ಯಾ

ಯಾದಗಿರಿ ಜಿಲ್ಲೆ ಯಾದಗಿರಿ

ವಿಷಯ: ಯಾದಗಿರಿ ಜಿಲ್ಲೆಯದ್ಯಾಂತ ಕಾಟನಮಿಲ್ ಮಾಲಿಕರು ರೈತ & ರೈತ ಸಂಘದವರ ಜೊತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವದರಿಂದ ರೈತಹಿರೈತ ಸಂಘದ ಮಾನಸಿಕ ಆತ್ಮ ಕೈರ್ಯ ಕುಸಿಯುತ್ತಿರುವದಿಂದ ಅಂತಹ ಕಾಟನ ಮಿಲ್ ಮಾಲಿಕರ ಮಾರಾಟದ ಪರವಾನಿಗೆಯನ್ನು ರದ್ದುಗೊಳಿಸುವ ಕುರಿತು.

ಮಾನ್ಯರೆ,

ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಗೆ ಸಹಿ ಮಾಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ(ಜುನ್ನಪ್ಪ ಪೂಜಾರಿ ರಾಜ್ಯಾಧ್ಯಕ್ಷರು ಹಾಗೂ ಶಶಿಕಾಂತ ಗುರುಜಿ ರಾಜ್ಯ ಗೌರವಾಧ್ಯಕ್ಷರು ಬಣದ ವತಿಯಿಂದ) ಯಾದಗಿರಿಯ ಜಿಲ್ಲಾಧ್ಯಕ್ಷರಾದ ಶ್ರೀ ಮಹಾಂತಗೌಡ ಮಕದಮ್ ಪಾಟೀಲ ಮದ್ದಬೇಕಿ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,

ಸದರಿ ಈ ಮೇಲ್ಕಾಣಿಸಿದ್ದ 'ವಿಷಯಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯಾದ್ಯಂತ ಇರುವ ಹತ್ತಿ ಖರೀದಿ ಮಾಡುವ ಕಾಟನ ಮಿಲ್ ಮಾಲಿಕರು ರೈತರು ತಮ್ಮ ಹತ್ತಿಯನ್ನು ಮಾರಾಟ ಮಾಡುವ ಸಮಯದಲ್ಲಿ ಅಲ್ಪಸ್ವಲ್ಪ ತೂಕದಲ್ಲಿ ವ್ಯತ್ಯಾಸವಾದರೆ ಅದನ್ನು ಕೇಳಲು ಹೋದ ರೈತರಿಗೆ ಅವಾಚ್ಯಶಬ್ದಗಳಿಂದ ಬೈದು ಕಳುಹಿಸುವದು ಇದನ್ನು ರೈತರು ರೈತ ಸಂಘಕ್ಕೆ ದೂರು ಕೊಟ್ಟಾಗ ಆಗ ರೈತ ಸಂಘದವರು ಈ ಘಟನೆಯ ಬಗ್ಗೆ ಕೇಳಲು ರೈತ ಸಂಘದವರಿಗೂ ಬೈದು ಕಳುಹಿಸುವ ಪದ್ಧತಿ ಈಗೀಗ ನಡೆಯುತ್ತಿದ್ದು ಅದರಂತೆ ಇತ್ತೀಚಿನ ದಿನಗಳ ಹಿಂದೆ ಇದೇ ಶಹಾಪೂರ ತಾಲೂಕಿನ ಮನಗನಾಳ ಗ್ರಾಮದ ಹೊರವಲಯದಲ್ಲಿರುವ ಶ್ರೀ ಜಯಲಕ್ಷ್ಮೀ ಕಾಟನಮಿಲ್ ಮಾಲಿಕರಾದ ಶ್ರೀ ಆನಂದ ರಾಟಿದವರು ರೈತರಿಂದ ಹತ್ತಿಯನ್ನು ಖರೀದಿ ಮಾಡಿ ನಿಗದಿತ ಬೆಲೆಯನ್ನು ನೀಡದಿದ್ದಕ್ಕಾಗಿ ಕೇಳಲು ಹೋದ ರೈತರಿಗೆ ಹಾಗೂ ರೈತ ಸಂಘದವರಿಗೆ" ಅವಾಚ್ಯಪಬ್ದಗಳಿಂದ ಬೈಯುತ್ತಾ ಅವಮಾನ ಪಡಿಸಿರುವ ಕಾಟನಮಿಲ್‌ನ ಸಿ.ಸಿ.ಐ ಲೈಸೆನ್ಸನ್ನು ಇಂದಿನಿಂದಲೇಕೆ ರದ್ದುಗೊಳಿಸಿದ್ದು ಅಲ್ಲದೆ ಮುಂದಿನ ದಿನಗಳಲ್ಲಿ ಈತನಿಗೆ ಹತ್ತಿ ಖರೀದಿಗೆ ಪರವಾನಿಗೆಯನ್ನು ನೀಡಬಾರದೆಂದು ಈ ಮೂಲಕ ನಮ್ಮ ಸಂಘಟನೆಯ ವತಿಯಿಂದ ಕೇಳಿಕೊಳ್ಳುತ್ತೇವೆ ಒಂದು ವೇಳೆ ನಮ್ಮ ಸಂಘಟನೆಯ ಮನವಿಯನ್ನು ತಿರಸ್ಕರಿಸಿ ಆ ಕಾಟನಮಿಲಗೆ ಕಮುಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಕಛೇರಿಯ ಮುಂದೆ ಉಗ್ರವಾದ ಹೋಟಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸುತ್ತಾ ಮತ್ತೊಮ್ಮೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಧನ್ಯವಾದಗಳೊಂದಿಗೆ

ಪ್ರತಿಯನ್ನು:

1)ಭಾರತೀಯ ಹತ್ತಿ ನಿಗಮ ಕೇಂದ್ರ ವಲಯ ಕಛೇರಿ ಹುಬ್ಬಳ್ಳಿ

2) ತಹಸೀಲ ಕಾರ್ಯಾಲಯ ಶಹಾಪೂರ ಜಿನ ಯಾದಗಿರಿ



ಶ್ರೀ ಮಹಾಂತಗೌಡ ಮಕದಮ್ ಪಾಟೀಲ ಮದ್ದರು ಜಿಲ್ಲಾಧ್ಯಕ್ಷರು ಯುವ ಘಟಕ ಯಾದಗಿರಿ

6
647 views