logo

ಕಲಬುರ್ಗಿ ಜಿಲ್ಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ, ಕಲಬುರಗಿ ಇವರಿಗೆ, 2: 12-01-2026. ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು, ಮಾನ್ಯ ಮುಖ್ಯ ಮಂತ್ರ

ಕಲಬುರಗಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ರೈತ ಸಂಘದಿಂದ ಆಗ್ರಹ
January 12, 2026


ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾ ಘಟಕವು ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಒತ್ತಾಯ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿದ್ದರೂ, ಇಲ್ಲಿಯವರೆಗೆ ರೈತರಿಗೆ ಬೆಳೆ ವಿಮೆ ವಿತರಣೆಯಾಗಿಲ್ಲ. ಕೂಡಲೇ ಎಲ್ಲಾ ಬೆಳೆಗಳಿಗೆ ವಿಮೆ ಪರಿಹಾರ ಧನ ನೀಡಬೇಕು ಮತ್ತು ಅತಿವೃಷ್ಟಿ ಪರಿಹಾರ ಪಡೆಯದ ಬಾಕಿ ಇರುವ 50% ರೈತರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಸಂಘವು ಆಗ್ರಹಿಸಿದೆ.

ಸಾಲ ಸೌಲಭ್ಯ ಹಾಗೂ ಮನ್ನಾ: ಡಿ.ಸಿ.ಸಿ. ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳಲ್ಲಿ ಕಳೆದ 10 ವರ್ಷಗಳಿಂದ ನೂತನ ಸದಸ್ಯರಾದ ರೈತರಿಗೆ ಸಾಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್‌ನಲ್ಲಿ ಹೊಸ ಸದಸ್ಯರಿಗೂ ಸಾಲ ನೀಡುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಂಕಷ್ಟದಲ್ಲಿರುವ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.


ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಪ್ಯಾಕೇಜ್: ಅತಿವೃಷ್ಟಿಯಿಂದಾಗಿ ಜಮೀನುಗಳಿಗೆ ಹೋಗುವ ದಾರಿಗಳು ಸಂಪೂರ್ಣ ಹಾಳಾಗಿದ್ದು, ರೈತರು ದವಸ ಧಾನ್ಯಗಳನ್ನು ಮನೆಗೆ ತರಲು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ 'ನಮ್ಮ ಹೊಲ ನಮ್ಮ ದಾರಿ' ಯೋಜನೆಯಡಿ ಪ್ರತಿ ತಾಲೂಕಿಗೆ ತಲಾ 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಮತ್ತು ಈ ಹಿಂದೆ ನೀಡಿದ ಭರವಸೆಯಂತೆ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಎಸ್. ಜಮಾದಾರ, ಕಮಾಲ ಪಟೇಲ ಗೌರವಅಧ್ಯಕ್ಷರು ಜೇವರ್ಗಿ.ತಾಲೂಕು ಅಧ್ಯಕ್ಷರುಗಳಾದ ಈರಣ್ಣ ಬಜಂತ್ರಿ (ಯಡ್ರಾಮಿ), ಜಗದೀಶ ಕಡ್ಲಿ (ಜೇವರ್ಗಿ), ಜಿಲ್ಲಾ ಗೌರವ ಅಧ್ಯಕ್ಷ ವಿಠಲ ಮಾಕಾ ಗೌಡರು, ಜಿಲ್ಲಾ ಉಪಾಧ್ಯಕ್ಷ ಶಿವಯ್ಯ ಸ್ವಾಮಿ ಮತ್ತು ಮಹಿಳಾ ಘಟಕದ ಕಮಲಾಬಾಯಿ ಸಜ್ಜನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಕಲಬುರ್ಗಿ ಜಿಲ್ಲೆ ಕರ್ನಾಟಕ ರಾಜ್ಯ ರೈತ ಸಂಘ
ಹಾಗೂ ಹಸಿರು ಸೇನೆ
ಜಿಲ್ಲಾ ಘಟಕ, ಕಲಬುರಗಿ


ಇವರಿಗೆ,

2: 12-01-2026.

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು, ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.

ಮಾನ್ಯರೇ,

ವಿಷಯ:- ಕಲಬುರಗಿ ಜಿಲ್ಲೆಯ ರೈತರ ವಿವಿಧ ಬೇಡಿಕೆಗಳ ಕುರಿತು ಮನವಿ.

ಮೇಲ್ಕಂಡ ವಿಷಯ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ ಜಿಲ್ಲಾ ಘಟಕ, ಕಲಬುರಗಿ ವತಿಯಿಂದ ಕರ್ನಾಟಕ ಸರ್ಕಾರದ ಅತೀ ಹೆಚ್ಚು ಧೀರ್ಘಕಾಲದ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಮಾನ್ಯರೆ ಇದೇ ಖುಷಿಯಿಂದ ರೈತರ ಬೇಡಿಗಳನ್ನು ಕೂಡಾ ಬಗೆಹರಿಸಿಕೊಡುತ್ತಿರೇಂದು ನಾವು ನಂಬಿರುತ್ತೇವೆ. ಕಲಬುರಗಿ ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಈ ಕೆಳಗಿನಂತಿರುತ್ತವೆ.

ಹಕ್ಕುವತ್ತಾಯಗಳು

1. ಅತೀ ವೃಷ್ಟಿಯಿಂದ ಸಂಪೂರ್ಣ ಬೆಳೆ ಹಾಳಾಗಿರುವುದಕ್ಕೆ ಬೆಳೆ ವಿಮೆ ಇಲ್ಲಿಯವರೆಗೆ ನೀಡಿರುವುದಿಲ್ಲ. ಕೂಡಲೇ ಎಲ್ಲಾ ಬೆಳೆಗಳಿಗೆ ವಿಮೆ ಪರಿಹಾರ ಧನ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.

2. ಡಿ.ಸಿ.ಸಿ. ಬ್ಯಾಂಕಿನ ವ್ಯಾಪ್ತಿಯಲ್ಲಿ ಬರುವ ಸೋಸೆಟಿಗಳಲ್ಲಿ 10 ವರ್ಷದಿಂದ ನೂತನ ಸದಸ್ಯತ್ವ ಆದ ರೈತರಿಗೆ ಸಾಲ ನೀಡಿರುವುದಿಲ್ಲ. ಆದಕಾರಣ ಬರುವ ಬಜೇಟ್‌ನಲ್ಲಿ ಕೂಡಲೇ ರೈತರಿಗೆ ಸಾಲ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

3. ರೈತರು ಅತೀ ವೃಷ್ಟಿಯಿಂದ ಕಂಗಲಾಗಿರುವ ರೈತರ ರಾಷ್ಟ್ರೀಯಕೃತ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಮಾಡಬೇಕೆಂದು ವಿನಂತಿ.

4. ಅತೀ ವೃಷ್ಟಿಯಿಂದ ಬೆಳೆ ಹಾಳಾದ ರೈತರಿಗೆ ಪರಿಹಾರ ಧನ 50% ರಷ್ಟು ರೈತರಿಗೆ ಪರಿಹಾರ ಧನ ಬಂದಿರುವುದಿಲ್ಲ. ಕೂಡಲೇ ಪರಿಶೀಲನೆ ಮಾಡಿ ಎಲ್ಲಾ ರೈತರಿಗೆ ಪರಿಹಾರ ಧನ ನೀಡಬೇಕೆಂದು ವಿನಂತಿ.
5. 5. 2024-25 ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ನಮ್ಮ ರಾಜ್ಯ ಅಧ್ಯಕ್ಷರಿಗೆ ಮಾತು ನೀಡಿರುತ್ತೀರಿ. ಅದರಂತೆ ಬರುವ ಬಜೇಟ್ ಅಧಿವೇಶನದಲ್ಲಿ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆದು ಮಾತಿನಂತೆ ನಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

6. ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ರೈತರ ಜಮೀನಿಗೆ ಹೋಗುವ ಎಲ್ಲಾ ದಾರಿಗಳನ್ನು ಅತೀವೃಷ್ಟಿಯಿಂದ ಸಂಪೂರ್ಣವಾಗಿ ಹಾಳಾಗಿರುತ್ತವೆ. ಆದಕಾರಣ ರೈತರ ಹೊಲ ಗದ್ಯಗಳಿಂದ ದವಸ ದಾನ್ಯಗಳನ್ನು ತರಲು ರೈತರು ತುಂಬಾ ತೊಂದರೆ ಅನುಭವಿಸಿರುತ್ತಾರೆ. ಆದ್ದರಿಂದ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿಯಲ್ಲಿ ಪ್ರತಿ ತಾಲೂಕಿಗೆ 50 ಕೋಟಿ ಪ್ಯಾಕೇಜ್ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಮಹಾಂತೇಶ ಎಸ್ ಜಮಾದಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ .. 9008835551.

ಈರಣ್ಣ/ಪಜರತ್ರಿ ತಾಲೂಕ ಅಧ್ಯಕ್ಷರು ಯಡ್ರಾಮಿ

ವಿಠಲ ಮಾಕಾ ಗೌಡರು ಜಿಲ್ಲಾ ಗೌರವ ಅಧ್ಯಕ್ಷರು

ಶಿವಯ್ಯ ಸ್ವಾಮಿ ಜಿಲ್ಲಾ ಉಪಾಧ್ಯಕ್ಷರು

ಜಗದೀಶ ಕಡ್ಲಿ ಜೇವರ್ಗಿ ತಾಲೂಕ ಅಧ್ಯಕ್ಷರು

ಕಮಲಾಬಾಯಿ ಸಜ್ಜನ್ ಕಲಬುರಗಿ ಜಿಲ್ಲಾ ಮಹಿಳಾ

ಕರ್ನಾಟಕ ರಾಜ್ಯ ರೈತ ಸಂಘ
ಹಾಗೂ ಹಸಿರು ಸೇನೆ
ಜಿಲ್ಲಾ ಘಟಕ, ಕಲಬುರಗಿ ಸದಸ್ಯರು ಉಪಸ್ಥಿತರಿದ್ದರು ಅನೇಕ ಮುಖಂಡರು

16
786 views