logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸತ್ತಿ ರೋಡ್ ಶ್ರೀ ಸಾಯಿಬಾಬಾ ಜಾತ್ರಾ ಮಹೋತ್ಸವ 27.12.2025 ರಂದು ವಿಜೃಂಭಣೆಯಿಂದ ಅದ್ದೂರಿಯಿಂದ ಜರಗಲಿದೆ || ಓಂ ಸಾಯಿ ರಾಮ ॥ ಶ್ರೀ ಸಾಯಿ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಸತ್ತಿ ರೋಡ್ ಶ್ರೀ ಸಾಯಿಬಾಬಾ ಜಾತ್ರಾ ಮಹೋತ್ಸವ 27.12.2025 ರಂದು ವಿಜೃಂಭಣೆಯಿಂದ ಅದ್ದೂರಿಯಿಂದ ಜರಗಲಿದೆ

|| ಓಂ ಸಾಯಿ ರಾಮ ॥

ಶ್ರೀ ಸಾಯಿ ಸೇವಾ ಟ್ರಸ್ಟ್ ದೇವಸ್ಥಾನ (ರಿ)

ಸತ್ತಿ ರೋಡ, ಅಥಣಿ, (ಜಿ॥ ಬೆಳಗಾವಿ)

'ಜಾತ್ರಾ ಮಹೋತ್ಸವ

ಶನಿವಾರ ದಿ. 27-12-2025 ರಂದು ಜರುಗುವುದು.

ಸ್ಥಳ : ಶ್ರೀ ಸಾಯಿ ಮಂದಿರ, ಸಾಯಿ ನಗರ, ಸತ್ತಿ ರೋಡ, ಅಥಣಿ.

ಕಾರ್ಯಕ್ರಮಗಳ ವಿವರ

ಶನಿವಾರ ದಿ. 27-12-2025 ರಂದು ಮುಂಜಾನೆ 6 ರಿಂದ 12 ಗಂಟೆವರೆಗೆ ಶ್ರೀ ಸಾಯಿ ಬಾಬಾ ಮೂರ್ತಿಗೆ ಈ ಕೆಳಗಿನಂತೆ ಪೂಜೆಗಳು ನಡೆಯುವವು.

ಸ್ವಸ್ತಿ ಶ್ರೀ ಶಾಲಿವಾಹನ ಶಕೆ 1947 ವಿಶ್ವಾವಸುನಾಮ ಸಂವತ್ಸರ ಪುಷ್ಯ ಮಾಸ ಶುಕ್ಲ ಪಕ್ಷ ಸಪ್ತಮಿ ಶನಿವಾರ ದಿನಾಂಕ: 27-12-2025 ರಂದು ಬೆಳಿಗ್ಗೆ 6-30 ಗಂಟೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಪುಣ್ಯ ಕ್ಷೇತ್ರವಾದ ಸದ್ಗುರು "ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನ ಅಥಣಿಯಲ್ಲಿ ಜಾತ್ರಾ ಮಹೋತ್ಸವದ" ನಿಮಿತ್ಯ ವಿವಿಧ ಪೂಜೆಗಳು ನಡೆಯುವವು. ಗಂಗಾ ಪೂಜೆ, ಶ್ರೀ ಸಾಯಿ ಬಾಬಾರವರಿಗೆ ವಿಶೇಷ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶ್ರೀ ಸಾಯಿ ಬಾಬಾ ಕಲಾಭಿವೃದ್ಧಿ ಹೋಮ, ಗಣ ಹೋಮ. ನಂತರ ಪೂರ್ಣಾಹೂತಿ ಬಾಬಾರವರಿಗೆ ವಿಶೇಷ ಅಷ್ಟೋತ್ತರ ನಾಮಾವಳಿ ಪೂಜೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ನಡೆಯುವುದು.

ನಂತರ ಮಧ್ಯಾಹ್ನ 12-00 ಗಂಟೆಯಿಂದ ರಾತ್ರಿ 9-30 ಗಂಟೆಯವರೆಗೆ ಮಹಾ ಅನ್ನಪ್ರಸಾದ ನಡೆಯುವುದು.

ಈ ಎಲ್ಲ ಪೂಜಾ ಕಾರ್ಯಕ್ರಮಗಳನ್ನು ಅಥಣಿ ಶ್ರೀ ಸಾಯಿ ಬಾಬಾ ಮಂದಿರದ ಪ್ರಧಾನ ಅರ್ಚಕರಾದ

ಶ್ರೀ ಶಾಂತವೀರಯ್ಯ ಶಾಸ್ತ್ರೀಗಳು ಹಿರೇಮಠ ಹಾಗೂ ಮದಭಾವಿ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಪ್ರವೀಣ ಶಾಸ್ತ್ರೀಗಳು ಹಿರೇಮಠ ಇವರು ನಡೆಸಿಕೊಡುತ್ತಾರೆ.

ಸಮಸ್ತ ಸದ್ಭಕ್ತರು ಭಾಗವಹಿಸಿ ತನು-ಮನ-ಧನದಿಂದ ಸಹಕರಿಸಿ

ಶ್ರೀ ಸಾಯಿ ಬಾಬಾರವರ ಕೃಪಾಶೀರ್ವಾದ ಪಡೆದುಕೊಳ್ಳಬೇಕೆಂದು ಕೋರುವ.

ಶ್ರೀ ಸಾಯಿ ಸೇವಾ ಟ್ರಸ್ಟ್ ಆಡಳಿತ ಮಂಡಳಿ

ಸಾಯಿ ನಗರ, ಸತ್ತಿ ರೋಡ, ಅಥಣಿ. ಜಿ।। ಬೆಳಗಾವಿ.

Mobile: 9449535077, 9972350000, 9448627474

ವಿ.ಸೂಚನೆ : ಶ್ರೀ ಸಾಯಿಬಾಬಾ ದೇವಸ್ಥಾನದ ಅಭಿವೃದ್ಧಿಗಾಗಿ ಕಾಣಿಕೆ ಸಲ್ಲಿಸುವ ಭಕ್ತಾದಿಗಳು ಆಡಳಿತ ಮಂಡಳಿಯವರ ಕಡೆಗೆ ಕಾಣಿಕೆ ಸಲ್ಲಿಸಿ ರಸೀದಿ ಪಡೆಯಬೇಕಾಗಿ ವಿನಂತಿ

ಶ್ರೀ ಸಾಯಿ ಸೇವಾ ಟ್ರಸ್ಟ್ ದೇವಸ್ಥಾನ, ಸತ್ತಿ ರೋಡ, ಅಥಣಿ

ಜಾತ್ರಾ ಮಹೋತ್ಸವ

ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜಾತ್ರೆ ಆಚರಿಸಲಾಗುವುದು ಸಕಲ ಭಕ್ತಾದಿಗಳು ಈ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ-ಧನದಿಂದ ಸೇವೆ ಸಲ್ಲಿಸಬೇಕಾಗಿ ವಿನಂತಿ.

2 : 27-12-2025

ಸರ್ವರಿಗೂ ಆದರದ ಸುಸ್ವಾಗತ

ಶುಭ ಕೋರುವರು ಶ್ರೀ ಸಾಯಿಬಾಬಾ ಟ್ರಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು ಆಡಳಿತ ಮಂಡಳಿ ಶ್ರೀ ಸಾಯಿಬಾಬಾ ಮಂದಿರ ಪ್ರಧಾನ ಅರ್ಚಕರು

ಶುಭ ಕೋರುವರು ಮಹೇಶ್ ಮಂಜುನಾಥ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಹಾಗೂ ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸ್ ಹೊಲಿಗೆ ಮಷೀನ್ ರಿಪೇರಿ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಶ್ರೀ ಸಾಯಿಬಾಬಾ ಭಕ್ತಾದಿಗಳಿಗೆ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾಕಾಲ ಆ ಭಗವಂತನ ಅನುಗ್ರಹ ಭಕ್ತಾದಿಗಳಿಗಿರಲಿ ಉನ್ನತ ಮಟ್ಟಕ್ಕೆ ದೊಡ್ಡ ಹೆಮ್ಮೆರವಾಗಿ ಉದ್ಯೋಗಗಳನ್ನು ಅಲಂಕರಿಸಲಿ ಸದಾಕಾಲ ನಿರಂತರ ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಶ್ರೀ ಸಾಯಿಬಾಬ ನೀಡಲಿ ಎನ್ನುವುದೇ ನನ್ನ ಆಸೆ

5
2370 views