ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಅಶ್ವರೂಢ ಮೂರ್ತಿ
ಲೋಕಾರ್ಪಣೆ ಕಾರ್ಯಕ್ರಮದ ವಿಜ್ರಂಬಣೆಯಿಂದ ಅದ್ದೂರಿಯಿಂದ ಜರುಗಿತು ಕಾರ್ಯಕ್ರಮ ಯಶಸ್ವಿಯಾಗಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಅಶ್ವರೂಢ ಮೂರ್ತಿ
ಲೋಕಾರ್ಪಣೆ ಕಾರ್ಯಕ್ರಮದ ವಿಜ್ರಂಬಣೆಯಿಂದ ಅದ್ದೂರಿಯಿಂದ ಜರುಗಿತು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
ಅಥಣಿಯಲ್ಲಿ ಇಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಲೋಕಾರ್ಪಣೆಗೊಳಿಸಿದ ನಂತರ ಜರುಗಿದ ಭವ್ಯವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶಿವಾಜಿ ಮಹಾರಾಜರ ನೈಜ ಇತಿಹಾಸ ಮತ್ತು ತತ್ವ ಸಿದ್ದಾಂತಗಳ ಕುರಿತು ಮಾತನಾಡಿದೆ.
ಶಿವಾಜಿ ಮಹಾರಾಜರು ಕೇವಲ ಒಬ್ಬ ವೀರ ಯೋಧ ಮಾತ್ರವಲ್ಲ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರಾಗಿದ್ದರು. ಅವರ ಸ್ವರಾಜ್ಯ ಎಂಬ ಚಿಂತನೆಯಡಿ ಸಮಾನತೆ, ಸಾಮಾಜಿಕ ನ್ಯಾಯ, ಧರ್ಮ ಸಹಿಷ್ಣುತೆ ಮತ್ತು ಜನಕಲ್ಯಾಣವೇ ಅವರ ಆಡಳಿತದ ಮೂಲ ಸಿದ್ಧಾಂತಗಳಾಗಿದ್ದವು. ಎಲ್ಲಾ ವರ್ಗಗಳನ್ನೂ ಒಗ್ಗೂಡಿಸಿ, ನ್ಯಾಯಯುತ ಮತ್ತು ಶಕ್ತಿಶಾಲಿ ರಾಜ್ಯವನ್ನು ನಿರ್ಮಿಸಿದ ಅವರ ದೃಷ್ಟಿ ಇಂದಿಗೂ ಪ್ರೇರಣೆಯಾಗಿಯೇ ಉಳಿದಿದೆ.
ಈ ವೇಳೆ ಪರಮ ಪೂಜ್ಯ ಮರಾಠಾ ಸಮಾಜದ ಜಗದ್ಗುರು ಶ್ರೀ ಮಂಜುನಾಥ್ ಭಾರತಿ ಸ್ವಾಮಿಜಿ, ಶಿವಾಜಿ ಮಹಾರಾಜರ ವಂಶಸ್ಥರಾದ ಡಾ. ಶ್ರೀಮಂತ ಶಾಹು ಛತ್ರಪತಿ ಮಹಾರಾಜರು, ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಶ್ರೀ ಲಕ್ಷ್ಮಣ್ ಸಂಗಪ್ಪ ಸವದಿ ಅವರು,ಮಾಜಿ ಕೇಂದ್ರ ಸಚಿವರಾದ ಶ್ರೀ ಪಿಜಿಆರ್ ಸಿಂಧಿಯಾ, ಸಚಿವರಾದ ಶ್ರೀ ಸಂತೋಷ ಲಾಡ್, ಶ್ರೀ ಸತೀಶ್ ಜಾರಕಿಹೊಳಿ ಶ್ರೀ ಸಂಭಾಜಿ ಭಿಡೆ, ಶಾಸಕರು, ಮಾಜಿ ಶಾಸಕರು ಹಲವಾರು ಗಣ್ಯರು ಭಾಗವಹಿಸಿದ್ದರು.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಅನೇಕ ಗಣ್ಯ ನಾಯಕರು ಮತ್ತು ಮಠಾಧೀಶರ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬಂದಿತ್ತು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸಾವಿರಾರು ಜನ ಸೇರಿದ್ದರು.
ಈ ಭವ್ಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸಚಿವ ಸಂತೋಷ್ ಲಾಡ್ ಸತೀಶ್ ಜಾರಕಿಹೊಳಿ, ಅಥಣಿ ಶಾಸಕ ಲಕ್ಷ್ಮಣ ಸವದಿ, ಬಸನಗೌಡ ಪಾಟೀಲ ಸೇರಿದಂತೆ ಹಲವು ರಾಜಕೀಯ ಗಣ್ಯರು ಉಪಸ್ಥಿತರಿದ್ದರು. ವಿವಿಧ ಮಠಾಧೀಶರು ಸಹ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಸ್ಪರ್ಶ ನೀಡಿದರು.
ಅಶ್ವರೂಢ ಶಿವಾಜಿ ಮಹಾರಾಜರ ಈ ಭವ್ಯ ಮೂರ್ತಿ ಅನಾವರಣವು ಪ್ರಾದೇಶಿಕ ಸಾಂಸ್ಕೃತಿಕ ಗೌರವ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕವಾಗಿ ಜನಮನ ಸೆಳೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರ ಶಿವಾಜಿ ಮಹಾರಾಜರಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸಿದರು.
ದಿವ್ಯ ಸಾನಿಧ್ಯ : ಪ.ಪೂ. ಮರಾಠಾ ಜಗದ್ಗುರು ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮಿ ಗೋಸಾಯಿ ಮಠ, ಬೆಂಗಳೂರು
ಪೂಜ್ಯ ಶ್ರೀ ಸಂಭಾಜಿರಾವ ವಿನಾಯಕ ಭಡೆ ಗುರೂಜಿ ಸಂಸ್ಥಾಪಕರು, ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ
ಶ್ರೀ ಮ.ನಿ.ಪ್ರ.ಶಿವಬಸವ ಸ್ವಾಮಿಗಳು, ಕ್ಷೇತ್ರ ಗಚ್ಚಿನಮಠ, ಅಥಣಿ,
ಶ್ರೀ ಮ.ನಿ.ಪ್ರ. ಪ್ರಭು ಚನ್ನಬಸದ ಸ್ವಾಮಿಗಳು, ಸುಕ್ಷೇತ್ರ ಮೊಟಗಿಮಠ ಅಧನೆ, ಶ್ರೀ ಮ.ನಿ.ಪ್ರ.ಮರುಳಸಿದ್ದ ಸ್ವಾಮಿಗಳು, ಸುಕ್ಷೇತ್ರ ಶೆಟ್ಟರಮಠ, ಅಥಣಿ, ಪೂಜ್ಯ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸಿದ್ಧಸಿರಿ ಸಿದ್ಧಾಶ್ರಮ, ಹಣಮಾಪೂರ-ಕವಲಗುಡ್ಡ, ಪೂಜ್ಯ ಶ್ರೀ ಅಭಿನವ ಗುರುಲಿಂಗ ಜಂಗಮ ಸ್ವಾಮಿಗಳು, ರಾಯಲಿಂಗೇಶ್ವರ ಸಂಸ್ಥಾನ ಮಠ, ಕಕಮರಿ.
ಘನ ಉಪಸ್ಥಿತಿ : ಡಾ. ಶ್ರೀಮಂತ ಶಾಹು ಛತ್ರಪತಿ ಮಹಾರಾಜ ಲೋಕಸಭಾ ಸದಸ್ಯರು, ಕೊಲ್ಲಾಪೂರು
ಉದ್ಘಾಟಕರು:
ಮಾನ್ಯ ಶ್ರೀ ಜ್ಯೋತಿರಾಧಿತ್ಯ ಎಮ್.ಸಿಂಧಿಯಾ ಶಮಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಕೇಂದ್ರ ಸಚಿವರು,
ಅಧ್ಯಕ್ಷತೆ :
ಮಾನ್ಯ ಶ್ರೀ ಶ್ರೀಮಂತ ಬಾಳಾಸಾಹೇಬ ಪಾಟೀಲ ಮಾಜಿ ಸಚಿವರು, ಕರ್ನಾಟಕ ಸರಕಾರ.
ಮುಖ್ಯ ಅತಿಥಿ : ಮಾನ್ಯ ಶ್ರೀ ಸತೀಶ ಲ. ಜಾರಕಿಹೋಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರು ಮಾನ್ಯ ಶ್ರೀ ಸಂತೋಷ ಲಾಡ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರು ಮಾನ್ಯ ಶ್ರೀ ಪೃಥ್ವಿರಾಜ ಚವ್ಹಾಣ ಮಾಜಿ ಮುಖ್ಯ ಮಂತ್ರಿಗಳು, ಮಹಾರಾಷ್ಟ್ರ ಸರಕಾರ
ಅತಿಥಿಗಳು :
ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಪಾಲಕರು, ಅಥನ ಮಾನ್ಯ ಶ್ರೀ ಭರಮಗೌಡ (ರಾಜು) ಅ. ಹಾಗ ಅಧ್ಯಕ್ಷರು, ವಾ.ಕ.ರ.ಸಾ.ನಿ. ಹುಬ್ಬಳ್ಳಿ ಹಾಗೂ ಶಾಸಕರು, ಕಾಗವಾಡ, ಮಾನ್ಯ ಶ್ರೀ ಅಜಿತರಾದ ಘೋರ್ಪಡೆ ಸರಕಾರ ಮಾಜಿ ಸಚಿವರು, ಮಹಾರಾಷ್ಟ್ರ, ಮಾನ್ಯ ಶ್ರೀ ದಿಗ್ವಿಜಯಸಿಂಹ ವಾಯ್. ಪವಾರದೇಸಾಯಿ ಕೆ.ಪಿ.ಸಿ.ಸಿ. ಸದಸ್ಯರು. ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳ ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರು, ವಿಜಯಪೂರ ಮಾನ್ಯ ಶ್ರೀ ಪಿ.ಜಿ.ಆರ್.ಸಿಂಧಿಯಾ ಮಾಜಿ ಸಚಿವರು ಕರ್ನಾಟಕ ಸರಕಾರ.
ಕರ್ನಾಟಕ-ಮಹಾರಾಷ್ಟ್ರ ರಾಜ್ಯದ ಹಲವಾರು ಗಣ್ಯಮಾನ್ಯರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಸಮಸ್ತ ಶಿವಭಕ್ತರು, ಗುರು ಹಿರಿಯರು, ಯುವಕರು ಹಾಗೂ ಮಾತೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತರಬೇಕಾಗಿ ವಿನಂತಿ.
ಎಲ್ಲರಿಗೂ ಸ್ವಾಗತ ಕೋರುವವರು : ಅಥಣಿ ತಾಲೂಕಾ ಏಕಛತ್ರ ಮರಾಠಾ ಸಮಾಜ ಸಂಘ, (ರಿ)
ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಹಾಗೂ ಸಮಸ್ತ ಶಿವಭಕ್ತರು, ಅಥಣಿ-ಕಾಗವಾಡ,