logo

ಮೋಳೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ, ರೊಕ್ಕ ಕತ್ರಿ ಯೋಜನೆ ಆಗಿದೆ :? ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮ ಪಂಚಾಯತಿಯು ಅವ್ಯವಹಾರದ ಆಗರವಾಗಿದೆ ಎಂದರೆ ತಪ್ಪಲ್

ಮೋಳೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ, ರೊಕ್ಕ ಕತ್ರಿ ಯೋಜನೆ ಆಗಿದೆ :?


ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮ ಪಂಚಾಯತಿಯು ಅವ್ಯವಹಾರದ ಆಗರವಾಗಿದೆ ಎಂದರೆ ತಪ್ಪಲ್ಲ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯು ಇಲ್ಲಿರುವ ಗ್ರಾಮ ಪಂಚಾಯತಿಯ ಭೃಷ್ಟಾಚಾರಿಗಳ ಕೈಯಲ್ಲಿ ಸಿಕ್ಕು ರೊಕ್ಕ ಕತ್ರಿ ಯೋಜನೆಯಾಗಿದೆ.


ಗ್ರಾಮ ಪಂಚಾಯತಿಯವರು ಗ್ರಾಮದ ಅಭಿವೃದ್ಧಿಯ ಹೆಸರಿನಲ್ಲಿ ಸರಕಾರ ಮತ್ತು ಗ್ರಾಮದ ನಾಗರಿಕರ ಕಣ್ಣಲ್ಲಿ ಮಣ್ಣು ಒಗೆದು ಕೋಟ್ಯಂತರ ಹಣವನ್ನು ಲೂಟಿ ಮಾಡಿರುವ ಜ್ವಲಂತ ಉದಾಹರಣೆಗಳು ಈ ಮೋಳೆ ಗ್ರಾಮದಲ್ಲಿ ಜೀವಂತ ಸಾಕ್ಷಿಯಾಗಿವೆ.


ಮೋಳೆ ಗ್ರಾಮದ ರೈತ ಲವಾ ಶಿವಪ್ಪ ಕಾಂಬಳೆ ಅವರ ಹೊಲದ(ಸರವೆ ನಂ.466/1234) ಹತ್ತಿರ ಕೆಲಸದ ಹೆಸರು: ಮೋಳೆ ಗ್ರಾಮದ ಮಲ್ಲಪ್ಪ ಕಾಂಬಳೆ ಲವಾ ಶಿವಪ್ಪ ಕಾಂಬಳೆ ತೋಟದಿಂದ ಲವಾ ಶಿವಪ್ಪ ಕಾಂಬಳೆ ತೋಟದವರೆಗೆ ಬಲಬದಿ ಕಚ್ಚಾಚರಂಡಿ ನಿರ್ಮಾಣ ಮಾಡುವುದು (1504001033/ ಎಫ್.ಪಿ/93393042892335456) ಮತ್ತು ಮೋಳೆ ಗ್ರಾಮದ ಮಲ್ಲಪ್ಪ ಕಾಂಬಳೆ ಲವಾ ಶಿವಪ್ಪ ಕಾಂಬಳೆ ತೋಟದಿಂದ ಲವಾ ಶಿವಪ್ಪ ಕಾಂಬಳೆ ತೋಟದವರೆಗೆ ಎಡಬದಿ ಕಚ್ಚಾಚರಂಡಿ ನಿರ್ಮಾಣ ಮಾಡುವುದು (1504001033/ ಎಫ್.ಪಿ/93393042892335457) ಎಂಬ ಹೆಸರಿನಡಿಯಲ್ಲಿ ಒಟ್ಟು 4,56,410/-(ನಾಲ್ಕು ಲಕ್ಷದ ಐವತ್ತಾರು ಸಾವಿರದ ನಾಲ್ಕುನೂರಾ ಹತ್ತು ಮಾತ್ರ) ರೂಪಾಯಿಗಳಷ್ಟು ಹಣವನ್ನು ಯಾವುದೇ ಕಾಮಗಾರಿ ಮಾಡದೇ ಖೊಟ್ಟಿ ದಾಖಲೆ ಸೃಷ್ಟಿಸಿ ಬೋಗಸ್ ಬಿಲ್ ತೆಗೆದು ಸರಕಾರ ಮತ್ತು ನಾಗರಿಕರಿಗೆ ವಂಚಿಸಿದ್ದಾರೆ
ಎಂದು ಹೊಲದ ಮಾಲೀಕರು, ರೈತರಾದ ಲವಾ ಕಾಂಬಳೆ ಅವರು ಆರೋಪಿಸಿದ್ದಾರೆ. ತಮ್ಮ ಹೊಲದ ಸುತ್ತಮುತ್ತಲೂ ಈ ಬೋಗಸ್ ಕಾಮಗಾರಿಯ ಒಂದು ಸಣ್ಣ ಕುರುಹು ಸಹಿತ ಸಿಕ್ಕಿಲ್ಲ. ಆದರೆ ನರೇಗಾ ದಾಖಲೆಗಳ ಪ್ರಕಾರ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿದು ಬರುತ್ತದೆ.




ಈ ಖೊಟ್ಟಿ ಕಾಮಗಾರಿಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿ ಪತ್ರಗಳ ಮೂಲಕ ಮತ್ತು ಖುದ್ದಾಗಿ ಭೇಟಿಯಾಗಿ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಿರುದಿಲ್ಲ. ಇದೇ ರೀತಿ ಗ್ರಾಮದಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿ ಎಲ್ಲರನ್ನೂ ವಂಚಿಸಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ನಾಗರಿಕರಿಗೆ ಮೋಸ ಮಾಡಿದವರನ್ನು ಹುಡುಕಿ ತನಿಖೆಗೆ ಒಳಪಡಿಸಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ವಿನಂತಿಸಿಕೊಳ್ಳುತ್ತಿದ್ದಾರೆ.



ಗ್ರಾಮಸ್ಥರು:
ಮಹೇಶ ಭಜಂತ್ರಿ- 9164951264

ಲವಾ ಕಾಂಬಳೆ- 8747985742

4
114 views