logo

ಇಂದು ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳ ನೆರೆ ವೀಕ್ಷಣೆ ಪ್ರವಾಸದ ಸಂದರ್ಭದಲ್ಲಿ ಇಂದು ಮಾಧ್ಯಮಗಳ ಉದ್ದೇಶಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್ ಅವರು ಮಾತನಾಡಿ

ಇಂದು ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳ ನೆರೆ ವೀಕ್ಷಣೆ ಪ್ರವಾಸದ ಸಂದರ್ಭದಲ್ಲಿ ಇಂದು ಮಾಧ್ಯಮಗಳ ಉದ್ದೇಶಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್ ಅವರು ಮಾತನಾಡಿದರು.

ಕಿತ್ತೂರು ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದ ಹಾಗೂ ನೆರೆ ರಾಜ್ಯದ ಹೆಚ್ಚುವರಿ ನೀರಿನಿಂದ ಭಾರಿ ಪ್ರಮಾಣದಲ್ಲಿ ನೆರೆ, ಪ್ರವಾಹ ಬಂದಿದ್ದು, ಇದರಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರು, ಅಧಿಕಾರಿಗಳು ಪ್ರವಾಸ ಮಾಡುತ್ತಿಲ್ಲ.

ಈ ಸರ್ಕಾರಕ್ಕೆ ರಾಜ್ಯದ ರೈತರ ಬಗ್ಗೆ ಕಾಳಜಿಯಿಲ್ಲ, ವಿರೋಧ ಪಕ್ಷವಾಗಿ ನಾವು ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಸಿದ್ದು ಸವದಿ, ಶ್ರೀ ಅಭಯ್ ಪಾಟೀಲ್, ಶ್ರೀಮತಿ ಶಶಿಕಲಾ ಜೊಲ್ಲೆ, ಶ್ರೀ ವಿಠ್ಠಲ್ ಹಲಗೇಕರ, ಸಂಸದ ಶ್ರೀ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಮಹಾಂತೇಶ್ ಕವಟಗಿಮಠ ಸೇರಿದಂತೆ ಬೆಳಗಾವಿ ನಗರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
#CongressFailsKarnataka

1
12 views