logo

*ಕೆ.ಆರ್.ಪೇಟೆ: ನಮ್ಮ ನೆಚ್ಚಿನ ನಾಯಕ ನಟ ದಿ: ಡಾ ವಿಷ್ಣುವರ್ಧನ್ ರವರ ಸಮಾಜ ಚಿಂತನೆ ದೇಶಪ್ರೇಮ ನಟನೆ ಹಾಗೂ ಅವರ ಸರಳ ವ್ಯಕ್ತಿತ್ವ ಆದರ್ಶಗಳೇ ನಮ್ಮಂತ ಲಕ್ಷಾಂತರ ಅಭಿಮಾನಿಗಳಿಗೆ ಪ್

*ಕೆ.ಆರ್.ಪೇಟೆ: ನಮ್ಮ ನೆಚ್ಚಿನ ನಾಯಕ ನಟ ದಿ: ಡಾ ವಿಷ್ಣುವರ್ಧನ್ ರವರ ಸಮಾಜ ಚಿಂತನೆ ದೇಶಪ್ರೇಮ ನಟನೆ ಹಾಗೂ ಅವರ ಸರಳ ವ್ಯಕ್ತಿತ್ವ ಆದರ್ಶಗಳೇ ನಮ್ಮಂತ ಲಕ್ಷಾಂತರ ಅಭಿಮಾನಿಗಳಿಗೆ ಪ್ರೇರಣೆ ಎಂದು ಡಾ ವಿಷ್ಣುವರ್ಧನ್ ಅಭಿಮಾನಿಸಿ ವಿದ್ಯುತ್ ಚೇತನ್ ತಿಳಿಸಿದರು.*

ಕನ್ನಡದ ಶ್ರೇಷ್ಠ ನಟ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ.

ತಾಲ್ಲೂಕಿನ ಕಸಬಾ ಹೋಬಳಿಯ ಯಡಹಳ್ಳಿ ಗ್ರಾಮದ ಯುವಕ ಮುಖಂಡ ಹಾಗೂ ವಿದ್ಯುತ್ ಚೇತನ್ ರವರು ತಮ್ಮ ಸ್ವಂತ ಹಣದಲ್ಲಿ ಯಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಕೇಕ್ ಕಟ್ ಮಾಡಿ ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ನೆಚ್ಚಿನ ನಾಯಕ ನಟರ ಹುಟ್ಟುಹಬ್ಬ ಆಚರಿಸಿ ಮಾತನಾಡಿದರು.

ನಮ್ಮ ನೆಚ್ಚಿನ ನಾಯಕ ನಟ ಸಾಹಸ ಸಿಂಹ ದಿ.ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವ ಅಂಗವಾಗಿ ನನ್ನ ಗ್ರಾಮದ ಶಾಲಾ ಮಕ್ಕಳಿಗೆ ನೋಟ್ ಬುಕ್ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಡಾ :ವಿಷ್ಣುವರ್ಧನ್ ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಆದರ್ಶಗಳು ಸಮಾಜದ ಅಭಿವೃದ್ಧಿಗೆ ಚಿಂತಿಸಿರುವ ಕಾರ್ಯಗಳು ಮತ್ತು ಅವರು ಸದೃಢ ಸಮಾಜ ನಿರ್ಮಾಣಕ್ಕೆ ನಟಿಸಿರುವ ಚಲನಚಿತ್ರಗಳು ಇಂದಿಗೂ ಜೀವಂತವಾಗಿವೆ ಅವರ ಆದರ್ಶಗಳನ್ನ ನಾವು ಕೂಡ ಮೈಗೂಡಿಸಿಕೊಂಡು ಸಮಾಜದ ಶ್ರೇಯೋಭಿವೃದ್ಧಿಗೆ ಮೈಗೂಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

*ಬಳಿಕ ಮಾತನಾಡಿದ ಶಾಲಾ ಶಿಕ್ಷಕ ಮಂಜುನಾಥ್* ಯಡಹಳ್ಳಿ ಗ್ರಾಮದ ಮುಖಂಡ ಚೇತನ್ ರವರು ತಮ್ಮ ನೆಚ್ಚಿನ ನಾಯಕ ವಿಷ್ಣುವರ್ಧನ್ ರವರ ಹುಟ್ಟು ಹಬ್ಬದ ಹಿನ್ನೆಲೆ ತಮ್ಮ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಸಾಮಗ್ರಿಗಳನ್ನು ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿ ಉಳಿದ ಅಭಿಮಾನಿಗಳಿಗೂ ಮಾದರಿಯಾಗಿದ್ದಾರೆ. ಕೆಲ ನಟರ ಅಭಿಮಾನದ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಇಂತಹ ಹಲವು ಸಮಾಜಮುಖಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಉಮೇಶ್ ಶಲ್ಮಾ , ಶಿಕ್ಷಕರಾದ ಮಂಜುನಾಥ್, ಶ್ವೇತ ಕುಮಾರಿ, ವಿಷ್ಣುವರ್ಧನ್ ಅಭಿಮಾನಿಗಗಳಾದ ಕೇಶವ, ದಿನೇಶ್, ಅವಿನಾಶ್,ಡಾ:ರಕ್ಷಿತ್,ಜೆಡಿಎಸ್ ಯುವ ಮುಖಂಡ
ಪ್ರಶಾಂತ್,ಸೇರಿದಂತೆ ಶಾಲಾ ಮಕ್ಕಳಿದ್ದರೂ.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

0
0 views