logo

*ಕೆ.ಆರ್.ಪೇಟೆ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರ

*ಕೆ.ಆರ್.ಪೇಟೆ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಂಘದ ಅಧ್ಯಕ್ಷ ಹಾಗೂ ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ಹೊಸಹೊಳಲು ಹೆಚ್.ಕೆ ಅಶೋಕ್ ತಿಳಿಸಿದರು.*

ತಾಲೂಕಿನ ಹೊಸಹೊಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ರೈತರು ಅದನ್ನೇ ಅವಲಂಬಿಸಿದ್ದಾರೆ. ಸರ್ಕಾರ ಕೂಡ ಅವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ.ಇದನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು ನಮ್ಮ ಸಹಕಾರ ಸಂಘ ತಾಲ್ಲೂಕಿನಲ್ಲಿಯೇ ಉತ್ತಮ ನಿವ್ವಳ ಲಾಭಹೊಂದಿದ್ದು,ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ಷೇರುದಾರರಿಗೆ ಸಹಕಾರಿಯಾಗಿದೆ.ರೈತರು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಯಾವುದೇ ಕಾರಣಕ್ಕೂ ಸಾಲ ಪಡೆದುಕೊಳ್ಳಬಾರದು. ಇದಲ್ಲದೇ ಸಾಲಕ್ಕೆ ಹೆದರಿಕೊಂಡು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ರೈತರಿಗೆ ಸಲಹೆ ನೀಡಿ. ಸಂಘದಿಂದ ಸಾಲ ಪಡೆದುಕೊಂಡು ಹೈನುಗಾರಿಕೆ ಹಾಗೂ ನೀರಾವರಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಹಣ ಬಳಸಿಕೊಳ್ಳಬೇಕು ರೈತರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

*ಸಂಘದ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಮೋದ್* ಅವರು 2024-25ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಓದಿ ಅಂಗೀಕರಿಸಿ ನಿವ್ವಳ ಲಾಭ ವಿಲೇವಾರಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಸಂಘದ ಮಾಜಿ ಅಧ್ಯಕ್ಷ ಚಿಕ್ಕೇಗೌಡ,ರಾಮೇಗೌಡ, ಹೆಚ್‌ವಿ ಕೃಷ್ಣೇಗೌಡ, ಪುಟ್ಟರಾಜು,ಹೆಚ್ ಜೆ ಚಂದ್ರೇಗೌಡ, ಬಲರಾಮೇಗೌಡ,ಜಾನಕಮ್ಮ,ಸಚ್ಚಿನ್ ಬಾಬು,ನಾಗರಾಜು, ಬಲರಾಮ, ಸಂಘದ ಉಪಾಧ್ಯಕ್ಷ ಚಂದ್ರಶೇಖರ್,ಸಂಘದ ನಿರ್ದೇಶಕರಾದ ಎಸ್.ಪ್ರಕಾಶ್, ತೇಜಾವತಿ,ಯೋಗೇಶ್,ಹೆಚ್ ಎನ್,ಜಿ ಎಂ ಅಭಿಶೇಖರ್,ಕೃಷ್ಣೇಗೌಡ,ಶಶಿಧರ್, ಹೆಚ್ ಆರ್ ಶ್ರೀಧರ್, ಹೆಚ್ ಎನ್ ಪ್ರವೀಣ್, ಗೀತಾ,ಹೆಚ್.ಎಂ ಕೃಷ್ಣ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಘು,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಮೋದ್ ಜಿ.ಎನ್, ಭರತ್ ಕುಮಾರ್, ಮೂರ್ತಿ, ಅನಿತಾ,ಶಕುಂತಲಾ, ಬಸವರಾಜು, ಸಚಿನ್ ಸೇರಿದಂತೆ ಉಪಸ್ಥಿತರಿದ್ದರು.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

8
1196 views