
*ಪ್ರತಿಭಾವಂತ ವಿದ್ಯಾರ್ಥಿ ಬಾಳಿಗೆ ಬೆಳಕಾದ:ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್*
ಕೆ.ಆರ್.ಪೇಟೆ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ (ಕೆ
*ಪ್ರತಿಭಾವಂತ ವಿದ್ಯಾರ್ಥಿ ಬಾಳಿಗೆ ಬೆಳಕಾದ:ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್*
ಕೆ.ಆರ್.ಪೇಟೆ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ (ಕೆ.ಪಿ.ಎಸ್) ಶಾಲೆಯಲ್ಲಿ ಪಿಯುಸಿ ಯಲ್ಲೇ 96% ಉತ್ತಮ ಅಂಕ ಪಡೆದ ಕೆ.ಆರ್. ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯ ಬಡ ನಿವಾಸಿ ಲೇಟ್ ಪರಮೇಶ್ ಹಾಗೂ ಕಲ್ಪನಾ ರವರ ಸುಪುತ್ರಿ ಹರ್ಷಿತಾ ಪ್ರೌಢಶಾಲೆಯ ಹಂತದಲ್ಲೇ ಎಂಬಿಬಿಎಸ್ ವ್ಯಾಸಂಗ ಚಿಂತಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಹರ್ಷಿತ ಅವರ ಕ್ರಿಯಾಶೀಲ ಪ್ರತಿಭೆ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಷ್ಠಿತ ಆಕಾಡೆಮಿಯಲ್ಲಿ ಒಂದಾದ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ನೀಟ್ ಕೋಚಿಂಗ್ ಪಡೆಯಲು ಆರ್ ಟಿ ಓ ಮಲ್ಲಿಕಾರ್ಜುನ್ ಉಚಿತವಾಗಿ ಕೋಚ್ ಪಡೆಯಲು ಮಾರ್ಗದರ್ಶನ ನೀಡುವ ಫಲವಾಗಿ ನಿಟ್ ನಲ್ಲೂ ಕೂಡ ವಿದ್ಯಾರ್ಥಿನಿ ಹರ್ಷಿತಾ ಉತ್ತಮ ಅಂಕಗಳನ್ನು ಪಡೆದು ಚಾಮರಾಜನಗರ ವೈದ್ಯಕೀಯ ವಿಜ್ಞಾನಿಗಳ *(ಮೆಡಿಕಲ್ ಸೀಟ್)* ವ್ಯಾಸಂಗ ಮಾಡಲು ಉಚಿತವಾಗಿ ಸೀಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಹರ್ಷಿತಾ ರವರನ್ನ ಸಮಾಜ ಸೇವಕರಾದ ಆರ್ ಟಿ ಓ ಮಲ್ಲಿಕಾರ್ಜುನ್ ಕೆ ಆರ್ ಪೇಟೆ ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ಅಭಿನಂದಿಸಿ ಕಾಲೇಜಿನ ಶುಲ್ಕ 65 ಸಾವಿರ ರೂಗಳನ್ನು ಚೆಕ್ ಮೂಲಕ ಧನ ಸಹಾಯ ಮಾಡುವ ಮೂಲಕ ಬಾಲ್ಯದಿಂದಲೇ ವಿದ್ಯಾರ್ಥಿನಿ ಹರ್ಷಿತಾ ಡಾಕ್ಟರ್ ಆಗುವ ಕನಸು ಹೊತ್ತಿದ್ದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ರವರ ಬೃಹತ್ ಸಹಕಾರದಿಂದ ನನಸಾಗಿದೆ.
*ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿನಿ ಹರ್ಷಿತಾ* ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಒಬ್ಬ ವ್ಯಕ್ತಿಯಲ್ಲ ಅವರು ನಮ್ಮಂತಹ ಹಲವಾರು ಬಡ ವಿದ್ಯಾರ್ಥಿಗಳಿಗೆ ಬೃಹತ್ ಶಕ್ತಿ, ಅವರ ಸಹಕಾರದಿಂದ ನನ್ನ ವಿದ್ಯಾಭ್ಯಾಸದ ಬದುಕು ಬಂಗಾರವಾಗಿದೆ ಅವರ ಕಾಯಕ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಮತ್ತಷ್ಟು ನೆರವಾಗಿ ನೆರಳಾಗಲಿ ಅವರ ಆಶೋತ್ತರಗಳನ್ನ ನಾನು ಕೂಡ ಮುಂದಿನ ದಿನಗಳಲ್ಲಿ ಮೈಗೂಡಿಸಿಕೊಳ್ಳುತ್ತೇನೆ. ಅವರ ಬೃಹತ್ ಸಹಾಯಕ್ಕೆ ಸದಾ ಋಣಿಯಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಟ್ಟೇನಹಳ್ಳಿ ನಾಗರಾಜು,ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್,ಉಪನ್ಯಾಸಕ ನಾಗಭೂಷಣ್,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ಪತ್ರಕರ್ತ ಮಂಜುನಾಥ್ ವರಪ್ರಸಾದ್, ಹೊಸಹೊಳಲು ರಘು,ಸೇರಿದಂತೆ ಉಪಸ್ಥಿತರಿದ್ದರು,
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*