ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕಾ ಘಟಕದ ವತಿಯಿಂದ ಇಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ಗುಜರಾತ ಭವನದಲ್ಲಿ ಇಂದು ಹಮ್ಮಿಕೊ
ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕಾ ಘಟಕದ ವತಿಯಿಂದ ಇಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ಗುಜರಾತ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಲಾಯಿತು.
ಭಂಡಿವಾಡ ಮತ್ತು ಅಣ್ಣಿಗೇರಿಯ ಗಿರೀಶ್ ಆಶ್ರಮದ ಡಾ. ಎ.ಸಿ ವಾಲಿ ಮಹಾರಾಜರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹುಬ್ಬಳ್ಳಿ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀ ಆನಂದ ಉಪ್ಪಿನ, ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಶೇಖರ ಹೊಸಕಟ್ಟಿ, ವಿಜಯಪುರದ ಪ್ರಥಮ ಮಹಿಳಾ ವಿ.ವಿ ಕುಲಪತಿಗಳಾದ ಶ್ರೀಮತಿ ವಿಜಯಾ ಕೋರಿಶೆಟ್ಟರ, ಮಾಜಿ ಸಭಾಪತಿಗಳಾದ ಶ್ರೀ ವೀರಣ್ಣಾ ಮತ್ತಿಕಟ್ಟಿ, ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶ್ರೀ ಶಂಕರಣ್ಣ ಮುನವಳ್ಳಿ, ಶಾಸಕರಾದ ಶ್ರೀ ಮಹೇಶ ತೆಂಗಿನಕಾಯಿ, ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರೂಢಗಿ, ಪ್ರಮುಖರಾದ ಶ್ರೀ ವೀರೆಂದ್ರ ಕೌಜಲಗಿ, ಶ್ರೀ ಮಲ್ಲಿಕಾರ್ಜುನ ಯಾದವಾಡ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
#Hubballi