logo

ಸಿಂಧನೂರು --- ಮಾನ್ವಿ ತಾಲೂಕಿನ ಉಟಕನೂರು ಸುಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮರಿಬಸವರಾಜ ದೇಶೀಕೇಂದ್ರ ಮಹಾಶಿವಯೋಗಿಗಳಿಗೆ ಸಿಂಧನೂರಿ

ಸಿಂಧನೂರು --- ಮಾನ್ವಿ ತಾಲೂಕಿನ ಉಟಕನೂರು ಸುಕ್ಷೇತ್ರದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮರಿಬಸವರಾಜ ದೇಶೀಕೇಂದ್ರ ಮಹಾಶಿವಯೋಗಿಗಳಿಗೆ ಸಿಂಧನೂರಿನ ಕರುಣೆಯ ಕಾರುಣ್ಯ ಆಶ್ರಮದ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯುವ ನೂತನ ಕಿಲಾಮಂದಿರದ ಉದ್ಘಾಟನೆ ಅಂಗವಾಗಿ ಶ್ರೀಗಳಿಗೆ ಗೌರವ ಸಮರ್ಪಿಸಿ ಭಕ್ತಿ ಕಾಣಿಕೆಯನ್ನು ಸಲ್ಲಿಸಿ ಗದಗಿನ ಪಂಡಿತ ಶ್ರೀ ಪುಟ್ಟರಾಜ ಗವಾಯಿಗಳ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ ಅವರು ಆಶ್ರಮದ ಸೇವೆಗಳನ್ನು ವಿವರಿಸಿ. ಸರ್ಕಾರದ ಅನುದಾನ ತಿರಸ್ಕೃತಗೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಶ್ರೀಗಳು ಕಾರುಣ್ಯ ಕುಟುಂಬಕ್ಕೆ ಧೈರ್ಯ ಹೇಳುವುದರ ಮೂಲಕ ಆಶೀರ್ವದಿಸಿದರು. ಈ ಸಭೆಯಲ್ಲಿ ಉಟಕನೂರು ಸುಕ್ಷೇತ್ರದ ಶ್ರೀ ಮರಿಬಸವರಾಜ ದೇಶಿ ಕೇಂದ್ರ ಮಹಾಶಿವಯೋಗಿಗಳು ಕಾರುಣ್ಯಾ ಶ್ರಮಕ್ಕೆ ಶ್ರೀಮಠದ ಆಶೀರ್ವಾದ ಸದಾವಕಾಲವಿರುತ್ತದೆ. ಹರೇಟನೂರಿನ ಹಿರೇಮಠದ ವೇದಮೂರ್ತಿ ಅಮರಯ್ಯ ಸ್ವಾಮಿಯವರು ಉಟಕನೂರು ಶ್ರೀಗಳ ಗದ್ದುಗೆ ಹಾಗೂ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮಂಗಳಾರತಿ ತಟ್ಟೆಯಿಂದ ಕಾರುಣ್ಯ ಎನ್ನುವ ಕುಟುಂಬವನ್ನು ಹುಟ್ಟು ಹಾಕಿ ಅದೆಷ್ಟೋ ಅನಾಥ ಜೀವಿಗಳಿಗೆ ನೊಂದ ಜೀವಿಗಳಿಗೆ ಬುದ್ಧಿಮಾಂದ್ಯ ಜೀವಿಗಳಿಗೆ ಉಪಯೋಗ ಮಾಡುವ ಮೂಲಕ ಉಟಕನೂರಿನ ಶ್ರೀ ಮಠದ ಸಂಸ್ಕೃತಿ ಸಂಪ್ರದಾಯಕ್ಕೆ ಮೆರುಗು ತಂದುಕೊಟ್ಟಿದ್ದಾರೆ. ಜಂಗಮ ಎನ್ನುವ ಕಾಯಕಯೋಗಿ ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ಉದಾಹರಣೆಯೇ ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬ. ಮುಂದಿನ ದಿನಮಾನಗಳಲ್ಲಿ ನಾವು ಕೂಡ ಕಾರುಣ್ಯ ಕುಟುಂಬಕ್ಕೆ ಪಾದ ಸ್ಪರ್ಶ ಮಾಡಿ ಅಲ್ಲಿರುವ ಎಲ್ಲಾ ಆಶ್ರಯದಾತರುಗಳಿಗೆ ಆಶೀರ್ವದಿಸುತ್ತೇವೆ. ಎಂದು ಮಾತನಾಡಿ ಕಾರುಣ್ಯ ಕುಟುಂಬಕ್ಕೆ ಆಶೀರ್ವದಿಸಿದರು. ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಆಶ್ರಮದ ಗುಪ್ತ ಸಮಾಲೋಚಕರಾದ ವೀರಭದ್ರಗೌಡ ಗಿಣಿವಾರ. ಸಿಬ್ಬಂದಿಗಳಾದ ಮರಿಯಪ್ಪ. ಬಸವಸ್ವಾಮಿ. ಹಾಗೂ ಅನೇಕ ಶಿಷ್ಯ ವೃಂದ ಬಳಗ ಉಪಸ್ಥಿತರಿದ್ದರು

10
1502 views