
ಸಿಂಧನೂರು --- ತಾಲೂಕಿನ ಮಾವಿನ ಮಡುಗು ಗ್ರಾಮದ ಮುಕ್ಕುಂದಿ ಕುಟುಂಬ ಹಾಗೂ ಬಂಗಾರಿ ಕ್ಯಾಂಪಿನ ಹಡಪದ ಕುಟುಂಬದ ವತಿಯಿಂದ ಸಿಂಧನೂರು ನಗರದ ಒಳಬಳ್ಳಾ
ಸಿಂಧನೂರು --- ತಾಲೂಕಿನ ಮಾವಿನ ಮಡುಗು ಗ್ರಾಮದ ಮುಕ್ಕುಂದಿ ಕುಟುಂಬ ಹಾಗೂ ಬಂಗಾರಿ ಕ್ಯಾಂಪಿನ ಹಡಪದ ಕುಟುಂಬದ ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ " ಹೆತ್ತವರ ವೇದಿಕೆ" ಕಾರ್ಯಕ್ರಮದಲ್ಲಿ ಮಾವಿನ ಮಡಗು ಮುಕ್ಕುಂದಿ ಕುಟುಂಬದ ಮೀನಾಕ್ಷಿ ಶರಣಪ್ಪ ಈ ಆದರ್ಶ ದಂಪತಿಗಳ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಹಾಗೂ ಬಂಗಾರಿ ಕ್ಯಾಂಪಿನ ಹಡಪದ ಸಮಾಜದ ದಿ. ಸುಖ ಮುನಿಯಮ್ಮ ಅವರ ಪ್ರಥಮ ವರ್ಷದ ಪುಣ್ಯರಾಧನೆ ಕಾರ್ಯಕ್ರಮವನ್ನು ಆಶ್ರಮದಲ್ಲಿ ವಿವಿಧ ಬಗೆಯ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಗೊರೇಬಾಳ ಗ್ರಾಮದ ಪುತ್ತೂರು ಆಂಜನೇಯ ದೇವಸ್ಥಾನದ ಪೀಠಾಧಿಪತಿಗಳಾದ ಶ್ರೀ ಚನ್ನಪ್ಪ ತಾತನವರನ್ನು ಮತ್ತು ಮೀನಾಕ್ಷಿ ಶರಣಪ್ಪ ಮುಕ್ಕುಂದಿ, ಈ ದಂಪತಿಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದ ಶ್ರೀ ಶ್ರೀ. ಶ್ರೀ. ಚನ್ನಪ್ಪ ತಾತನವರು ಮಾತನಾಡಿ ಅಂಧ ಅನಾಥರ ಬಾಳಿಗೆ ಬೆಳಕಾಗಿರುವ ನಮ್ಮ ಕಾರುಣ್ಯಾಶ್ರಮವು ಕರುಣೆಯ ಮಂದಿರವಾಗಿದೆ. ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಮೈಗೂಡಿಸಿಕೊಂಡು. ಮಾನವ ಧರ್ಮಕ್ಕೆ ವಿಶೇಷ ಸಂದೇಶ ನೀಡುತ್ತಾ ನೊಂದ ಜೀವಿಗಳ ನಾಡಿಮಿತವಾಗಿದೆ. ಇಂತಹ ಸತ್ಯಸೇವೆ ಪ್ರಾಮಾಣಿಕ ಸಂಸ್ಥೆಗೆ ಸರ್ಕಾರ ಅನುದಾನ ನಿರಾಕರಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ. ಜಂಗಮನ ಕಾಯಕದೊಂದಿಗೆ ಚಿಕ್ಕ ಗ್ರಾಮ ಹರೇಟನೂರಿನ ಹಿರೇಮಠದ ಕುಟುಂಬವು ಕಡುಬಡತನದ ಸ್ಥಿತಿಯಲ್ಲಿಯೂ ಇಂತಹ ಸಮಾಜ ಪರ ಅನಾಥಪರ ಕಾರ್ಯ ಮಾಡುವ ಮೂಲಕ ರಾಜ್ಯಕ್ಕೆ ಮನೆಮನೆ ಮಾತಾಗಿರುವುದು ನಮ್ಮ ಸಿಂಧನೂರಿನ ಕರುಣಾಮಯಿ ಸಂಸತ್ತಿಗೆ ಸಂದ ಗೌರವವಾಗಿದೆ. ನಮ್ಮ ಕಾರುಣ್ಯ ಆಶ್ರಮವು ಅಂಧ-ಅನಾಥರ ಬಾಳಿಗೆ ಬೆಳಕಾಗಿ ಅನಾಥ ಜೀವಿಗಳಿಗೆ ಪ್ರೀತಿಯ ಅರಮನೆಯಾಗಿದೆ. ಇಂತಹ ಪ್ರಾಮಾಣಿಕ ಕುಟುಂಬಕ್ಕೆ ನಾನು ಹಾಗೂ ನಮ್ಮ ಶಿಷ್ಯ ವೃಂದದ ವತಿಯಿಂದ ನಿರಂತರವಾಗಿ ಸಹಾಯ ಸಹಕಾರ ನೀಡುತ್ತೇವೆ. ಮತ್ತು ಇಂದು ವಿವಾಹ ವಾರ್ಷಿಕೋತ್ಸವ ಹಾಗೂ ಪುಣ್ಯಸ್ಮರಣೆಯ ಮೂಲಕ ಹೆತ್ತವರ ವೇದಿಕೆ ಕಾರ್ಯಕ್ರಮವು ಹೆತ್ತವರ ಘನತೆ ಗೌರವವನ್ನು ಹೆಚ್ಚಿಸಿದೆ ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನಾಕ್ಷಿ. ಶರಣಪ್ಪ.ಶೈಲಜಾ. ಶರಣಪ್ಪ ಹಡಪದ. ಆದಯ್ಯ ಹಡಪದ. ಮಲ್ಲಿಕಾರ್ಜುನ ಎಚ್.ಕೆ. ಮಲ್ಲಿಕಾರ್ಜುನ ಎಂ. ರಮೇಶ ಎಚ್. ಕೆ. ಲಕ್ಷ್ಮಿ ಗಂ.ನಿರುಪಾದೆಪ್ಪ ಹಡಪದ. ಸರಸ್ವತಿ ಗಂ.ಚಂದ್ರು ಹಡಪದ. ಚನ್ನಬಸವ ಹಾಗೂ ಆಶ್ರಮದ ಕಾರ್ಯಧ್ಯಕ್ಷರಾದ ಚನ್ನಬಸಯ್ಯ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಶರಣಮ್ಮ ಸಿದ್ದಯ್ಯ ಸ್ವಾಮಿ ಮರಿಯಪ್ಪ ಹನುಮಂತಪ್ಪ ಹಾಗೂ ಮಾವಿನ ಮಡುಗು ಗ್ರಾಮದ ಮುಕ್ಕುಂದಿ ಕುಟುಂಬದ ಮತ್ತು ಬಂಗಾರಿ ಕ್ಯಾಂಪನ ಹಡಪದ ಕುಟುಂಬದ ಅನೇಕರು ಭಾಗವಹಿಸಿದ್ದರು