logo

*ಭಾರತೀಯ ಜಾನಪದ ಸಂಸ್ಕೃತಿ ಶ್ರೇಷ್ಠವಾದದ್ದು ಶಾಸಕ ಹೆಚ್.ಟಿ ಮಂಜು* ಕೆ.ಆರ್.ಪೇಟೆ: ಭಾರತೀಯ ಜಾನಪದ ಸಂಸ್ಕೃತಿ ಶ‍್ರೇಷ್ಠವಾದುದು. ನಮ್ಮ ರೈತ

*ಭಾರತೀಯ ಜಾನಪದ ಸಂಸ್ಕೃತಿ ಶ್ರೇಷ್ಠವಾದದ್ದು ಶಾಸಕ ಹೆಚ್.ಟಿ ಮಂಜು*

ಕೆ.ಆರ್.ಪೇಟೆ: ಭಾರತೀಯ ಜಾನಪದ ಸಂಸ್ಕೃತಿ ಶ‍್ರೇಷ್ಠವಾದುದು. ನಮ್ಮ ರೈತಾಪಿ ವರ್ಗದವರು ಆಚರಣೆ ಮಾಡಿಕೊಂಡು ಬಂದಿರುವ ನಮ್ಮ ನೆಲದ ಸಂಸ್ಕೃತಿಯ ಅರಿವನ್ನು ಮುಂದಿನ ಜನಾಂಗಕ್ಕೂ ತಿಳಿಯಪಡಿಸುವ ಮತ್ತು ಅದನ್ನು ಮುಂದೆ ತೆಗೆದುಕೊಂಡು ಹೋಗುವ ಮಹತ್ವದ ಜವಾಬ್ದಾರಿ ನಮ್ಮ ಯುವಕರ ಮೇಲಿದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.

ಪಟ್ಟಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಇಂತಹ ಕಾರ್ಯಕ್ರಮಗಳು ಪೂರಕ.ಯುವ ಪೀಳಿಗೆ ಜಾನಪದ ಹಾಗೂ ದೇಶಿ ಸಂಸ್ಕೃತಿಯ ಮಹತ್ವ ಅರಿಯಬೇಕಿದೆ. ಓದಿನ ಜೊತೆಯಲ್ಲಿ ಕಲೆಗಳನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ಮನ್ನಣೆ ಪಡೆಯಲು ಸಾಧ್ಯ. ನಮ್ಮ ಜನಪದರ ಆಹಾರ, ವಿಹಾರ, ರೀತಿ– ನೀತಿ, ಆಟಗಳು, ಆಚರಣೆಗಳು, ಹಾಡುಗಳು, ನೃತ್ಯಗಳು, ವಾದ್ಯಗಳು, ಮನೆಯಲ್ಲಿ ಬಳಸುವ ಉಪಕರಣಗಳು ನಮ್ಮಿಂದ ದೂರವಾಗುತ್ತಿವೆ. ಇವೆಲ್ಲವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು ಜಾನಪದ ಈ ನೆಲದ ಸಂಸ್ಕೃತಿಯಾಗಿದೆ. ಈ ನೆಲದ ಸಂಸ್ಕೃತಿಯಲ್ಲಿ ಸಾಕಷ್ಟು ಮಹತ್ವದ ಕಲೆಗಳು ಇವೆ. ಕಲೆ ಮತ್ತು ಕಲಾವಿದರನ್ನು ಗೌರಿವಿಸುವುದು ನಮ್ಮೆಲ್ಲರ ಕರ್ತವ್ಯ.ಕಲೆಗಳ ತವರೂರಾಗಿರುವ ಕೆ.ಆರ್.ಪೇಟೆ ವಿಶೇಷ ಜಾನಪದ ಪರಂಪರೆ ಹೊಂದಿದೆ. ಯುವ ಪೀಳಿಗೆ ಪಾಶ್ಚಿಮಾತ್ಯ ಮೋಹಕ್ಕೆ ಒಳಗಾಗದೆ ದೇಶಿ ಸಂಸ್ಕೃತಿ ಹಾಗೂ ಜಾನಪದ ಸೊಗಡನ್ನು ಅರಿತು ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಪ್ರಸ್ತುತವಾಗಿದೆ.ರಂಗಭೂಮಿ, ಜನಪದಕಲೆ, ಸೋಬಾನೆ, ಹರಿಕಥೆ ಮುಂತಾದವುಗಳನ್ನು ಕಲಿಯುವ ಮೂಲಕ ಜನಪದ ಸೊಗಡು ಉಳಿಸಬೇಕು. ನಾಟಕ ಹಾಗೂ ಜಾನಪದದ ಬಗ್ಗೆ ತಿಳಿದಿರುವ ಕಲಾವಿದರು ತಂಡಗಳನ್ನು ಕಟ್ಟಿಕೊಂಡು ಎಲ್ಲೆಡೆ ಪ್ರದರ್ಶನ ನೀಡಿ ಅರಿವು ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಜನಪದ ಕಲೆಗಳ ಮಾಹಿತಿ ಇಲ್ಲವಾಗುವುದು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಕಾಲೇಜು ಆವರಣ ತನಕ ಎತ್ತಿನಗಾಡಿ ಮೆರವಣಿಗೆಯಲ್ಲಿ ಪಟ್ಟಣ ಪ್ರಮುಖ ರಸ್ತೆ ಉದ್ದಕ್ಕೂ ಡೊಳ್ಳು ಕುಣಿತ ತಾಳಕ್ಕೆ ವಿದ್ಯಾರ್ಥಿಗಳ ಜೊತೆ ಶಾಸಕ ಹೆಚ್.ಟಿ ಮಂಜು , ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಹೆಜ್ಜೆ ಹಾಕಿದರು.

ಕಾಲೇಜಿನ ಆವರಣವನ್ನು ಜನಪದ ವಸ್ತುಗಳಿಂದ ಅಲಂಕರಿಸಿ ಜಾನಪದ ಲೋಕವನ್ನೇ ಸೃಷ್ಟಿಸಲಾಗಿತ್ತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಂಡಿದ್ದರು.ಕಾಲೇಜಿನ ಆವರಣದಲ್ಲಿ ಹಾಕಿ ರಾಗಿ, ಭತ್ತ, ಜೋಳ, ಅವರೆ, ತೊಗರಿ, ಹುರುಳಿ ಇತ್ಯಾದಿ ಆಹಾರ ಧಾನ್ಯ, ತೆಂಗು, ಅಡಿಕೆ ಜೊತೆಗೆ ಪೂರ್ವಜರು ಬಳಸುತ್ತಿದ್ದ ಒನಕೆ, ಕಡುವಳ್ಳು ಬೀಸುವ ಕಲ್ಲು, ರುಬ್ಬು ಗುಂಡು, ಮಣ್ಣಿನ ಒಲೆ, ಪಾತ್ರೆ ಇತ್ಯಾದಿ ವಸ್ತುಗಳಿಂದ ಇಡೀ ಕಾಲೇಜಿನ ಆವರಣವನ್ನೇ ಅಲಂಕರಿಸಲಾಗಿತ್ತು.ವಿಶೇಷವಾಗಿ ವಿದ್ಯಾರ್ಥಿಗಳಿಂದ ಆಹಾರ ಮೇಲೆ ಎಲ್ಲರ ಕಣ್ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ: ಕೆ.ಪಿ ಪ್ರತಿಮಾ, ಪಟ್ಟಣ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸುಮಾರಾಣಿ, ಪುರಸಭಾ ಸದಸ್ಯ ಗಿರೀಶ್, ಮಾಜಿ ಸದಸ್ಯ ಹೇಮಂತ್ ಕುಮಾರ್,ಕಾಲೇಜಿನ ಉಪನ್ಯಾಸಕರಾದ ಚಿಕ್ಕೋನಹಳ್ಳಿ ಚೇತನ್ ಕುಮಾರ್,ಕೃಷ್ಣಮೂರ್ತಿ, ವಿನಯ್, ಮಧು, ನಾಗೇಂದ್ರ, ವರದರಾಜು,ಚಂದ್ರು,ವಿಶ್ವರಾಧ್ಯ ವಿನೋದ್, ಡಾ: ಶ್ಯಾಮ್,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಭೈರಪುರ ಹರೀಶ್, ಹೊಸಹೊಳಲು ಕಾಂತರಾಜು, ಚೌಡೇಲಿಂಗಯ್ಯ, ಚೇತನ್ ಕುಮಾರ್,ಕೃಷ್ಣಮೂರ್ತಿ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಕಾಲೇಜು ವಿದ್ಯಾರ್ಥಿಗಳಿದ್ದರು.

*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

0
0 views