logo

ಸಿಂಧನೂರು - ಮಸ್ಕಿ ಪಟ್ಟಣದ ವಾರ್ಡ್ ನಂಬರ್ -14 ರಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ ಲಕ್ಷ್ಮೀದೇವಿ ಗಂ. ದಿ. ಬಸವರಾಜ ವಯಸ್ಸು -66 ಇವರು ಮೂ

ಸಿಂಧನೂರು - ಮಸ್ಕಿ ಪಟ್ಟಣದ ವಾರ್ಡ್ ನಂಬರ್ -14 ರಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದ ಲಕ್ಷ್ಮೀದೇವಿ ಗಂ. ದಿ. ಬಸವರಾಜ ವಯಸ್ಸು -66 ಇವರು ಮೂಲತಃ ಮಗಳು ಮೊಮ್ಮಗಳೊಂದಿಗೆ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಮಗಳು ಮರಣ ಹೊಂದಿದರು. ಇವರ ಸ್ಥಿತಿಯನ್ನು ಕಂಡಂತಹ ಮಸ್ಕಿಯ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆ ಹಾಗೂ ಇನ್ನಿತರ ಸಮಾಜ ಸೇವಕರುಗಳ ಮಾಹಿತಿಯ ಮೇರೆಗೆ ಲಕ್ಷ್ಮೀದೇವಿಯನ್ನು ಕಾರುಣ್ಯ ಆಶ್ರಮಕ್ಕೆ ಕರೆತಂದು ಆಶ್ರಯ ನೀಡಲಾಯಿತು. ಈ ಸಮಯದಲ್ಲಿ ಇವರ ಮೊಮ್ಮಗಳಾದ ಗಂಗಮ್ಮ ಇವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಮಸ್ಕಿ ಪಟ್ಟಣದ ಎಸ್‌.ಡಿ.ಎಂ.ಶಿಕ್ಷಣ ಸಂಸ್ಥೆಯು ಕಾರುಣ್ಯ ಆಶ್ರಮದ ಸಮಕ್ಷಮದಲ್ಲಿ ವಹಿಸಿಕೊಂಡಿತು. ಈ ಸಮಯದಲ್ಲಿ ಗಂಗಮ್ಮ ವಿದ್ಯಾರ್ಥಿ ನಿಗೆ ಕಾರುಣ್ಯ ಆಶ್ರಮದಿಂದ ಈ ಕ್ಷಣದ ಪರಿಕರಗಳನ್ನು ತೆಗೆದುಕೊಳ್ಳಲು ಧನಸಹಾಯ ಮಾಡಲಾಯಿತು. ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ ನೆಲೆ ಇಲ್ಲದ ಜೀವಿಗಳಿಗೆ ನೆಲೆ ಕಲ್ಪಿಸುವುದೇ ನಮ್ಮ ಕಾರುಣ್ಯ ಕುಟುಂಬದ ಕರ್ತವ್ಯ. ಸಮಾಜದ ದೃಷ್ಟಿಯಲ್ಲಿ ನಮ್ಮ ಕಾರುಣ್ಯ ಆಶ್ರಮವು ಆಶ್ರಮವಾಗಿ ಕಾಣುತ್ತಿದೆ. ಆದರೆ ಅಲ್ಲಿರುವ ಎಲ್ಲಾ ಜೀವಿಗಳ ಮಧ್ಯೆ ದೊಡ್ಡ ಕುಟುಂಬದಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎನ್ನುವ ಆತ್ಮ ತೃಪ್ತಿ ನಮಗಿದೆ. ಕರುನಾಡಿನ ಕರುಣೆಯ ಕುಟುಂಬವಾಗಿ ನೆಲೆ ಇಲ್ಲದ ಜೀವಿಗಳಿಗೆ ನೊಂದ ಜೀವಿಗಳಿಗೆ ಸೇವೆ ಮಾಡುತ್ತಿರುವುದು ಭಗವಂತನ ಪ್ರೇರಣೆ ಎಂದು ನಮ್ಮ ಅಭಿಪ್ರಾಯ. ಈ ಸೇವೆಗೆ ದಾನಿಗಳೇ ನಮ್ಮ ದೇವರುಗಳು ದಾನಿಗಳ ಶ್ರೀರಕ್ಷೆಯೇ ನಮ್ಮ ಕಾರುಣ್ಯ ಆಶ್ರಮದ ಕರ್ತವ್ಯವಾಗಿದೆ. ಸರ್ಕಾರದ ಯಾವುದೇ ಅನುದಾನವಿಲ್ಲದೆ ನಿರಂತರ ದಾನಿಗಳ ಸಹಾಯ ಸಹಕಾರದಿಂದ ಸಾಗುತ್ತಿರುವ ಕಾರುಣ್ಯ ಆಶ್ರಮಕ್ಕೆ ತಾವೆಲ್ಲರೂ ಕೂಡ ತಮ್ಮ ಕೈಯಿಂದಾದಂತಹ ಸಹಾಯ ಸಹಕಾರವನ್ನು ಮಾಡಿ ಎಂದು ನಾನು ನಾಡಿನ ಜನರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಈ ತಾಯಿಯು ಮಲಗಿದ್ದಲ್ಲಿಯೇ ತನ್ನೆಲ್ಲಾ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಾಳೆ ಎನ್ನುವ ಮಾಹಿತಿ ನಮಗೆ ದೊರಕಾಗ ಇಂತಹವರ ಸೇವೆ ಮದರ್ ತೆರೇಸಾ ಅವರ ಸ್ಪೂರ್ತಿಯಿಂದ ನಮ್ಮ ಕಾರುಣ್ಯ ಆಶ್ರಮದಲ್ಲಿ ಜರುಗುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿ ಈ ಸಮಯದಲ್ಲಿ ಇರುವ ಎಲ್ಲಾ ಗುರು ಹಿರಿಯರುಗಳಿಗೆ ಅಭಿನಂದನೆಗಳನ್ನು ಅರ್ಪಿಸಿದರು. ಈ ಸಮಯದಲ್ಲಿ ಚನ್ನಬಸವ ಪ್ರಾಚಾರ್ಯರು ಎಸ್.ಡಿ. ಎಮ್. ಶಿಕ್ಷಣ ಸಂಸ್ಥೆ ಮಸ್ಕಿ. ಇಂದಿರಾ ಬಿ ಪಾಟೀಲ್ ಶಿಕ್ಷಕರು. ಚೇತನಾ ಗದ್ದಿ ಶಿಕ್ಷಕರು. ಆನಂದ್ ಶಿಕ್ಷಕರು. ಹಾಗೂ ಮಲ್ಲಿಕಾರ್ಜುನ ಹೂವಿನ ಬಾವಿ ಅಭಿಷೇಕ್. ಪ್ರಭು ಜಡಿಯಾನವರು ಹಿರೇ ಓತಗೇರಿ. ಮತ್ತು ಮೊಮ್ಮಗಳಾದ ಗಂಗಮ್ಮ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ.ವೀರೇಶ. ಮತ್ತು ಮಸ್ಕಿಪಟ್ಟಣದ ಹಲವಾರು ಗುರುಹಿರಿಯರು ಉಪಸ್ಥಿತರಿದ್ದರು

4
1154 views