ಪತ್ರಿಕಾ ಪ್ರಕಟಣೆಗಾಗಿ
ನಾಲ್ಕನೇ ಸಲದ ಕನ್ನಡ ಜಾತ್ರೆ-2024 ಕಾರ್ಯಕ್ರಮ
ದಿನಾಂಕ: 30.11.2024 ಶನಿವಾರ , ಸ್ಥಳ : ಸರಕಾರಿ ಕಿರಿಯ ತಾಂತ್ರಿಕ
ಪತ್ರಿಕಾ ಪ್ರಕಟಣೆಗಾಗಿ
ನಾಲ್ಕನೇ ಸಲದ ಕನ್ನಡ ಜಾತ್ರೆ-2024 ಕಾರ್ಯಕ್ರಮ
ದಿನಾಂಕ: 30.11.2024 ಶನಿವಾರ , ಸ್ಥಳ : ಸರಕಾರಿ ಕಿರಿಯ ತಾಂತ್ರಿಕ ಶಾಲೆ ಬಳ್ಳಾರಿ
ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಕನ್ನಡ ನಾಡು ನುಡಿಯ ಅಭಿಮಾನವನ್ನು ಹೆಚ್ಚಿಸುವ ಗುರಿಯನ್ನಿಟ್ಟುಕೊಂಡು ನಾಲ್ಕನೇ ಸಲ ಕನ್ನಡ ಜಾತ್ರೆ ಶೀರ್ಷಿಕೆಯಲ್ಲಿ ಮಕ್ಕಳಿಗಾಗಿ ಕನ್ನಡದ ವಿವಿಧ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸರಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಆಯೋಜನೆ ಮಾಡಿದ್ದರು. ಬೆಳಗಿನ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅತಿಥಿಗಳಾದ ಶ್ರೀ ಎಂ ಶಿವಾಜಿರಾವ್ ಜಿಲ್ಲಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಬಳ್ಳಾರಿ, ಶ್ರೀ ಶಶಿಧರ ಮೇಟಿ ಮುಖ್ಯಸ್ಥರು ವಿಸ್ತಾರ ಟಿವಿ ಬಳ್ಳಾರಿ, ಶ್ರೀ ಸಿದ್ದರಾಮಗೌಡ ಲೆಕ್ಕಪರಿಶೋಧಕರು ಬಳ್ಳಾರಿ ಎ ಮಹ್ಮಮದ್ ರಫೀಕ್ ಚಿತ್ರಕಲಾವಿದರು ಬಳ್ಳಾರಿ ಶ್ರೀ ಶಿವಯೋಗಪ್ಪ ಮತ್ತಿಕಟ್ಟಿ ಪ್ರಾಧ್ಯಪಕರು ಸ.ಕಿ.ತಾ.ಶಾಲೆ ಬಳ್ಳಾರಿ , ಶ್ರೀ ಎನ್ ಬಸವರಾಜ್ ನಿವೃತ್ತ ಶಿಕ್ಷಕರು, ಶ್ರೀ ಮರಿಸ್ವಾಮಿ ರೆಡ್ಡಿ ಜಿಲ್ಲಾಧ್ಯಕ್ಷರು ಅನುದಾರಹಿತ ಶಾಲೆಗಳ ಒಕ್ಕೂಟ ಬಳ್ಳಾರಿ, ಶ್ರೀ ಕಟ್ಟೆಸ್ವಾಮಿ, ಕರಾಟೆ ತರಬೇತುದಾರರು ಶ್ರೀ ಅಡವಿ ಸ್ವಾಮಿ ಮುಖಂಡರು ಬಳ್ಳಾರಿ ರವರು ಮಾಡಿದರು. ಕನ್ನಡ ಹಿರಿಮೆ ಕುರಿತು ಶ್ರೀ ವೀರೇಂದ್ರ ರಾವಿಹಾಳ್ ಬರಹಗಾರರು ಬಳ್ಳಾರಿ ರವರು ಮಾತಾಡಿದರು. ಈ ಸಂಧರ್ಭದಲ್ಲಿ ಶ್ರೀ ಗೋಡೆ ಶಿವರಾಜ್ ರವರು ಬರೆದ ಶ್ರೀ ದೊಡ್ಡಬಸವಗವಾಯಿಗಳು ರಾಗ ಸಂಯೋಜನೆ ಮಾಡಿದ ಸಂಸ್ಥೆಯ ಕೆಲಸಗಳ ಗೀತೆಯನ್ನು ಬಿಡುಗಡೆ ಮಾಡಿ ಕನ್ನಡದ ಸ್ಪರ್ಧೇಗಳಿಗೆ ಚಲಾನೆ ನೀಡಿದರು 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು. ಅಧ್ಯಕ್ಷತೆ ವಹಿಸಿದ ಶ್ರೀ ಕೆ.ಜಿ ನಾಗರಾಜ್ ಪ್ರಾಂಶುಪಾಲರು ಸ.ಕಿ.ತಾ ಶಾಲೆ ಬಳ್ಳಾರಿ ರವರು ಮಾತಾಡಿ ಕನ್ನಡದ ಬಳಕೆಯನ್ನು ನಾವೆಲ್ಲಾ ಹೆಚ್ಚು ಮಾಡಬೇಕು ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಎಲ್ಲಾರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಜೆಯ ಸಾಂಸ್ಕೃತಿಕ ಮತ್ತು ಬಹುಮಾನ ವಿತರಣೆ ಕಾಯಕ್ರಮದಲ್ಲಿ ಕನ್ನಡ ಕಣ್ಮಣಿ ಪ್ರಶಸ್ತಿಯನ್ನು ಪದ್ಮ ಶ್ರೀ ಡಾ ಮಾತಾ ಬಿ ಮಂಜಮ್ಮ ಜೋಗತಿ ಸ್ವೀಕರಿಸಿ ಮಕ್ಕಳಲ್ಲಿ ಕನ್ನಡ ಅಭಿಮಾನವನ್ನು ಹೆಚ್ಚಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಕೆಲಸ ಸಿಗುವಂತಾಗವೇಕು, ಲಿಂಗ ಬೇದ ಮಾಡದೇ ಎಲ್ಲಾರನ್ನು ಸಮನಾಗಿ ಕಾಣಬೇಕು, ತೃತಿಯ ಲಿಂಗಿಯ ವ್ಯಕ್ತಿಗಳನ್ನು ಗೌರವಿಸಬೇಕು ಎಂದರು, ಸಂಸ್ಥೆಯ ಸಮಾಜಮುಖಿ ಕೆಲಸಗಳು ನಿರಂತರವಾಗಿ ಇರಲಿ, ಇಂತಹ ಸಂಸ್ಥೆಗೆ ನಮ್ಮೆಲ್ಲರ ಬೆಂಬಲವಿರಬೇಕು ಎಂದು ತಿಳಿಸಿದರು ಹಾಗೂ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯನ್ನು ಶ್ರೀ ಜಿಲಾನಿ ಭಾಷ ನೃತ್ಯ ಗುರುಗಳು ಬಳ್ಳಾರಿ ರವರು ಸ್ವೀಕರಿಸಿ ಮಕ್ಕಳು ಚಿಕ್ಕಂದಿನಿಂದಲೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಕಲಾ ಸೇವೆ ಮಾಡುತ್ತಿರುವ ಎಲ್ಲರನ್ನ ಗೌರವಿಸಬೇಕು ಹಾಗು ಸಂಸ್ಥೆಯವರ ಈ ಆತ್ಮೀಯ ಸನ್ಮಾನವು ನಮಗೆ ಖುಷಿತಂದಿದೆ ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ರವರು ಮಾತಾಡಿ ನಿರೀಕ್ಷೆಗೂ ಮೀರಿ ಜನ ಸೇರಿದ್ದು ನಮಗೆ ಖುಷಿತಂದಿದೆ. ನಮ್ಮ ಕನ್ನಡ ಪರ ಮತ್ತು ಸಮಾಜಮುಖಿ ಕೆಲಸಗಳು ನಿರಂತರವಾಗಿ ಇರುತ್ತವೆ ಎಂದು ತಿಳಿಸಿದರು ಬಹುಮಾನ ವಿತರಣೆಯನ್ನು ಅತಿಥಿಗಳಾದ ಶ್ರೀ ಪೋಲಾ ಪ್ರವೀಣ್ ಉದ್ಯಮಿಗಳು ಬಳ್ಳಾರಿ ಶ್ರೀ ಜಿ.ವಿ.ಮಂಜುನಾಥ ಜಿಲ್ಲಾಧ್ಯಕ್ಷರು ಕರ್ನಾಟಕ ಎಸ್ಡಿಎಂಸಿ ಸಮನ್ವಯ ವೇದಿಕೆ ಬಳ್ಳಾರಿ, ಶ್ರೀ ನಿಷ್ಠಿ ರುದ್ರಪ್ಪ ಜಿಲ್ಲಾಧ್ಯಕ್ಷರು ಕಸಾಪ ಬಳ್ಳಾರಿ ಶ್ರೀ ಕೆ ಎಂ ಶಿವಶಂಕರಯ್ಯ ಸಮಾಜ ಸೇವರಕು ಬಳ್ಳಾರಿ ಶ್ರೀಮತಿ ದ್ರಾಕ್ಷಾಯನಿ ವೈದ್ಯರು ಬಳ್ಳಾರಿ, ಶ್ರೀ ಮಂಜುನಾಥ ಹಿಂದೂಪುರ ವಕೀಲರು ಬಳ್ಳಾರಿ ರವರು ಮಾಡಿದರು ಹಾಗೂ ಶ್ರೀ ಗೋವಿಂದರಾಜಲು, ಸದಸ್ಯರು ಮಹಾನಗರ ಪಾಲಿಕೆ ಬಳ್ಳಾರಿ, ಶ್ರೀ ರಾಜಶೇಖರ್ ಜಿಲ್ಲಾಧ್ಯಕ್ಷರು ಕನ್ನಡ ರಕ್ಷಣಾ ವೇದಿಕೆ ಬಳ್ಳಾರಿ ರವರು ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಕೊಂಡ ಅಮ್ಮ ಟ್ರಸ್ಟ್ ಬಳ್ಳಾರಿ ಮತ್ತು ಶ್ರೀ ಹೆಚ್ ರಾಘವೇಂದ್ರ ಗುಪ್ತ ಬಳ್ಳಾರಿ ರವರನ್ನು ಹಾಗೂ ವಿಶೇಷ ಆಹ್ವಾನಿತರಾದ ಬಳ್ಳಾರಿಯಲ್ಲಿ ಚಿತ್ರಿಕರಣಗೊಂಡ ಅಮರ ಪ್ರೇಮಿ ಅರುಣ್ ಚಿತ್ರದ ನಿರ್ದೇಶಕ ಬರಹಗಾರ ಪ್ರವೀಣ್ ಕುಮಾರ್ ಜಿ ರವರನ್ನು ಸನ್ಮಾನಿಸಲಾಯಿತು. ನಿರೂಪಣೆಯನ್ನು ಶ್ರೀಮತಿ ಸಂಧ್ಯಾ ಮತ್ತು ಶ್ರೀ ಮಂಜುನಾಥ್ ಎಸ್ ಕೋಟಿ, ಶ್ರೀ ದಕ್ಷಿಣ ಮೂರ್ತಿ.ಎಂ ಮಾಡಿದರು ಹಾಗೂ ಶ್ರೀ ಸಿದ್ದಲಿಂಗಯ್ಯ ನಿವೃತ್ತ ಶಿಕ್ಷಕರು, ಶ್ರೀ ಉಮೇಶ್ ಶ್ರೀ ಸುಭಾಶ್ ಚಂದ್ರ ಶ್ರೀಮತಿ ಉಷಾ ನರೇಂದ್ರಬಾಬು ಶ್ರೀಮತಿ ಅನ್ನಪೂರ್ಣ ಶ್ರೀಮತಿ ಅಶ್ವಿನಿ ಕು.ಶಾಂತಾಕುಮಾರಿ ಶ್ರೀ ಪ್ರದೀಪ್ ಕುಮಾರ್ ಜಿ ಶ್ರೀ ವೆಂಕಟೇಶ್ ಶ್ರೀಮತಿ ವಿಶಾಲಾಕ್ಷಿ ಶ್ರೀಮತಿ ಶಶಿಕಲಾ ಶ್ರೀ ಆನಂದ್ ಯೋಗಿ ಸ್ಪರ್ದೇಗಳ ತೀರ್ಪೂಗಾರರಾಗಿದ್ದರು.
ಸಂಸ್ಥೆಯ ಕಾರ್ಯದರ್ಶಿ ಮಾರುತಿ , ಸಹಕಾರ್ಯದರ್ಶಿ ಮೆಹಬೂಬ್ ಭಾಷ, ರವಿ ವರ್ಮ, ಸಂದೀಪ್ ಕುಮಾರ್ ಹಾಗೂ ಸದಸ್ಯರಾದ ಮಂಜುಳ, ಭಾರತಿ, ಜೋಸ್ನಾ ಕಾಕಿ, ಅಕ್ಷತಾ, , ಅಜಿತ್, ಸೂರಜ್ ಹರೀಶ್ ರೆಡ್ಡಿ, ವೀರೇಶ್, ಬಾಲಸುಬ್ರಮಣ್ಯಂ,ಅನಿಲ್ ಕೇದಾರ್, ವೆಂಕಟೇಶ್, ರಾಜು ಕೆ ಹೆಚ್, ಹರ್ಷವರ್ಧನ್, ಹಸೇನ್, ಚಿರಂಜೀವಿ, ರವರು ಪಾಲ್ಗೋಂಡಿದ್ದರು.
ವಿನಯ್ ಕುಮಾರ್ ಎಂ ಎಸ್
ಅಧ್ಯಕ್ಷರು, ನಿಮಗಾಗಿ ನಾವು ಸಂಸ್ಥೆ ಬಳ್ಳಾರಿ
9448584400