logo

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಜಾಧಜಿ ಶಿಕ್ಷಣ ಸಂಸ್ಥೆಯ ,ಜೆ.ಎ.ಪದವಿ ಪೂರ್ವ ಕಾಲೇಜನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತವಾಗಿ ಪ್ರವಾಸ ಕಥನ ಎಂಬ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಜಾಧಜಿ ಶಿಕ್ಷಣ ಸಂಸ್ಥೆಯ ,ಜೆ.ಎ.ಪದವಿ ಪೂರ್ವ ಕಾಲೇಜನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತವಾಗಿ ಪ್ರವಾಸ ಕಥನ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಅರವಿಂದರಾವ ದೇಶಪಾಂಡೆಯವರು ಸಸಿಗೆ ನೀರುಣ್ಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವಂತೆ ಮನುಷ್ಯನಿಗೆ ಓದುವ ಹವ್ಯಾಸ ಇರಬೇಕು ವಿವಿಧೆಡೆ ಪ್ರವಾಸ ಮಾಡಿ ಅಲ್ಲಿನ ಸಂಸ್ಕೃತಿ ಸಂಸ್ಕಾರಗಳನ್ನು ಅರಿತುಕೊಳ್ಳಬೇಕು ಒಳ್ಳೆಯದೆನ್ನುವುದನ್ನು ಸ್ವೀಕರಿಸಬೇಕು ಆದರೆ ಜಗತ್ತಿನ ಎಲ್ಲ ಸಂಸ್ಕೃತಿಯಲ್ಲಿ ನಮ್ಮ ಭಾರತೀಯ ಸಂಸ್ಕೃತಿಯೇ ಶ್ರೇಷ್ಠ ಎಂದು ಹೇಳಿದರು.ಭಾರತೀಯ ವಿದ್ಯಾರ್ಥಿಗಳಲ್ಲಿ ಇರುವ ಜ್ಞಾನ ಮತ್ತು ಕೌಶಲ್ಯ ಶ್ರೇಷ್ಠವಾದ್ದದು ಅದರ ಸದುಪಯೋಗ ಮಾಡಿಕೊಂಡು ಭಾರತ ಸ್ಥಾನ ಇನ್ನೂ ಎತ್ತರಕ್ಕೆ ಬೆಳೆಯಬೇಕೆಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅನಿಲ್ ವಿ. ದೇಶಪಾಂಡೆ ಅವರು ಕಾಲೇಜು ಅಭಿವೃದ್ಧಿ ಸಮಿತಿ ಯ ಸದಸ್ಯರು ವಹಿಸಿಕೊಂಡಿದ್ದರು ವಿಶೇಷ ಉಪಸ್ಥಿತಿ ಸ್ಥಾನದಲ್ಲಿ ಕಾಲೇಜಿನ ಪ್ರಾಚಾರ್ಯರ ಶ್ರೀ ಎಂ.ಪಿ. ಮೇತ್ರಿ ಸರವರು ವಹಿಸಿದ್ದರು ಕಾಲೇಜಿನ ವಿದ್ಯಾರ್ಥಿಗಳ ಪ್ರಧಾನ ಕಾರ್ಯದರ್ಶಿಯಾದ ಕುಮಾರಿ. ನಿರ್ಮಲಾ ಬೇಡರಟ್ಟಿ. ಹಾಗೂ ಕುಮಾರ್. ಅನಿಕೇತನ ಕಂಬಾರ್ ವಹಿಸಿಕೊಂಡಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಅಮೃತ ಜಮಖಂಡಿ ಅವರು ನಿರ್ವಹಿಸಿದ್ದರು ಕುಮಾರಿ ಪ್ರೀತಿ ಮಾದರ ಸ್ವಾಗತಿಸಿದರು ಕುಮಾರಿ ಶ್ರದ್ಧಾ ತೋಟಗಿ ಪರಿಚಯಿಸಿದರು ಕುಮಾರಿ ಕಾಂಚನ ಬಡಕಂಬಿ ಹೊಂದಿಸಿದರು ಕಾರ್ಯಕ್ರಮದಲ್ಲಿ ಎಲ್ಲ ಉಪನ್ಯಾಸಕರು ಉಪನ್ಯಾಸಕಿಯರು ಎಲ್ಲ ವರ್ಗಗಳ ವಿದ್ಯಾರ್ಥಿಗಳು ಹಾಜರಿದ್ದರು

7
7830 views