logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆಯ ಅಥಣಿ ನಗರದ ಆರ್ ಹೋಟೆದಲ್ಲಿ ಮೈಸೂರಿನ ಧನ್ವಂತರಿ ಲೋಕಸಿರಿ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ ರೋಗ ಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ ಕಟ್ಟುವ ಕಡೆ

ಬೆಳಗಾವಿ ಜಿಲ್ಲೆಯ ಅಥಣಿ ನಗರದ ಆರ್ ಹೋಟೆದಲ್ಲಿ ಮೈಸೂರಿನ ಧನ್ವಂತರಿ ಲೋಕಸಿರಿ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ ರೋಗ ಮುಕ್ತ ಮತ್ತು ರಾಸಾಯನಿಕ ಮುಕ್ತ ಭಾರತ ಕಟ್ಟುವ ಕಡೆ ಜನರಿಗೆ ಹಾಗೂ ರೈತರಿಗೆ ಅಭಿಯಾನ ಕಾರ್ಯಕ್ರಮ ನಡೆಯಿತು.



ಮೈಸೂರಿನಿಂದ ಆಗಮಿಸಿದ ಡಿ ಎಲ್ ಎಸ್ ಸೆಲ್ಸ್ ಹೆಡ್ ಮತ್ತು ಮಾರ್ಗದರ್ಶಕರಾದ ಚರಣ ರಾಜ್ , ಡಿ ಎಲ್ ಎಸ್ ಚಾಂಪಿಯನ್ ತಂಡದ ಸಂಸ್ಥಾಪಕ ವಿಜಯಕುಮಾರ,ಡಿ ಎಲ್ ಎಸ್ ಸಿಲ್ವರ್ ಡೈರೆಕ್ಟರ್ ರೇಖಾ ಎಸ್ ಇವರನ್ನು ಮೆರವಣಿಗೆ ಮೂಲಕ ಹೂ ಹಾರಿಸುವ ಮೂಲಕ ಸ್ವಾಗತ ಮಾಡಿಕೊಂಡು ವೇದಿಕೆಯ ಮೇಲೆ ರೈತ ಗೀತೆ ಹಾಡುವ ಮೂಲಕ ರೈತರಿಗೆ ಗೌರವ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.



ಚರಣ್ ರಾಜ್ ಅವರು ಜನರ ಆರೋಗ್ಯದ ಬಗ್ಗೆ ಮಾತನಾಡಿ ಆಯುರ್ವೇದ ಗಿಡಮೂಲಿಕೆ ಹಣ್ಣುಗಳಿಂದ ಮನೆಯಲ್ಲಿರುವ ಆಹಾರ ಪದಾರ್ಥಗಳಿಂದ

ಸಮತೋನಲವನ್ನು ತರುವ ರೋಗ ಗಳಿಗೆ ಚಿಕಿತ್ಸೆ ನೀಡುವ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ ಇದು ಕೇವಲ ರೋಗಲಕ್ಷಣಗಳನ್ನು ಮಾತ್ರವಲ್ಲದೆ ದೇಹ ಮನಸ್ಸು ಮತ್ತು ಆತ್ಮವನ್ನು ಒಟ್ಟಾರೆಯಾಗಿ ಪರಿಗಣಿಸಿ ರೋಗಮುಕ್ತವಾಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.



ವಿಜಯ ಕುಮಾರ್ ಕೆ ಸಿ ಅವರು ರೈತರ ಬಗ್ಗೆ ಮಾತನಾಡಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಹಾಳಾಗಿರುವ ಕೃಷಿ ಭೂಮಿಯನ್ನು ವಿಷ ಮುಕ್ತ ವನ್ನಾಗಿ ಮಾಡಲು ನೈಸರ್ಗಿಕ ಹಾಗು ಸಾಯುವ ಕೃಷಿ ಪದ್ಧತಿಗಳ ಮುಖ್ಯ ದಾರಿಯಾಗಿದೆ ಧನ್ವಂತರಿ ಲೋಕ ಸಿರಿ ಬಯೋಟೆಕ್ ದಿಂದ ತಯಾರು ಆಗಿರುವ ಸಾವಯವ ಔಷಧಿ ಉಪಯೋಗ ಮಾಡಿ ಕಡಿಮೆ ಖರ್ಚಿನಲ್ಲಿ ಫಲವತ್ತತೆ ಆಗುತ್ತದೆ ಭೂಮಿ ಎಂದು ಹೇಳಿದರು.



ಮುಖ್ಯ ಅತಿಥಿಯಾಗಿ ಪ್ರಗತಿಪರ ರೈತರಾದ ಚಿದಾನಂದ ದರೂರ ಮಾತನಾಡಿ ರಾಸಾಯನಿಕ ಬಳಕೆ ಮಾಡದೆ ಕೊಟ್ಟಿಗೆ ಗೊಬ್ಬರ ಮತ್ತು ಹಸಿ ಎಲೆ ಗೊಬ್ಬರಗಳನ್ನು ಬಳಸಿ ಮನೆ ಆರೋಗ್ಯವನ್ನು ಕಾಪಾಡುತ್ತದೆ ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ತತ್ವದಂತೆ ರೈತರು ದುಡಿಯಬೇಕು ಪ್ರತಿಯೊಬ್ಬರು ಹಸು ಎಮ್ಮೆ ಸಾಕಬೇಕು ಎಂದು ಹೇಳಿದರು.



ರೇಖಾ ಎಸ್ ಮಾತನಾಡಿ ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.



7 ಸ್ಟಾರ್ ಅಥಣಿ ಟೀಮ್ ಲೀಡರ್ ಬಂದೆ ನವಾಜ್ ಗಡ್ಡೇಕರ ಹಾಗೂ ಆಶಿಪ್ ಮುಲ್ಲಾ ಕಾರ್ಯಕ್ರಮ ಆಯೋಜನೆ ಮಾಡಿದ್ದರು.



ಮುಖ್ಯ ಅತಿಥಿಗಳಾಗಿ ಗುರುದೇವ ಆಯುರ್ವೇದ ಆಸ್ಪತ್ರೆ ವೈದ್ಯರಾದ ಮಹಾದೇವ ನಾಯಿಕ, ನಿಂಗಪ್ಪಾ ಹಡಪದ ಮಲ್ಲಪ್ಪಾ ಕೆಂಪವಾಡ, ಮುತ್ತಪ್ಪಾ ದನ್ಯಾಳ, ಬಸಪ್ಪಾ ದನ್ಯಾಳ, ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಮುಖಂಡ ಪ್ರವೀಣ ನಾಯಿಕ, ಚನ್ನಪ್ಪಾ ಪಾಟೀಲ, ಸುರೇಶ ಪಾಟೀಲ ಆಗಮಿಸಿದ್ದರು



ಪ್ರವೀಣ ನಾಡಗೌಡ, ಈರಪ್ಪಾ ರೋಗಿ,ಸಿದ್ರಾಯ ಸಾತನವರ,ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಮಹೇಶ ಶರ್ಮಾ, ಶಿವಾನಂದ ನಾವಿ, ಸುರೇಖಾ ಜಾಧವ, ಸೃಷ್ಟಿ ನಾಯಿಕ,ಕವಿತಾ ಬೋಸಲೆ, ಬೌರವಾ ದನ್ಯಾಳ, ಶಂಕರ ಪಾಟೀಲ, ಅಸ್ಲಾಂ ಮುಲ್ಲಾ, ವಿಶ್ವನಾಥ ಭಂಡಾರೆ, ಆದಿತ್ಯ ನಾಯಿಕ, ಅಖಿಲೇಶ ನಾಯಿಕ ಶರದ ಶೆಟ್ಟಿ, ಸಂತೋಷ ನಾಯಿಕ, ಸುರೇಶ ಮಡಿವಾಳ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.



ಶಿವಲಿಲಾ ಪಟ್ಟಣಶೆಟ್ಟಿ ಅವರು ಕಾರ್ಯಕ್ರಮ ನಿರೂಪಣೆ ಹಾಗೂ ಸಂಗೀತ ಸೇವೆ ಸಲ್ಲಿಸಿದರು. ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಶಕ್ತಿದಳದ ಸಿಬ್ಬಂದಿ ಅಶೋಕ ಬಡಿಗೇರ, ರಾಜು ಸಿಂಧೆ ಬುದ್ಧನ ಮೂರ್ತಿಗೆ ಹೂವಿನ ಮಾಲೆ ಹಾಕಿ ತಮ್ಮ ಭದ್ರತೆ ಕಾರ್ಯ ನಿರ್ವಹಿಸಿದರು.

24
4118 views

Comment