ಬೆಳಗಾವಿ: ಕರ್ನಾಟಕ ಪೊಲೀಸ್ ಕಲ್ಯಾಣ ಸಂಸ್ಥೆಯ ಉಚಿತ ಚಿಕಿತ್ಸೆ ಹಾಗೂ ಸನ್ಮಾನ ಕಾರ್ಯಕ್ರಮ
ಬೆಳಗಾವಿ: ಬೆಳಗಾವಿ ನಗರದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ನಿರುದ್ಯೋಗ ನಿವಾರಣೆ ಗುರಿಯಾಗಿದ್ದ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಡಾ ಬಿ ಎಚ್ ಜಮಾದಾರ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು. ಮುತ್ತೈದಯರಿಗೆ ಉಡಿ ತುಂಬುವ, ನಿರ್ಗತಿಕರಿಗೆ ಆಹಾರ ಕಿಟ್ಟು ಮತ್ತು ಸಾಧಕರಿಗೆ ಸನ್ಮಾನ ನೀಡಲಾಯಿತು. ಶ್ರೀ ಸಾಯಿ ಆಸ್ಪತ್ರೆ ವೈದ್ಯರಾದ ಎಸ್ ಎಂ ದೊಡ್ಡಮನಿ ಅವರ ಸಹಯೋಗದಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆಯೂ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ ಎಂ ದೊಡ್ಡಮನಿ, ಡಾ ಬಿ ಎಚ್ ಜಮಾದಾರ ಮತ್ತು ಸಾಮಾಜಿಕ ಹೋರಾಟಗಾರ ಪ್ರವೀಣ ನಾಯಿಕ ಜ್ಯೋತಿ ನೆರವಿನಿಂದ ಮಾಡಲಾಯಿತು. ಮಹಿಳಾ ಪೊಲೀಸ್ ಇಲಾಖೆ ಪಿ ಎಸ್ ಐ ರುಕ್ಮಿಣಿ ಮತ್ತು ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಪೂಜಾರಿ ಭಾಗವಹಿಸಿ ಮಕ್ಕಳಿಗೆ ಸಂಸ್ಕಾರ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ ಬಿ ಎಚ್ ಜಮಾದಾರ ನಿವೇಶನ, ಉಳಿತಾಯ, ಬೌನಸರ್, ಮ್ಯಾನ ಪವರ್ ಮತ್ತು ಸರ್ವಿಸ್ ಸೆಕ್ಟರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಮುಖ ಸದಸ್ಯರಾದ ರಾಜು ಮೋರೆ, ಮುತ್ತಣ್ಣ ಕರಳೆ, ರಾಜು ಸಿಂದಗಿ, ಸತ್ಯಪ್ಪಾ ನಂದಗಾವೆ, ಪ್ರವೀಣ ಕರುಳಪ್ಪ, ಲಕ್ಷ್ಮಣ ಲೋಕುರೆ, ರಾಜು ಕೋಳೆ, ಶರಣಪ್ಪಾ ಶಿಂದೆ, ಮಹೇಶ್ ಶರ್ಮಾ, ಅನೀಲ ಭಾಮನೆ, ಕವಿತಾ ಭೋಸಲೆ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.