logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗೆ, ಜಿಲ್ಲಾಧಿಕಾರಿಗಳು, ಬೆಂಗಳೂರು ಇವರ ಮುಖಾಂತರ ಸನ್ಮಾನ್ಯ ಶ್ರೀ ನರೇಂದ್ರ ದಾ.ಮೋದಿ ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ, ನವದೆಹಲಿ ವಿಷಯ: ಬಸವಣ್ಣನವರ ಜಯಂತಿಯನ್ನು

ಗೆ,
ಜಿಲ್ಲಾಧಿಕಾರಿಗಳು,
ಬೆಂಗಳೂರು

ಇವರ ಮುಖಾಂತರ

ಸನ್ಮಾನ್ಯ ಶ್ರೀ ನರೇಂದ್ರ ದಾ.ಮೋದಿ
ಮಾನ್ಯ ಪ್ರಧಾನ ಮಂತ್ರಿಗಳು,
ಭಾರತ ಸರ್ಕಾರ, ನವದೆಹಲಿ

ವಿಷಯ: ಬಸವಣ್ಣನವರ ಜಯಂತಿಯನ್ನು ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಚರಿಸುವುದು ಹಾಗೂ ಬಸವಣ್ಣನವರನ್ನು ರಾಷ್ಟ್ರೀಯ ಪ್ರಜಾಪ್ರಭುತ್ವದ ನಾಯಕರೆಂದು ಘೋಷಿಸುವ ಕುರಿತು ಮನವಿ

ಮಾನ್ಯರೇ,

ವಿಶ್ವ ಗುರು ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ. ಅವರು ಸ್ಥಾಪಿಸಿದ ಅನುಭವ ಮಂಟಪವು ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿದ ಪ್ರಜಾಪ್ರಭುತ್ವದ ಚರ್ಚಾ ವೇದಿಕೆಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿದೆ. ಅವರ ತತ್ವಗಳು ಭಾರತದ ಸಂವಿಧಾನದ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೂಲ ಆಶಯಗಳೊಂದಿಗೆ ಹೊಂದಿಕೆಯಾಗುತ್ತವೆ.

ಈ ಹಿನ್ನೆಲೆಯಲ್ಲಿ, ಬಸವಣ್ಣನವರ ಐತಿಹಾಸಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಗೌರವಿಸುವ ನಿಟ್ಟಿನಲ್ಲಿ,

1) ಬಸವಣ್ಣನವರ ಜಯಂತಿಯನ್ನು ರಾಷ್ಟ್ರಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ದೇಶಾದ್ಯಂತ ಆಚರಿಸಬೇಕು.
2) ಬಸವಣ್ಣನವರನ್ನು ರಾಷ್ಟ್ರೀಯ ಪ್ರಜಾಪ್ರಭುತ್ವದ ನಾಯಕರಾಗಿ ಘೋಷಿಸಬೇಕು.

ಅತ್ಯಂತ ಸೂಕ್ತ ಹಾಗೂ ಅಗತ್ಯವಾಗಿದೆ.

ಆದ್ದರಿಂದ, ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ. ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನ ಮಂತ್ರಿಗಳ ಗಮನಕ್ಕೆ ತರಲಾಗುತ್ತಿದೆ.

ಧನ್ಯವಾದಗಳು.

ನಿಮ್ಮ ವಿಶ್ವಾಸಪಾತ್ರರು,


ಸುನೀಲ್ ಕಾಂದೆ
ಅಧ್ಯಕ್ಷರು, ಬಸವ ಬ್ರಿಗೇಡ್
ಬೆಂಗಳೂರು

17/04/2026

3
3621 views

Comment