logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಕೂಡ್ಲಿಗಿ : ಪ ಪಂ ಗೆ ಭೇಟಿ ನೀಡಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಪಟ್ಟಣ ಪಂಚಾಯ್ತಿ ಕಚೇರಿಗೆ ಭೇ

*ಕೂಡ್ಲಿಗಿ : ಪ ಪಂ ಗೆ ಭೇಟಿ ನೀಡಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಪಟ್ಟಣ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿದರು. ಸ್ಥಳೀಯ ಮುಖಂಡರೊಡನೆ ಸಭೆ ಸೇರಿ , ಪಟ್ಟಣದಲ್ಲಿ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಸಿದರು. ತಹಶಿಲ್ದಾರರು ಹಾಗೂ ಪಪಂ ಆಡಳಿತಾಧಿಕಾರಿ ವಿ.ಕೆ.ನೇತ್ರಾವತಿರವರು , ಸರ್ಕಾರದ ನಿರ್ಧೇಶನದಂತೆ. ಪಪಂ ವತಿಯಿಂದ ಪಟ್ಟಣದಲ್ಲಿನ ನಾಗರೀಕರಿಗೆ. ಸರ್ಕಾರ ಜಾರಿ ತಂದಿರುವ ಸ್ವಯಂ ಜನಗಣತಿ ಯೋಜನೆ ಹಾಗೂ ಪೌತಿ ಖಾತೆ ಆಂದೋಲನ ಸೇರಿದಂತೆ , ವಿವಿದ ನಾಗರೀಕ ಸೇವಾ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ. ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ , ಸಿಬ್ಬಂದಿ ಸಹಯೋಗದೊಂದಿಗೆ ತಮ್ಮ ಕಾರ್ಯ ನಿರ್ವಹಣೆ ಕುರಿತು ವಿವರಿಸಿದರು.
ಪೌತಿ ಖಾತೆ ಆಂದೋಲನ ಹಾಗೂ ಸ್ವಯಂ ಗಣತಿ ಯೋಜನೆಯನ್ನು , ಸಂಪೂರ್ಣ ಯಶಸ್ವಿಯಾಗಿಸುವ ಧೇಯೋದ್ಧೇಶದಿಂದ ಪ್ರಾಮಾಣಿಕ ಯತ್ನ ನಡೆಸಿರುವುದನ್ನು ಅರ್ಥೈಸಿದರು. ಯೋಜನೆಯಗಳ ಬಗ್ಗೆ ಜನ ಜಾಗ್ರತೆ ಅಭಿಯಾನ , ಹಾಗೂ ಪ್ರಚಾರಾಂಧೋಲನ ಹಮ್ಮಿಕೊಂಡಿರುವುದರ ರೂಪು ರೇಶಗಳನ್ನು ಶಾಸಕರೆದರು ಪ್ರಸ್ತುತ ಪಡಿಸಿದರು.
ನಂತರ ಶಾಸಕರು ಸ್ಥಳೀಯ ಮುಖಂಡರೊಂದಿಗೆ , ಪಟ್ಟಣದಲ್ಲಿನ ಬೀದಿ ನಾಯಿ ಹಾವಳಿ ವರದಿ ಬಗ್ಗೆ , ಹಾಗೂ ನೀರಿನ ಸಮಸ್ಯೆ ಸೇರಿದಂತೆ. ಪಟ್ಟಣದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳ ಅಭಾವ , ಹಾಗೂ ಸಮಸ್ಯೆಗಳು ತಲೆದೋರದಂತೆ ಅಗತ್ಯ ಕ್ರಮ ಜರುಗಿಸುವ ಕುರಿತು. ಮತ್ತು ಇತರೆ ನಾಗಕರೀಕರ ಹಿತಾಸಕ್ತಿ ಮೇರೆಗೆ, ಹಮ್ಮಿಕೊಳ್ಳಬೇಕಿರುವ ಯೋಜನೆಗಳನ್ನು , ಸಮರ್ಪಕವಾಗಿ ಅನುಷ್ಟಾನಕ್ಕೆ ತರುವುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಸಭೆಯಲ್ಲಿ ತಹಶಿಲ್ದಾರರು ಹಾಗೂ ಪಪಂ ಆಡಳಿತಾಧಿಕಾರಿ ವಿ.ಕೆ.ನೇತ್ರಾವತಿ , ಪಪಂ ಮುಖ್ಯಾಧಿಕಾರಿ ಹಾಗೂ ಸಿಬ್ವಂದಿ ಹಾಜರಿದ್ದರು. ಪಪಂ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ಸೆೇರಿದಂತೆ ಅನೇಕ ಸದಸ್ಯರು , ಹಾಗೂ ಆರ್ಟಿಐ ಕಾರ್ಯಕರ್ತರು ಹೋರಾಟಗಾರರು , ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಹಿರಿಯನಾಗರೀಕರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*

0
2790 views

Comment