logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಮಾಂಜರಿ : ಚಿಕ್ಕೋಡಿ ಮಿರಜ ರಸ್ರೆಯು ಮಾಂಜರಿಯಿಂದ ಮಾಂಜರಿವಾಡಿಯವರೆಗೆ ಪೂರ್ಣ ಹದಗೆಟ್ಟಿದೆ, ರಸ್ತೆಯ ಮೇಲೆ ಎಲ್ಲಿ ನೋಡಿದರೂ ಗುಂಡಿಗಳೆ, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.*

*ಮಾಂಜರಿ : ಚಿಕ್ಕೋಡಿ ಮಿರಜ ರಸ್ರೆಯು ಮಾಂಜರಿಯಿಂದ ಮಾಂಜರಿವಾಡಿಯವರೆಗೆ ಪೂರ್ಣ ಹದಗೆಟ್ಟಿದೆ, ರಸ್ತೆಯ ಮೇಲೆ ಎಲ್ಲಿ ನೋಡಿದರೂ ಗುಂಡಿಗಳೆ, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.*

*ದಿನನಿತ್ಯ ಈ ರಸ್ತೆಯ ಮೂಲಕ ಸಾವಿರಾರು ವಾಹನಗಳು ಸಾಗುತ್ತವೆ, ಇಲ್ಲಿಯ ಹುಂಡಿಗಳಿಂದ ಮೇಲಿಂದ ಮೇಲೆ ಅಪಘಾತಗಳು ಆಗುತ್ತಲೇ ಇವೆ, ರಾತ್ರಿಯ ವೇಳೆಯಲ್ಲಿ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಸ್ಥಿತಿ ರದುರಾಗಿದೆ, ಜನಪ್ರತಿನಿಧಿಗಳು ದಿನಾಲು ಕೋಟಿ ಕೋಟಿ ಅಭಿವೃದ್ಧಿ ಅಂತಾ ಹೇಳ್ತಾನೇ ಇದ್ದಾರೆ, ಆದರೆ ಈ ರಸ್ತೆಯ ದುರಸ್ತಿ ಬಗ್ಗೆ ಮಾತನಾಡುವುದೇ ಇಲ್ಲ, ಮಹಾಮಾರ್ಗ ಆಗಲಿದೆ ಎಂದು ಹೇಳುವ ಅಧಿಕಾರಿಗಳು, ಅಲ್ಲಿಯವರೆಗೆ ರಸ್ತೆ ತೆರಿಗೆ ತುಂಬಿದ ವಾಹನಧಾರಕರು ಇಂತಹ ನರಕಯಾತನೆಯನ್ನು ಅನುಭವಿಸಬೇಕೇ ?, ಪರ್ಯಾಯ ರಸ್ತೆ ದುರುಸ್ತಿ ಯಾವಾಗ ಎಂಬ ಬಗ್ಗೆ ಜನರು ತಮ್ಮ ತಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ.*

*ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆಗೆ ಗಮನ ಹರಿಸಿ ಗುಂಡಿಗಳನ್ನು ತುಂಬುವ ವ್ಯವಸ್ಥೆ ಮಾಡಬೇಕು, ಇಲ್ಲವಾದರೆ ಬರುವ ದಿನಗಳಲ್ಲಿ ಮಾಂಜರಿ ಭಾಗದ ಗ್ರಾಮೀಣ ಜನರೊಂದಿಗೆ ಕೈಜೋಡಿಸಿ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಅವರು ಎಚ್ಚರಿಕೆ ನೀಡಿದ್ದಾರೆ.*

0
178 views

Comment