logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

*ಪತ್ರಿಕಾ ಪ್ರಕಟಣೆ* *ಸರ್ಕಾರಿ ಜಾಗ ಕಬಳಿಕೆ ವಿರುದ್ಧ ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಕಾನೂನು ಹೋರಾಟ* *ಬೆಂಗಳೂರು ಮಾರ್ಚ್ 23:* ಕೊತ್ತನೂರು ಗ್ರಾಮದ ಆರ್‌ಬಿಐ ಬಡಾವಣೆಯಲ್ಲಿ ಗ

*ಪತ್ರಿಕಾ ಪ್ರಕಟಣೆ*

*ಸರ್ಕಾರಿ ಜಾಗ ಕಬಳಿಕೆ ವಿರುದ್ಧ ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಕಾನೂನು ಹೋರಾಟ*

*ಬೆಂಗಳೂರು ಮಾರ್ಚ್ 23:* ಕೊತ್ತನೂರು ಗ್ರಾಮದ ಆರ್‌ಬಿಐ ಬಡಾವಣೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ)ಸೇರಿದ ಜಾಗವನ್ನು ಕೆಲವು ಕಿಡಿಗೇಡಿಗಳು ಸುಳ್ಳು ದಾಖಲೆ ಸೃಷ್ಟಿಸಿ ತಮ್ಮ ಕಬಳಿಕೆ ಮಾಡುತ್ತಿರುವುದನ್ನು ಸರಕಾರ ತಕ್ಷಣ ತಡೆಯಬೇಕೆಂದು ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಆಗ್ರಹಿಸಿದೆ.
ಪಾರ್ಕ್ ಗೆ ಸೇರಿದ ಜಾಗವನ್ನು ಕೆಲವು ವ್ಯಕ್ತಿಗಳು ಆಕ್ರಮವಾಗಿ ಕಬಳಿಕೆ ಮಾಡಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇದಕ್ಕೆ ಅನಧಿಕೃತವಾಗಿ ಜಿಬಿಎಯಿಂದ ಖಾತೆಯನ್ನು ಸಹ ಸೃಷ್ಟಿಸಿದ್ದಾರೆ. ಇದು ಸಾರ್ವಜನಿಕ ಆಸ್ತಿ ಎಂಬುದು ಸಾರ್ವಜನಿಕರಿಗೆ ಚೆನ್ನಾಗಿ ತಿಳಿದಿದ್ದು, ಕೆಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಹೆಸರು ದುರುಪಯೋಗ ಮಾಡಿಕೊಂಡು ಈ ರೀತಿಯಲ್ಲಿ ಕಬಳಕೆ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಮೇಲು ನೋಟಕ್ಕೆ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿದ್ದು, ರಾಜ್ಯ ಸರ್ಕಾರ ಕೂಡ ಪರೋಕ್ಷವಾಗಿ ಸಾಥ್ ನೀಡುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಕ್ರಮ ಜರುಗಿಸಬೇಕೆಂದು ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಜಿಬಿಎ ಬೆಂಗಳೂರು ದಕ್ಷಿಣ ವಲಯಕ್ಕೆ ದೂರು ನೀಡಿ ಆಗ್ರಹಿಸಿದೆ.

ಆರ್ ಬಿಐ ಬಡಾವಣೆಯ ಕಲ್ಯಾಣ ಸಂಘ ಸದಸ್ಯ ಉಮೇಶ್ ಮಾತನಾಡಿ, "ಸರ್ಕಾರಕ್ಕೆ ಬೇಕಿರುವ ಜಾಗವನ್ನು ಅನಧಿಕೃತರ ಹೆಸರಿಗೆ ಖಾತೆಯನ್ನು ಮಾಡಿಕೊಡಲಾಗಿದೆ. ಕಬ್ಜ ಮಾಡಿರುವ ಸ್ಥಳವನ್ನು ಜಿಬಿಎ ಕಾರ್ಯನಿರ್ವಾಹಕ ಅಭಿಯಂತರು ಕೂಡಲೇ ಕ್ರಮವಹಿಸಿ ಸಾರ್ವಜನಿಕರ ಹಿತಾಸಕ್ತಿಯಿಂದ ಸ್ಥಳವನ್ನು ಬಿಡಿಸಿಕೊಡಬೇಕು. ಅಲ್ಲದೆ, ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೆಕೆಂದು" ಆಗ್ರಹಿಸಿದ್ದಾರೆ.

"ಈ ಜಾಗವು ಸರಕಾರಕ್ಕೆ ಸೇರಿದ ಜಾಗವಾಗಿದೆ. ಆದರೆ, ಕೆಲವು ಖಾಸಗಿ ವ್ಯಕ್ತಿಗಳಾದ ಕಾಂತರಾಜು, ರವಿ ಮಳಿಮಠ್ ಪಾಟೀಲ್, ಹೇಮರಾಜ್ ಬೋಗಸ್ ದಾಖಲೆಗಳನ್ನು ಸೃಷ್ಟಿಮಾಡಿಕೊಂಡು ಜಾಗ ಕಬಳಿಕೆ ಮಾಡಿದ್ದಾರೆ. ಸಾರ್ವಜನಿಕರು ಪ್ರಶ್ನಿಸಿದರೆ, ಇದನ್ನು ಪ್ರಶ್ನಿಸಿದರೆ, ನಾವು ರಾಜಕೀಯ ಹಿನ್ನೆಲೆ ಉಳ್ಳವರು ಎಂದು ದರ್ಪ ತೋರಿಸುತ್ತಾರೆ. ಹೀಗಾಗಿ ಸರಕಾರ ಜಾಗವನ್ನು ತಮ್ಮ ಸಪರ್ದಿಗೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಖಾತೆ ಮಾಡು ನೋಂದಣಿ ಶುಲ್ಕ ಕಟ್ಟಬೇಕು. ಇದ್ಯಾವುದನ್ನು ಸಹ ಪಾವತಿಸಿಲ್ಲ. ನೇರಾ-ನೇರವಾಗಿ ಖಾತೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ."

ರಾಷ್ಟೀಯ ಮಾನವ ಹಕ್ಕುಗಳು ಮತ್ತು ರಾಜ್ಯ ಭಷ್ರಷ್ಟಾಚಾರ ವಿರೋಧಿ ಸಂಘಟನೆಯ ರಾಜ್ಯಕಾರ್ಯದರ್ಶಿ ಚೈತ್ರ,
"ಇಂದಿನ ದಿನ ಮಾನದಲ್ಲಿ ಎಲ್ಲ ದಾಖಲೆಗಳು ಸರಿ ಇದ್ದರೂ ಸಹ ಖಾತೆಗಳು ಮಾಡಿಕೊಡುತ್ತಿಲ್ಲ. ಇಂತಹ ವೇಳೆಯಲ್ಲಿ ಇವರಿಗೆ ಹೇಗೆ ಖಾತೆ ಮಾಡಿಕೊಡಲು ಸಾಧ್ಯ? ಸರಕಾರದ ಜಾಗವನ್ನು ಅನ್ಯರ ಹೆಸರಿಗೆ ಹೇಗೆ ಮಾಡಿಕೊಡಲು ಸಾಧ್ಯ?, ಲಂಚದ ಆಸೆಗೆ ಬಿದ್ದು ಅಕ್ರಮವಾಗಿ ಖಾತೆ ಹೇಗೆ ಮಾಡುತ್ತಾರೆ.?" ಎಂದು ಪ್ರಶ್ನಿಸಿದ್ದಾರೆ.

2012ರಲ್ಲಿ ರಾಜ್ಯಪತ್ರದಲ್ಲಿ ಈ ಜಾಗವನ್ನು ಪಾರ್ಕ್ ಆಗಿ ನೋಂದಣಿ ಸಹ ಆಗಿದೆ. ಇದಾದಮೇಲೆ ಖಾಸಗಿ ವ್ಯಕ್ತಿಗಳು ಅತಿಕ್ರಮ ಮಾಡಲು ಹೇಗೆ ಸಾದ್ಯ?, ಕೋರ್ಟ್ ನಲ್ಲಿರುವ
ಜಾಗವನ್ನು ಹೇಗೆ ಖಾಸಗಿ ವ್ಯಕ್ತಿಗಳು ಆಕ್ರಮಿಸಲು ಸಾಧ್ಯ.? ಇದರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ.? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

5
967 views

Comment