ನಿನ್ನೆ ಬೆಂಗಳೂರಿನ ಗಾಂಧಿನಗರದ ಜಿಯಾನ್ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಭೆ ನಡೆಯಿತು. ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಸಭೆಗೆ ಅಧ್ಯಕ್ಷತೆ ವಹಿಸಿ ಸಂಘಟನೆಯ ಕಾರ್ಯಕ್ರಮಗಳು ಮತ್ತು ಮುಂದಿನ ಕಾರ್ಯಯೋಜನೆಯ ಬಗ್ಗೆ ಸ್ಪಷ್ಟವಾಗಿ ಮಾತುಕತೆ ನಡೆಸಿದರು. ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಹಾಜರಾಗಿ ಪ್ರಸ್ತುತ ಹಂತದಲ್ಲಿರುವ ಕೆಲಸಗಳು ಹಾಗೂ ಹೋರಾಟದ ದಿಕ್ಕನ್ನು ಕ್ರಮಬದ್ಧವಾಗಿ ಚರ್ಚಿಸಿದರು.
ಈ ಸಭೆಯಲ್ಲಿ ಜೂನ್ 4 ರಿಂದ 9 ರವರೆಗೆ ನಡೆಯಲಿರುವ “ಅಂತಾರಾಷ್ಟ್ರೀಯ ಕನ್ನಡ ಕನ್ನಡಿಗ ಜಾಗೃತಿ ಸಮಾವೇಶ” ಕುರಿತು ಸಹ ವಿವರಿಸಲಾಯಿತು. ಸಮಾವೇಶದ ಭಾಗವಾಗಿ ವಿಶ್ವಕನ್ನಡಿಗ ಪ್ರಶಸ್ತಿ ಪ್ರಧಾನ, ಕನ್ನಡ ಧರ್ಮ ಸಮಾವೇಶ, 6೦ ಸಾಧಕರ ಪುಸ್ತಕ ಬಿಡುಗಡೆ, ರಾಜ್ಯ ಮಟ್ಟದ ಜಾನಪದ ಸಂಗೀತ ಸ್ಪರ್ಧೆ, ರಾಜ್ಯ ಮಟ್ಟದ ನಾಟಕೋತ್ಸವ, ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಂದ ಕನ್ನಡ ಸಂಗೀತ ಸಂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂಬುದನ್ನು ಸಭೆಯಲ್ಲಿ ತಿಳಿಸಲಾಯಿತು.
ಇವೆಲ್ಲ ಕಾರ್ಯಕ್ರಮಗಳು ಕನ್ನಡದ ಗೌರವ ಹೆಚ್ಚಿಸುವುದು, ಜಗತ್ತಿನಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯ ಮೇಲೆ ಸೇರಿಸುವುದು ಮತ್ತು ಕನ್ನಡದ ಸಾಂಸ್ಕೃತಿಕ ಶಕ್ತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವುದು ಎಂಬ ಉದ್ದೇಶದಿಂದ ರೂಪಿಸಲಾಗಿದೆ ಎಂದು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#