logo

ಉತ್ತರ ಕರ್ನಾಟಕ ಜಾನಪದ ಪರಿಷತ್ (ರಿ.) ರಾಜ್ಯ ಸಂಸ್ಥೆಯ ಕರ್ನಾಟಕ ಬೆಂಗಳೂರು ಕಿರು ಪುಸ್ತಕ ಬಿಡುಗಡೆ ಸಮಾರಂಭವು ಸೌಂದರ್ಯ ಸ್ಕೂಲ್ ಅವನೂರು ಬಡಾವಣೆಯಲ್ಲಿ ನಡೆಯಿತು. ಉತ್ತರ ಕರ್

ಉತ್ತರ ಕರ್ನಾಟಕ ಜಾನಪದ ಪರಿಷತ್ (ರಿ.) ರಾಜ್ಯ ಸಂಸ್ಥೆಯ ಕರ್ನಾಟಕ ಬೆಂಗಳೂರು
ಕಿರು ಪುಸ್ತಕ ಬಿಡುಗಡೆ ಸಮಾರಂಭವು ಸೌಂದರ್ಯ ಸ್ಕೂಲ್ ಅವನೂರು ಬಡಾವಣೆಯಲ್ಲಿ ನಡೆಯಿತು. ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ಕಿರು ಪರಿಚಯ ಪುಸ್ತಕವನ್ನು ಈ ಸಂದರ್ಭದಲ್ಲಿ ಹೊರತರಲಾಯಿತು .ಈ ಕಿರು ಪುಸ್ತಕ ಇದರ ಉದ್ದೇಶ ವೇನಂದರೆ ಮುಂದಿನ ದಿನಮಾನಗಳಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವಂತಹ ಮತ್ತು ನಮ್ಮ ಉತ್ತರ ಕರ್ನಾಟಕ ಭಾಗದ ಜನರ ಮನೆ ಮನೆಗೆ ಹೋಗಿ ಪರಿಷತ್ತಿನ ಸದಸ್ಯತ್ವ ಮಾಡಿಸಿಕೊಳ್ಳುವುದರ ಗೋಸ್ಕರ ಈ ಕಿರು ಪುಸ್ತಕವನ್ನು ಹೊರ ತರಲಾಗಿದೆ. ನಮ್ಮ ಉತ್ತರ ಕರ್ನಾಟಕ ಜನರ ಮನೆ ಬಾಗಿಲಿಗೆ ಹೋಗಿ ಕಿರು ಪುಸ್ತಕ ತಲ್ಲುಪಿಸಿ ಅವರ ಒಂದೊಂದು ಸದಸ್ಯತ್ವ ಪಡೆದುಕೊಂಡು ಮುಂದಿನ ದಿನಗಳಲ್ಲಿ ಕರ್ನಾಟಕದ ತುಂಬೆಲ್ಲವೂ ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ಸದಸ್ಯತ್ವ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕೆಂದು ಈ ಉದ್ದೇಶವೇ ಇಟ್ಕೊಂಡು ಉತ್ತರ ಕರ್ನಾಟಕ ಜಾನಪದ ಪರಿಷತ್ ಒಂದು ಪುಸ್ತಕವನ್ನು ತರಲಾಗಿದೆ ಈ ಪುಸ್ತಕದ ಬಗ್ಗೆ ಕುರಿತು ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್ ಮೇಡೆಗಾರ ಕಿರು ಪುಸ್ತಕದ ಕುರಿತು ಒಂದು ನಾಲ್ಕು ಮಾತುಗಳು ಹಂಚಿಕೊಂಡಿದ್ದಾರೆ.ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ರಮೇಶ ಎಸ್ ಜಮಖಂಡಿ ಅವರು ಬೆಂಗಳೂರು ನಗರ ಜಿಲ್ಲಾ ಗೌರವ ಗೌರವಾಧ್ಯಕ್ಷರಾದ ಚೆನ್ನರೆಡ್ಡಿ ಚಿಟುಗುಪ್ಪ ಯವರು ಕಾರ್ಯಧ್ಯಕ್ಷರಾರ ಸಿದ್ದಣ್ಣ ಬಡಿಗೇರವರು ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಕುಂಬಾರ ಯವರು ಪ್ರಚಾರ ಸಮಿತಿಯ ಅಧ್ಯಕ್ಷರಾದ ಮುತ್ತುರಾಜ್ ಹಾಳಕಿಯವರು ಪರಿಷತ್ತಿನ ಪದಾಧಿಕಾರಿಗಳಾದ ವೀರಭದ್ರಪ್ಪ ಬಡಿಗೇರ. ಚಿತ್ರಶೇಖರ ಭೂತಾಳಿ. ಸುರೇಶ್ ದೊಡ್ಡಮನಿ. ಆನಂದ ಜೋಶಿ .ಮಲ್ಲಿಕಾರ್ಜುನ ಕೊಂಗಿ ಯವರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು..

11
1477 views