ಕೆ.ಆರ್.ಪೇಟೆ: ತಾಲೂಕಿನ ಕ್ರೀಡಾಸಕ್ತರಿಗೆ ಕಾಂಗ್ರೆಸ್ ಯುವ ಮುಖಂಡ ಶ್ಯಾಮ್ ಪ್ರಸಾದ್ ಸಹಕಾರಿಯಾಗಿ ನಿಂತಿದ್ದಾರೆ ಎಂದು ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸಹೊಳಲು ರಾಘು ತಿಳ
ಕೆ.ಆರ್.ಪೇಟೆ: ತಾಲೂಕಿನ ಕ್ರೀಡಾಸಕ್ತರಿಗೆ ಕಾಂಗ್ರೆಸ್ ಯುವ ಮುಖಂಡ ಶ್ಯಾಮ್ ಪ್ರಸಾದ್ ಸಹಕಾರಿಯಾಗಿ ನಿಂತಿದ್ದಾರೆ ಎಂದು ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸಹೊಳಲು ರಾಘು ತಿಳಿಸಿದರು.
ಪಟ್ಟಣದ ಪರಮಪೂಜ್ಯ ಡಾ: ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀ ಕ್ರೀಡಾಂಗಣ ಆವರಣದಲ್ಲಿ ರಾಯಲ್ ಸ್ಪೋರ್ಟ್ಸ್ ವತಿಯಿಂದ ಪ್ರೇಮಿಯರ್ ಲೀಗ್ ಸೀಸನ್ 2 ಕ್ರೀಡೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಟೀ ಶರ್ಟ್ ದಾನಿಯಾಗಿ ನೀಡಿದ ಯುವ ಮುಖಂಡ ಶ್ಯಾಮ್ ಪ್ರಸಾದ್ ರವರನ್ನು ಅವರು ನಿವಾಸದಲ್ಲಿ ಗೌರವಿಸಿ ಮಾತನಾಡಿದ ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ರಾಘವ ತಾಲೂಕಿನ ವಿವಿಧ ಕ್ರೀಡಾಪಟುಗಳಿಗೆ ಶ್ಯಾಮ್ ಪ್ರಸಾದ್ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ ಕ್ರೀಡಾ ಆಸಕ್ತಿ ಒಳಗೊಂಡಿರುವ ಯುವ ಮುಖಂಡರ ಗೌರವಿಸುವುದು ಕ್ರೀಡಾ ಅಭಿಮಾನಿಗಳ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡ ಅಜಯ್ ಕುಮಾರ್,ಬಾಬು,ಕಾರ್ತಿಕ್, ಜೈಕುಮಾರ್, ಧನುಷ್ ಗೌಡ, ಅನಿಲ್, ಪುನೀತ್,ಸಾಗರ್, ಸೇರಿದಂತೆ ಉಪಸ್ಥಿತರಿದ್ದರು
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*